ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ, ಮಹತ್ವದ ಕ್ರಮವಾಗಿ, 347 ಬ್ರೆತ್ ಅನಲೈಸರ್ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಮೂಲಕ ಕುಡುಕ ಬಸ್ ಚಾಲಕರ ಪತ್ತೆಗೆ ಮಹತ್ವದ ಕ್ರಮ ಕೈಗೊಂಡಿದೆ.
BREAKING NEWS: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಇ ಪಳನಿಸ್ವಾಮಿ ನೇಮಕ ಸರಿಯಲ್ಲ- ಮದ್ರಾಸ್ ಹೈಕೋರ್ಟ್
ಈ ಕುರಿತಂತೆ ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಮಗ್ರ ಕ್ರಿಯಾ ಯೋಜನೆಯ ಕ್ರಮದನ್ವಯ 209 ಲಕ್ಷಗಳ ವೆಚ್ಚದಲ್ಲಿ ಒಟ್ಟು 347 ಬ್ರೆತ್ ಅನಲೈಸರ್ ಗಳನ್ನು ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದಿದ್ದಾರೆ.
BIGG NEWS: ಅಯ್ಯಪ್ಪನ ಭಕ್ತರಿಗೆ ಗುಡ್ ನ್ಯೂಸ್; ಇಂದಿನಿಂದ 5 ದಿನ ಶಬರಿಮಲೆ ದೇಗುಲದ ಬಾಗಿಲು ಓಪನ್
ಅಂದಹಾಗೇ 209 ಲಕ್ಷ ವೆಚ್ಚದಲ್ಲಿ ಕೆ ಎಸ್ ಆರ್ ಟಿ ಸಿಗೆ 100, ಬಿಎಂಟಿಸಿ, ಕೆಕೆ ಆರ್ ಟಿಸಿ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ತಲಾ 60 ಹಾಗೂ ಸಾರಿಗೆ ಇಲಾಖೆಗೆ 67 ಬ್ರೆತ್ ಅನಲೈಸರ್ ಗಳನ್ನು ಖರೀದಿಸಲು ಅನುಮತಿಸಿದೆ.