ಬೆಂಗಳೂರು: 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ( Karnataka 2nd PUC Exam 2023 ) ಅನುತ್ತೀರ್ಣ ಹಾಗೂ ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು, ಪರೀಕ್ಷಾ ಶುಲ್ಕ ( Exam Fee ) ಸಂದಾಯ ಮಾಡಲು ಕೊನೆಯ ಬಾರಿಗೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ( Karnataka School Examination and Evaluation Board ) ಸುತ್ತೋಲೆ ಹೊರಡಿಸಲಾಗಿದೆ. ಪ್ರಕಟಿತ ಸುತ್ತೋಲೆಯಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಾಗೂ ಫಲಿತಾಂಶ ತಿರಸ್ಕರಿಸಿದಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶುಲ್ಕ ಸಂದಾಯಕ್ಕೆ ದಿನಾಂಕವನ್ನು ವಿಸ್ತರಿಸಿರುವುದಾಗಿ ತಿಳಿಸಿದೆ.
2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಪರೀಕ್ಷಾ ಶುಲ್ಕ ಸಂದಾಯಕ್ಕೆ ಇದು ಕೊನೆಯ ದಿನಾಂಕ ವಿಸ್ತರಣೆಯಾಗಿದೆ. ಅಭ್ಯರ್ಥಿಗಳು ಕಾಲೇಜಿಗೆ ಶುಲ್ಕವನ್ನು ದಿನಾಂಕ 01-12-2022 ರಿಂದ 12-12-2022ರೊಳಗಾಗಿ ಸಲ್ಲಿಸುವಂತೆ ತಿಳಿಸಿದೆ.
ರೌಡಿ ಮೋರ್ಚಾ ಕಟ್ಟಿಕೊಂಡು ಈ ಸವಾಲು ಹಾಕಿದಿರಾ ಬಸವರಾಜ ಬೊಮ್ಮಾಯಿ ಅವರೇ?: ಟ್ವಿಟ್ ನಲ್ಲಿ ಕಾಂಗ್ರೆಸ್ ಪ್ರಶ್ನೆ
ಇನ್ನೂ ವಿದ್ಯಾರ್ಥಿಗಳು ಸಂದಾಯ ಮಾಡಿದಂತ ಶುಲ್ಕವನ್ನು ಕಾಲೇಜಿನವರು ಖಜಾನೆಗೆ ಸಂದಾಯವನ್ನು ದಿನಾಂಕ 13-12-2022ರೊಳಗೆ ಮಾಡಬೇಕು. ಅಲ್ಲದೇ ಆನ್ ಲೈನ್ ನಲ್ಲಿ ಅರ್ಜಿಯನ್ನು ದಿನಾಂಕ 13-12-2022ರೊಳಗೆ ಭರ್ತಿ ಮಾಡಿರಬೇಕು. ಸಂಬಂಧಸಿಂದ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಅರ್ಜಿಗಳನ್ನು ದಿನಾಂಕ 14-12-2022ರೊಳಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಅಂದಹಾಗೇ 2023ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ದಿನಾಂಕ 28-11-2022ರವರೆಗೆ ರೂ.700 ಗರಿಷ್ಠ ದಂಡ ಶುಲ್ಕವನ್ನು ಪಾವತಿಸಲು ಅವಕಾಶ ನೀಡಲಾಗಿತ್ತು. ಈಗ ಶುಲ್ಕದ ಜೊತೆಗೆ 500 ರೂ ದಂಡ ಶುಲ್ಕ ಮತ್ತು ರೂ.700 ದಂಡ ಶುಲ್ಕದೊಂದಿಗೆ ವಿಶೇಷ ದಂಡ ಶುಲ್ಕ ರೂ.1320ರೂಗಳನ್ನು ಸಂದಾಯ ಮಾಡಿ, ಪರೀಕ್ಷೆ ತೆಗೆದುಕೊಳ್ಳಬಹುದಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ
ಅಂಗವಿಕಲರಿಗೆ ಭರ್ಜರಿ ಗುಡ್ ನ್ಯೂಸ್: ಆರೋಗ್ಯಕ್ಕಾಗಿ ವಿಶೇಷ ವಿಮಾ ಯೋಜನೆ, ವಸತಿ ಯೋಜನೆಯಲ್ಲಿ ಶೇ.2ರಷ್ಟು ಮೀಸಲಾತಿ