ಬೆಂಗಳೂರು: ರಾಜ್ಯದಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಜಾನುವಾರುಗಳ ಮೇವಿಗಾಗಿ ಗೋಮಾಳ ಮೀಸಲಿಡುವುದು ಕಡ್ಡಾಯ. ಹಾಗಾದ್ರೇ ರಾಜ್ಯ ಸರ್ಕಾರದ ನಿಯಮಗಳಂತೆ ಉಚಿತ ಗೋಮಾಳವನ್ನು ಒದಗಿಸುವ ರೀತಿ ಹೇಗೆ ಎನ್ನುವ ಮಹತ್ವದ ಮಾಹಿತಿಯನ್ನು ಮುಂದೆ ಓದಿ.
ಈ ಕುರಿತಂತೆ ಕರ್ನಾಟಕ ಭೂ ಕಂದಾಯ ನಿಯಮಗಳು 19666, 1974ರ ಮಾರ್ಚ್ 7ರ ವರೆಗೆ ತಿದ್ದುಪಾಟಾದ ರೀತ್ಯಾ ನಿಯಮಗಳ ಅಳವಡಿಕೆ ಅನುಸಾರ ಪ್ರತಿ ನೂರು ಜಾನುವಾರಗಳಿಗೆ ಹನ್ನೆರಡು ಹೆಕ್ಟೇರುಗಳಂತೆ ಪ್ರತಿಯೊಂದು ಗ್ರಾಮದ ಜಾನುವಾರಿಗೂ ಸರ್ಕಾರಿ ಭೂಮಿಯನ್ನು ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇಡತಕ್ಕದ್ದು ಎಂದಿದೆ.
ಜಾನುವಾರುಗಳನ್ನು ಲೆಕ್ಕ ಹಾಕುವಾಗ ಆಡು, ಕುರಿ ಅಥವಾ ಕರು ಅಥವಾ ಹಸು ಅಥವಾ ಎಮ್ಮೆ ಇವುಗಳೊಂದನ್ನೂ ಒಂದೊಂದು ಜಾನುವಾರೆಂದು ಪರಿಗಣಿಸಬೇಕು ಎಂಬುದಾಗಿ ತಿಳಿಸಿದೆ.
ಸಂಬಂಧ ಪಟ್ಟ ಗ್ರಾಮದಲ್ಲಿ ಅಥವಾ ಪಕ್ಷದ ಗ್ರಾಮದಲ್ಲಿ ಗ್ರಾಮದ ಜಾನುವಾರು ಮೇಯುವುದಕ್ಕೆ ಅನುಕೂಲವಾಗುವಂತೆ ಸಾಕಷ್ಟು ಅರಣ್ಯ ಪ್ರದೇಶವಿದ್ದರೇ, ಅದರ ವಿಸ್ತೀರ್ಣಕ್ಕನುಗುಣವಾಗಿ ಉಚಿತ ಗೋಮಾಳವಾಗಿ ಪ್ರತ್ಯೇಕವಾಗಿ ಇದೆಯೆಂದು ಪ್ರದೇಶದ ವಿಸ್ತೀರಣವನ್ನು ಕಡಿಮೆ ಮಾಡಬಹುದಾಗಿದೆ.
ಗ್ರಾಮದಲ್ಲಿ ಯಾವ ಗೋಮಾಳವೂ ಇಲ್ಲದಿದ್ದರೇ ಅಥವಾ ಇರುವ ಭೂಮಿಯನ್ನು (1)ನೇ ಉಪ-ನಿಯಮದ ಮೇರೆಗೆ ನಿಯಮಿಸಿದ ವಿಸ್ತೀರ್ಣಕ್ಕಿಂತ ಕಡಿಮೆಯಾಗಿದ್ದರೇ, ಪಕ್ಷದ ಗ್ರಾಮದಲ್ಲಿ ದೊರೆಯುವ ಸರ್ಕಾರಿ ಭೂಮಿಯನ್ನು ಗೋಮಾಳವಾಗಿ ಪ್ರತ್ಯೇಕವಾಗಿಡುವುದರ ಮೂಲಕ ಆ ಕೊರತೆಯನ್ನು ತುಂಬುವುದು ಎಂದು ಹೇಳಿದೆ.
ಯಾವುದೇ ಗ್ರಾಮದಲ್ಲಿ ಉಚಿತ ಗೋಮಾಳವನ್ನು ಪ್ರ್ಯೇಕವಾಗಿಡುವುದರಲ್ಲಿ ಅವಶ್ಯಕವಾದ ಭೂಮಿಯ ವಿಸ್ತೀರಣವನ್ನು ಡೆಪ್ಯೂಟಿ ಕಮೀಷನರು ನಿರ್ಧರಿಸತಕ್ಕದ್ದು. ಗೋಮಾಳದ ವಿಸ್ತೀರಣವು (1)ನೇ ಉಪ ನಿಯಮದಲ್ಲಿ ನಿಯಮಿಸಿದ ಕನಿಷ್ಠ ಪ್ರಮಾಣಕ್ಕಿಂತ ಹೆಚ್ಚಾಗಿರಬೇಕೆಂದು ಡೆಪ್ಯೂಟಿ ಕಮೀಷನರು ಅಭಿಪ್ರಾಯಪಟ್ಟರೇ, ಅವರು ಅವಶ್ಯಕವಾಗಬಹುದಾದಂಥ ಹೆಚ್ಚಿನ ವಿಸ್ತೀರಣವನ್ನು ಹಾಗೆ ಪ್ರತ್ಯೇಕವಾಗಿ ಇಡುಬಹುದು ಎಂದು ಹೇಳಿದೆ.
ಇನ್ನೂ ಇದರ ಬದಲಾಗಿ ಈಗಾಗಲೇ ಪ್ರತ್ಯೇಕವಾಗಿಡಲಾಗಿರುವ ಪ್ರದೇಶವು ನಿಜವಾಗಿಯೂ ಅವಶ್ಯಕವಾಗಿರುವುದಕ್ಕಿಂತ ಬಹಳ ಹೆಚ್ಚಾಗಿದೆಯೆಂದು ಅಭಿಪ್ರಾಯ ಪಟ್ಟರೇ, ಅವರು ಅದನ್ನು ನಿಯಮಿಸಿದ ಕನಿಷ್ಠ ಪ್ರಮಾಣಕ್ಕೆ ಇಳಿಸಬಹುದು. ಗೋಮಾಳವನ್ನು ನಿಯಮಿತ ಪರಿಮಿತಿಗಿಂತ ಕಡಿಮೆಗೆ ಇಳಿಸಬಹುದೆಂದು ಅವರು ಪರಿಗಣಿಸಿದರೇ, ವಿಭಾಗಾಧಿಕಾರಿಯ ಪೂರ್ವಾನುಮತಿಯನ್ನು ಪಡೆದ ತರುವಾಯ ಮಾತ್ರವೇ ಅವರು ಹಾಗೆ ಮಾಡಬಹುದು ಎಂಬುದಾಗಿ ತಿಳಿಸಿದೆ.
ಇಂದೇ ರೇಷನ್ ಕಾರ್ಡ್ ತಿದ್ದುಪಡಿಗೆ ಕೊನೆಯ ದಿನ ವದಂತಿ: ಕಿಲೋ ಮೀಟರ್‌ಗಟ್ಟಲೇ ಕ್ಯೂ ನಿಂತ ಜನರು.!
BREAKING : ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ನಟ ‘ಸೈಫ್ ಅಲಿಖಾನ್’ ಡಿಸ್ಚಾರ್ಜ್ : ಫೋಟೋ ವೈರಲ್ | Saif Ali Khan