ನವದೆಹಲಿ : ನೀವು ಆನ್ ಲೈನ್’ನಲ್ಲಿ ಆದಾಯ ತೆರಿಗೆ ಪಾವತಿಸಿದ್ರೆ, ಈ ಸುದ್ದಿ ನಿಮಗೆ ಮುಖ್ಯವಾಗಲಿದೆ. ಅದ್ರಂತೆ, ನೀವು ತೆರಿಗೆ ಪಾವತಿಸುವ ಮೊದಲು, ನಿಮ್ಮ ಬ್ಯಾಂಕ್ ತೆರಿಗೆ ಪಾವತಿ ಸೌಲಭ್ಯದ ಮಾರ್ಗದೊಂದಿಗೆ ಸಂಪರ್ಕ ಹೊಂದಿದೆಯೇ ಅಥವಾ ಇಲ್ಲವೇ ಅನ್ನೋದನ್ನ ನೀವು ತಿಳಿದುಕೊಳ್ಳಬೇಕು. ವಾಸ್ತವವಾಗಿ, ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಇ-ಪೇ ತೆರಿಗೆಯ ಸೇವೆಯನ್ನ ಪ್ರಾರಂಭಿಸಿದೆ.
ಬ್ಯಾಂಕ್ ಟಿನ್-ಎನ್ಎಸ್ಡಿಎಲ್ ವೆಬ್ಸೈಟ್ನಿಂದ ಹೊಸ ಇ-ಫೈಲಿಂಗ್ ಪೋರ್ಟಲ್’ಗೆ ಬ್ಯಾಂಕ್ ಇಪೇಯನ್ನ ಲಿಂಕ್ ಮಾಡಲಾಗುತ್ತದೆ. ಅಂತಹ ಬ್ಯಾಂಕಿನ ಗ್ರಾಹಕರಿಗೆ ಮಾತ್ರ ಆನ್ ಲೈನ್ ಪಾವತಿಯ ಸೌಲಭ್ಯವನ್ನ ನೀಡಲಾಗುತ್ತದೆ.
ಹೊಸ ಆದಾಯ ತೆರಿಗೆ ಪೋರ್ಟಲ್’ಗೆ ಸೇರಿದ ಅನೇಕ ಬ್ಯಾಂಕುಗಳು ಇ-ಫೈಲಿಂಗ್ ಆದಾಯ ತೆರಿಗೆ ಪೋರ್ಟ’ಲ್ನಲ್ಲಿ ತೆರಿಗೆ ಪಾವತಿಯ ಸೌಲಭ್ಯವನ್ನ ಪಡೆಯುತ್ತಿವೆ. ಸಿಬಿಡಿಟಿ (ನೇರ ತೆರಿಗೆಗಳ ಕೇಂದ್ರೀಯ ಮಂಡಳಿ) ಪ್ರಕಾರ, ಅನೇಕ ಬ್ಯಾಂಕುಗಳು OLTAS ಇ-ಪಾವತಿ ವ್ಯವಸ್ಥೆಯಿಂದ ಟಿನ್- NSDL ವೆಬ್ಸೈಟ್’ಗೆ ಬದಲಾಯಿಸಿವೆ. ಹೊಸ ನೇರ ತೆರಿಗೆ ಪಾವತಿ ವ್ಯವಸ್ಥೆಯನ್ನ ಸಿಪಿಸಿ 2.0 – ಟಿನ್ 2.0ಗೆ ಪರಿಚಯಿಸಲಾಗಿದೆ. ಹೊಸ ಆದಾಯ ತೆರಿಗೆ ಪೋರ್ಟಲ್’ಗೆ ಸೇರದ ಅಂತಹ ಬ್ಯಾಂಕುಗಳ ಬಗ್ಗೆ ನಾವು ಇಲ್ಲಿ ನಿಮಗೆ ಹೇಳುತ್ತಿದ್ದೇವೆ. ಅಂದ್ರೆ, ಈ ಬ್ಯಾಂಕುಗಳು NSDL ಪೋರ್ಟಲ್’ನಲ್ಲಿ ಆದಾಯ ತೆರಿಗೆ ಪಾವತಿಗೆ ಲಭ್ಯವಿಲ್ಲ.
ಹೊಸ ಆದಾಯ ತೆರಿಗೆ ಪೋರ್ಟಲ್ ಸೇರದ ಈ ಬ್ಯಾಂಕುಗಳ ಪಟ್ಟಿ ಇಂತಿದೆ.!
ಆಕ್ಸಿಸ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಫೆಡರಲ್ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್.
ಮಾಧ್ಯಮ ವರದಿಗಳ ಪ್ರಕಾರ, ಹೊಸ ತೆರಿಗೆ ಪೋರ್ಟಲ್ ಸೇರಿದ ಬ್ಯಾಂಕುಗಳ ಗ್ರಾಹಕರಿಗೆ ಸಂಬಂಧಪಟ್ಟ ಬ್ಯಾಂಕ್ನಿಂದ ಮಾಹಿತಿ ನೀಡಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಅದ್ರಂತೆ, ಆದಾಯ ತೆರಿಗೆ ಇಲಾಖೆಯು ಐಸಿಐಸಿಐ ಬ್ಯಾಂಕ್’ನ್ನ ನೇರ ತೆರಿಗೆ ಪಾವತಿಗಾಗಿ ಹೊಸ ತೆರಿಗೆ ಮಾಹಿತಿ ಆವೃತ್ತಿ 2.0 ಗೆ ಸ್ಥಳಾಂತರಿಸಿದೆ ಎಂದು ಐಸಿಐಸಿಐ ಬ್ಯಾಂಕ್ ಖಾತೆದಾರರಿಗೆ ಕಳುಹಿಸಿದ ಸಂದೇಶದಲ್ಲಿ ತಿಳಿಸಿದೆ.
BIGG NEWS : ಉಡಾವಣೆಗೆ ಸಜ್ಜಾದ ಭಾರತದ ಮೊದಲ ‘ಖಾಸಗಿ ರಾಕೆಟ್’ ; ನಾಳೆ ನಭಕ್ಕೆ ನೆಗೆಯಲಿದೆ ‘ವಿಕ್ರಮ್-ಎಸ್’
ವಿಧಾನಸಭಾ ಚುನಾವಣೆ : ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ ಮಾಜಿ ಸಚಿವ ‘ಕಾಗೋಡು ತಿಮ್ಮಪ್ಪ’