Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ಹಾವು ಕಚ್ಚಿ ಸಾವು!

16/04/2026 11:42 AM

ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಮಾಣ ಪ್ರಕಟದ ತೀರ್ಪನ್ನು ಕೆಲಕಾಲ ಮುಂದೂಡಿದ ಕೋರ್ಟ್

16/04/2026 11:37 AM

SHOCKING : ‘ಮಗು ಬೇಕಿದ್ದರೆ ನಿನ್ನ ಹೆಂಡತಿಯನ್ನು ನನ್ನ ಬಳಿ ಕಳುಹಿಸು’: ನಾಸಿಕ್ ‘TCS’ ಉದ್ಯೋಗಿಗೆ ಅವಮಾನಿಸಿದ ಟೀಮ್ ಲೀಡರ್!

16/04/2026 11:36 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ: ಈ ರೈಲುಗಳ ಸೇವೆಯಲ್ಲಿ ಬದಲಾವಣೆ, ಸಂಚಾರ ರದ್ದು | Indian Railway
KARNATAKA

ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಮಾಹಿತಿ: ಈ ರೈಲುಗಳ ಸೇವೆಯಲ್ಲಿ ಬದಲಾವಣೆ, ಸಂಚಾರ ರದ್ದು | Indian Railway

By kannadanewsnow0925/06/2024 6:43 PM

ಬೆಂಗಳೂರು: ವಿವಿಧ ಕಾರಣಗಳಿಂದಾಗಿ ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿದ್ದರೇ, ಮತ್ತೆ ಕೆಲ ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ಇಲಾಖೆಯು ರದ್ದುಗೊಳಿಸಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೆಂಗೇರಿ-ಹೆಜ್ಜಾಲ ನಿಲ್ದಾಣಗಳ ನಡುವಿನ ರೈಲ್ವೆ ಲೆವೆಲ್ ಕ್ರಾಸಿಂಗ್ (ರೈಲ್ವೆ ಗೇಟ್) ನಂ. 15 ಮತ್ತು ಕೆಎಸ್‌ಆರ್ ಬೆಂಗಳೂರು-ಬೆಂಗಳೂರು ಕ್ಯಾಂಟ್ ನಿಲ್ದಾಣಗಳ ನಡುವಿನ ಸೇತುವೆ ಸಂಖ್ಯೆ 855ರಲ್ಲಿ ತಾತ್ಕಾಲಿಕ ಗರ್ಡರ್‌ಗಳನ್ನು ಅಳವಡಿಸುವ ಮತ್ತು ತೆರವುಗೊಳಿಸುವುದಕ್ಕಾಗಿ ಲೈನ್ ಬ್ಲಾಕ್ / ಪವರ್ ಬ್ಲಾಕ್ ಇರುವುದರಿಂದ ಈ ಕೆಳಗಿನ ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ವಿವರ ಈ ಕೆಳಗಿನಂತಿವೆ ಅಂತ ತಿಳಿಸಿದೆ.

ಎ) ರೈಲುಗಳ ಸಂಚಾರ ರದ್ದು:

  1. ಜುಲೈ 1, 2, 8 ಮತ್ತು 9, 2024 ರಂದು ರೈಲು ಸಂಖ್ಯೆ16021 ಡಾ. ಎಮ್‌ಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ದೈನಂದಿನ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದಾಗಲಿದೆ.
  2. ಜುಲೈ 2, 3, 9 ಮತ್ತು 10, 2024 ರಂದು ರೈಲು ಸಂಖ್ಯೆ 16022 ಮೈಸೂರು-ಡಾ ಎಮ್‌ಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 20623/20624 ಮೈಸೂರು-ಕೆಎಸ್‌ಆರ್ ಬೆಂಗಳೂರು-ಮೈಸೂರು ಮಾಲ್ಗುಡಿ ದೈನಂದಿನ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದಾಗಲಿವೆ.
  3. ಜುಲೈ 1 ಮತ್ತು 8, 2024 ರಂದು ರೈಲು ಸಂಖ್ಯೆ 16219 ಚಾಮರಾಜನಗರ-ತಿರುಪತಿ ದೈನಂದಿನ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದಾಗಲಿದೆ.
  4. ಜುಲೈ 2 ಮತ್ತು 9, 2024 ರಂದು ರೈಲು ಸಂಖ್ಯೆ 16203/16204 ಡಾ ಎಮ್‌ಜಿಆರ್ ಚೆನ್ನೈ ಸೆಂಟ್ರಲ್-ತಿರುಪತಿ-ಡಾ ಎಮ್‌ಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 16220 ತಿರುಪತಿ-ಚಾಮರಾಜನಗರ ದೈನಂದಿನ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 06267 ಅರಸೀಕೆರೆ-ಮೈಸೂರು ದೈನಂದಿನ ಪ್ಯಾಸೆಂಜರ್ ಸ್ಪೆಷಲ್, ರೈಲು ಸಂಖ್ಯೆ 06269 ಮೈಸೂರು-ಎಸ್‌ಎಂವಿಟಿ ಬೆಂಗಳೂರು ದೈನಂದಿನ ಪ್ಯಾಸೆಂಜರ್ ಸ್ಪೆಷಲ್, ರೈಲು ಸಂಖ್ಯೆ 06560 ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ಸ್ಪೆಷಲ್, ರೈಲು ಸಂಖ್ಯೆ 06270 ಎಸ್‌ಎಂವಿಟಿ ಬೆಂಗಳೂರು-ಮೈಸೂರು ದೈನಂದಿನ ಪ್ಯಾಸೆಂಜರ್ ಸ್ಪೆಷಲ್ ಮತ್ತು ರೈಲು ಸಂಖ್ಯೆ 12658 ಕೆಎಸ್‌ಆರ್ ಬೆಂಗಳೂರು-ಡಾ ಎಮ್‌ಜಿಆರ್ ಚೆನ್ನೈ ಸೆಂಟ್ರಲ್ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದಾಗಲಿವೆ.
  5. ಜುಲೈ 3 ಮತ್ತು 10, 2024 ರಂದು ರೈಲು ಸಂಖ್ಯೆ 06268 ಮೈಸೂರು-ಅರಸೀಕೆರೆ ದೈನಂದಿನ ಪ್ಯಾಸೆಂಜರ್ ಸ್ಪೆಷಲ್, ರೈಲು ಸಂಖ್ಯೆ 06559 ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು ಸ್ಪೆಷಲ್, ರೈಲು ಸಂಖ್ಯೆ 01763 ಕೆಎಸ್‌ಆರ್ ಬೆಂಗಳೂರು-ಚನ್ನಪಟ್ಟಣ ಮೆಮು ಸ್ಪೆಷಲ್ ಮತ್ತು ರೈಲು ಸಂಖ್ಯೆ 12657 ಡಾ ಎಮ್‌ಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದಾಗಲಿವೆ.

ಬಿ) ರೈಲುಗಳ ಸಂಚಾರ ಭಾಗಶಃ ರದ್ದು:

  1. ಜುಲೈ 2 ಮತ್ತು 9 ರಂದು ಮೈಸೂರು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06526 ಮೈಸೂರು-ಕೆಎಸ್‌ಆರ್ ಬೆಂಗಳೂರು ಮೆಮು ಸ್ಪೆಷಲ್ ಚನ್ನಪಟ್ಟಣ – ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
  2. ಜುಲೈ 2 ಮತ್ತು 9 ರಂದು ಡಾ ಎಮ್‌ಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12657 ಡಾ ಎಮ್‌ಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ರೈಲು ವೈಟ್‌ಫೀಲ್ಡ್ – ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
  3. ಜುಲೈ 2 ಮತ್ತು 9 ರಂದು ಹಜೂರ್ ಸಾಹಿಬ್ ನಾಂದೇಡ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ16594 ಹಜೂರ್ ಸಾಹಿಬ್ ನಾಂದೇಡ್-ಕೆಎಸ್‌ಆರ್ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲು ಯಲಹಂಕ-ಕೆಎಸ್‌ಆರ್ ಬೆಂಗಳೂರುನಿಲ್ದಾಣಗಳ ನಡುವಿನ ಸಂಚಾರ ಭಾಗಶಃ ರದ್ದುಗೊಳಿಸಲಾಗುತ್ತಿದೆ.
  4. ಜುಲೈ 2 ಮತ್ತು 9 ರಂದು ಹೊಸಪೇಟೆ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 06244 ಹೊಸಪೇಟೆ-ಕೆಎಸ್‌ಆರ್ ಬೆಂಗಳೂರು ದೈನಂದಿನ ಪ್ಯಾಸೆಂಜರ್ ಸ್ಪೆಷಲ್ ರೈಲು ಯಶವಂತಪುರ-ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
  5. ಜುಲೈ 2 ಮತ್ತು 9 ರಂದು ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ17392 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲು ಯಶವಂತಪುರ-ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ.
  6. ಜುಲೈ 2 ಮತ್ತು 9 ರಂದು ಬಂಗಾರಪೇಟೆ ನಿಲ್ದಾಣದಿಂದ ಹೊರಡುವ ರೈಲು 16521 ಬಂಗಾರಪೇಟೆ-ಕೆಎಸ್‌ಆರ್ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲು ಬಯ್ಯಪ್ಪನಹಳ್ಳಿ ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ.
  7. ಜುಲೈ 3 ಮತ್ತು 10 ರಂದು ರೈಲು ಸಂಖ್ಯೆ 17391 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಕೆಎಸ್‌ಆರ್ ಬೆಂಗಳೂರು – ಯಶವಂತಪುರ ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ.
  8. ಜುಲೈ 3 ಮತ್ತು 10 ರಂದು ರೈಲು ಸಂಖ್ಯೆ 06243 ಕೆಎಸ್‌ಆರ್ ಬೆಂಗಳೂರು-ಹೊಸಪೇಟೆ ದೈನಂದಿನ ಪ್ಯಾಸೆಂಜರ್ ಸ್ಪೆಷಲ್ ರೈಲು ಕೆಎಸ್‌ಆರ್ ಬೆಂಗಳೂರು – ಯಶವಂತಪುರ ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ.

ಸಿ) ರೈಲುಗಳ ನಿಯಂತ್ರಣ:

  1. ಜುಲೈ 2 ಮತ್ತು 9 ರಂದು ಮುಂಬೈಯಿಂದ ಹೊರಡುವ ರೈಲು ಸಂಖ್ಯೆ 11301 ಸಿಎಸ್ಎಂಟಿ ಮುಂಬೈ-ಕೆಎಸ್‌ಆರ್ ಬೆಂಗಳೂರು ಉದ್ಯಾನ್ ದೈನಂದಿನ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗ ಮಧ್ಯೆ 30 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
  2. ಜುಲೈ 2 ಮತ್ತು 9 ರಂದು ಮೈಲಾಡುತುರೈಯಿಂದ ಹೊರಡುವ ರೈಲು ಸಂಖ್ಯೆ 16231 ಮೈಲಾಡುತುರೈ-ಮೈಸೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗ ಮಧ್ಯೆ 15 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
  3. ಜುಲೈ 2 ಮತ್ತು 9 ರಂದು ಮುರುಡೇಶ್ವರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16586 ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲನ್ನು ಮಾರ್ಗ ಮಧ್ಯೆ 15 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
  4. ಜುಲೈ 2 ಮತ್ತು 9 ರಂದು ತಾಳಗುಪ್ಪದಿಂದ ಪ್ರಾರಂಭವಾಗುವ ರೈಲು ಸಂಖ್ಯೆ 16228 ತಾಳಗುಪ್ಪ-ಮೈಸೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲನ್ನು ನಾಯಂಡಹಳ್ಳಿ ನಿಲ್ದಾಣದಲ್ಲಿ 10 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

ಡಿ) ರೈಲು ತಡವಾಗಿ ಪ್ರಾರಂಭ / ಮಾರ್ಗ ಬದಲಾವಣೆ:

  1. ಜುಲೈ 2 ಮತ್ತು 9 ರಂದು ರೈಲು ಸಂಖ್ಯೆ 16593 ಕೆಎಸ್‌ಆರ್ ಬೆಂಗಳೂರು-ಹಜೂರ್ ಸಾಹಿಬ್ ನಾಂದೇಡ್ ದೈನಂದಿನ ಎಕ್ಸ್‌ಪ್ರೆಸ್‌ ರೈಲು ಕೆಎಸ್‌ಆರ್ ಬೆಂಗಳೂರಿನಿಂದ 80 ನಿಮಿಷ ತಡವಾಗಿ ಪ್ರಾರಂಭವಾಗಲಿದೆ ಮತ್ತು ಈ ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ, ಯಲಹಂಕ ಮಾರ್ಗದ ಮೂಲಕ ಸಂಚರಿಸಲಿದೆ, ಹೀಗಾಗಿ ಬೆಂಗಳೂರಿನ ಕ್ಯಾನ್ಟೋನ್‌ಮೆಂಟ್‌ನಲ್ಲಿ ನಿಲುಗಡೆ ಇರುವುದಿಲ್ಲ.
  2. ಜುಲೈ 2 ಮತ್ತು 9 ರಂದು ಲೋಕಮಾನ್ಯ ತಿಲಕ್ ಟರ್ಮಿನಸ್ ದಿಂದ ಹೊರಡುವ ರೈಲು ಸಂಖ್ಯೆ 11013 ಲೋಕಮಾನ್ಯ ತಿಲಕ್ ಟರ್ಮಿನಸ್-ಕೊಯಮತ್ತೂರು ದೈನಂದಿನ ಎಕ್ಸ್‌ಪ್ರೆಸ್‌ ರೈಲು ಗೌರಿಬಿದನೂರು, ಬಯ್ಯಪ್ಪನಹಳ್ಳಿ, ಎಸ್‌ಎಂವಿಟಿ ಬೆಂಗಳೂರು, ಬಯ್ಯಪ್ಪನಹಳ್ಳಿ ಮತ್ತು ಹೊಸೂರು ಮಾರ್ಗದ ಮೂಲಕ ಸಂಚರಿಸಲಿದೆ, ಹೀಗಾಗಿ ಬೆಂಗಳೂರು ಪೂರ್ವ, ಬೆಂಗಳೂರು ಕ್ಯಾನ್ಟೋನ್‌ಮೆಂಟ್ ಮತ್ತು ಕೆಎಸ್‌ಆರ್ ಬೆಂಗಳೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಈ ರೈಲು ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆ ಹೊಂದಿರಲಿದೆ.

BREAKING: ದೆಹಲಿ CM ಅರವಿಂದ್ ಕೇಜ್ರಿವಾಲ್‌ಗೆ ಜೈಲೇಗತಿ, ಜಾಮೀನು ಆದೇಶಕ್ಕೆ ದೆಹಲಿ ಹೈಕೋರ್ಟ್‌ ತಡೆ

BREAKING: ‘ರಾಜ್ಯ ಸರ್ಕಾರ’ದಿಂದ 2024-25ನೇ ಸಾಲಿನ ‘ಸರ್ಕಾರಿ ನೌಕರರ ವರ್ಗಾವಣೆ’ಗೆ ಮಾರ್ಗಸೂಚಿ ಪ್ರಕಟ | Transfer Guidlines

Share. Facebook Twitter LinkedIn WhatsApp Email

Related Posts

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ಹಾವು ಕಚ್ಚಿ ಸಾವು!

16/04/2026 11:42 AM1 Min Read

ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಮಾಣ ಪ್ರಕಟದ ತೀರ್ಪನ್ನು ಕೆಲಕಾಲ ಮುಂದೂಡಿದ ಕೋರ್ಟ್

16/04/2026 11:37 AM1 Min Read

ALERT : `PM ಲೋನ್ ಸ್ಕೀಮ್’ ಹೆಸರಲ್ಲಿ ಭಾರಿ ವಂಚನೆ: ಈ ತಪ್ಪು ಮಾಡಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಖಾತೆ.!

16/04/2026 11:21 AM2 Mins Read
Recent News

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ಹಾವು ಕಚ್ಚಿ ಸಾವು!

16/04/2026 11:42 AM

ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಮಾಣ ಪ್ರಕಟದ ತೀರ್ಪನ್ನು ಕೆಲಕಾಲ ಮುಂದೂಡಿದ ಕೋರ್ಟ್

16/04/2026 11:37 AM

SHOCKING : ‘ಮಗು ಬೇಕಿದ್ದರೆ ನಿನ್ನ ಹೆಂಡತಿಯನ್ನು ನನ್ನ ಬಳಿ ಕಳುಹಿಸು’: ನಾಸಿಕ್ ‘TCS’ ಉದ್ಯೋಗಿಗೆ ಅವಮಾನಿಸಿದ ಟೀಮ್ ಲೀಡರ್!

16/04/2026 11:36 AM

BREAKING : ಲೋಕಸಭೆಯಲ್ಲಿ ಮಹತ್ವದ ‘ಕ್ಷೇತ್ರ ಮರುವಿಂಗಡಣೆ ಮಸೂದೆ’ ಮಂಡಿಸಿದ ಅಮಿತ್ ಶಾ |Delimitation Bill

16/04/2026 11:30 AM
State News
KARNATAKA

BREAKING : ಶಿವಮೊಗ್ಗದಲ್ಲಿ ಘೋರ ದುರಂತ : ಮನೆ ಮುಂದೆ ಆಟವಾಡುತ್ತಿದ್ದ ಮಗುವಿಗೆ ಹಾವು ಕಚ್ಚಿ ಸಾವು!

By kannadanewsnow0516/04/2026 11:42 AM KARNATAKA 1 Min Read

ಶಿವಮೊಗ್ಗ : ಶಿವಮೊಗ್ಗದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಜಿಲ್ಲೆಯ ಸಾಗರದ ಎಸ್ ಎನ್ ನಗರದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ…

ಶಾಸಕ ವಿನಯ್ ಕುಲಕರ್ಣಿಗೆ ಶಿಕ್ಷೆ ಪ್ರಮಾಣ ಪ್ರಕಟದ ತೀರ್ಪನ್ನು ಕೆಲಕಾಲ ಮುಂದೂಡಿದ ಕೋರ್ಟ್

16/04/2026 11:37 AM

ALERT : `PM ಲೋನ್ ಸ್ಕೀಮ್’ ಹೆಸರಲ್ಲಿ ಭಾರಿ ವಂಚನೆ: ಈ ತಪ್ಪು ಮಾಡಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಖಾತೆ.!

16/04/2026 11:21 AM

BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ `ದೋಸೆ-ಇಡ್ಲಿ ಸಾಂಬಾರ್’ ಹಾಡು : ಬಿಸಿಸಿಐಗೆ ದೂರು ನೀಡಿದ CSK!

16/04/2026 11:09 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.