ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ( Electric vehicle ) ಬಳಕೆಗೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇವಿ –ಜಾಗೃತಿ ಪೋರ್ಟಲ್ (EV Awareness Portal) ಮತ್ತು ಬೆಂಗಳೂರು ನಗರವನ್ನು ಇವಿ ವಲಯನ್ನಾಗಿ ಪರಿವರ್ತಿಸುವ ದಿಕ್ಸೂಚಿ ವರದಿಯನ್ನು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ.
ಇವಿ ಪೋರ್ಟಲ್ ( EV Portal ) ಮತ್ತು ದಿಕ್ಸೂಚಿ ವರದಿಯನ್ನು ನೀತಿ ಆಯೋಗ, ರಾಜ್ಯ ಸರಕಾರ ಮತ್ತು ಬ್ರಿಟಿಷ್ ಸರಕಾರದ ಜಂಟಿ ಸಹಯೋಗದಲ್ಲಿ ರಚಿಸಲಾಗಿದೆ. ಕರ್ನಾಟಕದಲ್ಲಿ ವಿದ್ಯುತ್-ಚಲನಶೀಲತೆಯ(e-mobility) ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ, ರಾಜ್ಯ ಸರ್ಕಾರವು ಕರ್ನಾಟಕ ಇವಿ -ಜಾಗೃತಿ ಪೋರ್ಟಲ್ ಜನರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸಲಿದೆ.
ಸೊಳ್ಳೆಗಳ ಕಾಟಕ್ಕೆ ಹೇಳಿ ಗುಡ್ ಬೈ : ಕೀಟನಾಶಕ ಉಂಗುರ ತಯಾರಿಸಿದ ಜರ್ಮನ್ ವಿಜ್ಞಾನಿಗಳು
ಕರ್ನಾಟಕದಲ್ಲಿ ವಿದ್ಯುತ್ ವಾಹನಗಳ ಅಂಕಿ ಅಂಶಗಳ ಮಾಹಿತಿಗಳಿಗೆ www.evkarnataka.co.in ಜಾಲತಾಣವು ‘ಒನ್ ಸ್ಟಾಪ್ ಸೈಟ್ ಆಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ.
ವಿದ್ಯುತ್ ಚಲನಶೀಲತೆ ಕುರಿತು ಸಾರ್ವಜನಿಕರು ನಿರ್ದಿಷ್ಟ ಮಾಹಿತಿಯನ್ನು ಪೋರ್ಟಲ್ ನಲ್ಲಿ ಪಡೆಯಬಹುದಾಗಿದೆ. ಪೋರ್ಟಲ್ ಬಳಕೆದಾರರಿಗೆ ಅನುಕೂಲವಾಗಿರುತ್ತದೆ. ಹಾಗೂ ಇವಿ ಜಾಗೃತಿ ಪೋರ್ಟಲ್ ಮುಖಾಂತರ, ರಾಜ್ಯದ ಎಲ್ಲಾ ಬಳಕೆದಾರರು ರಾಜ್ಯ ಸರ್ಕಾರದ ಇವಿ ನೀತಿ, ರಾಜ್ಯದಲ್ಲಾಗುವ ಇವಿ ಸಂಭಂದಿತ ಪ್ರಮುಖ ಬೆಳವಣಿಗೆಗಳು, ಅಸ್ತಿತ್ವದಲ್ಲಿರುವ ಇವಿ-ಸ್ಟಾರ್ಟಪ್ ಪರಿಸರ ವ್ಯವಸ್ಥೆಗಳು ಹಾಗೂ ಇಲೆಕ್ಟ್ರಿಕ್ ವಾಹನ ಬಳಕೆ ಕುರಿತು ಉಪಯುಕ್ತ ಮಾಹಿತಿಯನ್ನು ಪೋರ್ಟಲ್ನಲ್ಲಿ ಪಡೆಯಬಹುದು.
ಗ್ರಾಹಕರು, ಇಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ, ರಾಜ್ಯ ಸರಕಾರದ ಬೆಂಬಲ ಸಹಾಯಧನ, ಚಾರ್ಜಿಂಗ್ ಸ್ಟೇಷನ್ ಮತ್ತು ಇನ್ನಿತ್ತರ ಸವಲತ್ತುಗಳ ಕುರಿತು ಮಾಹಿತಿಯನ್ನು ಇವಿ ಜಾಗೃತಿ ಪೋರ್ಟಲ್ ನೀಡಲಿದೆ.
ಬೆಳಗಾವಿಯಲ್ಲಿ ಯುವತಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಟ್ವಿಸ್ಟ್ : ಆಕೆಯನ್ನು ಆಸ್ಪತ್ರೆಗೆ ಕರೆ ತಂದ ಯುವಕ ಪರಾರಿ..!
ಇವಿ ದಿಕ್ಸೂಚಿ ವರದಿ
ಬ್ರಿಟನ್ ಮತ್ತು ಭಾರತದ ಇಲೆಕ್ಟ್ರಿಕ್ ಚಲನಶೀಲತೆಯ ವಿನ್ಯಾಸದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಈಗಾಗಲೇ ನೀತಿ ಆಯೋಗವು ಬ್ರಿಟನ್ ಸರಕಾರದ ಸಹಯೋಗದೊಂದಿಗೆ ಹಮ್ಮಿಕೊಂಡಿದೆ.
ಇಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜಿಸುವ ಸಲುವಾಗಿ ಮತ್ತು ಭವಿಷ್ಯದಲ್ಲಿ ಬೆಂಗಳೂರು ನಗರವನ್ನು ಇವಿ ವಲಯವನ್ನಾಗಿ ಪರಿವರ್ತಿಸುವ ಗುರಿಯನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇಲೆಕ್ಟ್ರಿಕ್ ವಾಹನ ಉತ್ಪಾದನೆಗೆ ಉತ್ತೇಜನ ನೀಡುವುದರ ಜತೆಗೆ 2030 ರ ವೇಳೆಗೆ ಕರ್ನಾಟಕದಲ್ಲಿ 31000 ಕೋಟಿ ಇವಿ ವಲಯದಲ್ಲಿ ಹೂಡಿಕೆ ಮಾಡಿ, 55000 ಉದ್ಯೋಗವಕಾಶ ನೀಡುವುದು ವರದಿಯ ಮುಖ್ಯ ಉದ್ದೇಶಗಳಲ್ಲೊಂದಾಗಿದೆ.
ಇವಿ ಚಾರ್ಜಿಂಗ್ ಸ್ಟೇಷನ್
ಬೆಸ್ಕಾಂ ಈಗಾಗಲೇ 320 ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಿದ್ದು, ಬೆಂಗಳೂರು ನಗರವನ್ನು ಮುಂಬರುವ ದಿನಗಳಲ್ಲಿ ಇವಿ ರಾಜಧಾನಿಯನ್ನಾಗಿ ಪರಿವರ್ತಿಸುವತ್ತ ಮಹತ್ವದ ಹೆಜ್ಜೆ ಇರಿಸಿದೆ.
ಬೆಸ್ಕಾಂ ಇವಿ ಮಿತ್ರ ಆಪ್
ಇವಿ ಚಾರ್ಜಿಂಗ್ ಸ್ಟೇಷನ್ ಗಳ ( EV Charging Station ) ಕುರಿತು ಸಾರ್ವಜನಿಕರಿಗೆ ಸಮಗ್ರ ಮಾಹಿತಿ ನೀಡಲು ಬೆಸ್ಕಾಂ ( BESCOM ) ರೂಪಿಸಿರುವ ಇವಿ ಮಿತ್ರ ಆಪ್ ( ( EV Mithra App ) ಇವಿ ಚಾರ್ಜಿಂಗ್ ಸ್ಟೇಷನ್ ಗಳ ಮಾಹಿತಿ ಇದೀಗ ಬೆರಳ ತುದಿಯಲ್ಲಿ ಲಭ್ಯ.
ಪರಿಸರ ಸ್ನೇಹಿ ಇವಿ ಬಳಸಿ, ಮಾಲಿನ್ಯಮುಕ್ತ ಪರಿಸರ ನಿರ್ಮಾಣಕ್ಕೆ ಸಹಕರಿಸಿ.
ಬೆಂಗಳೂರಿನಾದ್ಯಂತ ಬೆಸ್ಕಾಂನ ಅತ್ಯುತ್ತಮ, ಗ್ರಾಹಕಸ್ನೇಹಿ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಗ್ರಾಹಕರು ಇವಿ ಮಿತ್ರ ಮೊಬೈಲ್ ಅಪ್ಲಿಕೇಷನ್ ಮೂಲಕ ಚಾರ್ಜಿಂಗ್ ಕೇಂದ್ರಗಳ ವಿವರ ತಿಳಿಯಬಹುದಾಗಿದೆ.@mdbescom @BescomTa @BescomHelpline pic.twitter.com/oVqR0TZaE8
— Namma BESCOM (ನಮ್ಮ ಬೆಸ್ಕಾಂ) (@NammaBESCOM) October 3, 2022