ಕೆಎನ್ಎನ್ ಡಿಜಿಟಲ್ ಡೆಸ್ಕ್: ದೇಶಾದ್ಯಂತ ಜಾನುವಾರುಗಳಿಗೆ ಚರ್ಮ ಗಂಟು ಖಾಯಿಲೆ ( Lumpy Skin Disease ) ವ್ಯಾಪಕವಾಗಿ ಹಬ್ಬಿದೆ. ಈ ರೋಗದ ಹರಡುವಿಕೆಯಿಂದಾಗಿ ಅನೇಕ ಪ್ರಾಣಿಗಳು ಸಾವನ್ನಪ್ಪುತ್ತಿದ್ದಾವೆ. ರೋಗ ತಡೆಗಟ್ಟುವಿಕೆಯ ಬಗ್ಗೆ ಪಶು ಸಂಗೋಪನಾ ಇಲಾಖೆಯಿಂದ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಡುವೆ ರೈತರಾದಂತವರು ತಮ್ಮ ಜಾನುವಾರುಗಳ ರಕ್ಷಣೆಗಾಗಿ ಮನೆಯಲ್ಲಿ ತಯಾರಿಸಿ, ಈ ಔಷಧವನ್ನು ನೀಡುವ ಮೂಲಕ ಚರ್ಮ ಗಂಟು ಖಾಯಿಲೆಯಿಂದ ಜಾನುವಾರುಗಳನ್ನು ರಕ್ಷಿಸಬಹುದಾಗಿದೆ.
BIGG NEWS : ಅಮೃತ ಕ್ರೀಡಾ ಯೋಜನೆಯಡಿ 75 ಕ್ರೀಡಾಪಟುಗಳಿಗೆ ಕ್ರೀಡಾ ತರಬೇತಿ : ಸಿಎಂ ಬಸವರಾಜ ಬೊಮ್ಮಾಯಿ
ಈ ಕುರಿತಂತೆ ಬೆಂಗಳೂರು ಸಹಾಕರ ಹಾಲು ಒಕ್ಕೂಟ ನಿಯಮಿತದಿಂದ, ರೈತರಿಗೆ ಅನುಕೂಲವಾಗುವಂತೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ಚರ್ಮ ಗಂಟು ಖಾಯಿಲೆ ಬಗ್ಗೆ ಮಾಹಿತಿ
ಚರ್ಮ ಗಂಟು ಖಾಯಿಲೆ ಎನ್ನುವುದು ವೈರಾಣು ಖಾಯಿಲೆಯಾಗಿದ್ದು, ಸೊಳ್ಳೆ ಕಡಿತದಿಂದ ಹರಡುತ್ತದೆ ಎಂಬುದಾಗಿ ಹೇಳಲಾಗುತ್ತಿದೆ.
BIGG NEWS : ಕರ್ನಾಟಕಕ್ಕೆ 2,900 ಕೋಟಿ ದಂಡ ವಿಧಿಸಿದ ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ’ : ಕಾರಣ ಏನು ಗೊತ್ತಾ?
ಚರ್ಮ ಗಂಟು ಖಾಯಿಲೆ ನಿಯಂತ್ರಣಕ್ಕೆ ಸ್ವಚ್ಛತೆ ಬಗ್ಗೆ ಕ್ರಮ ವಹಿಸಿ
ಅಂದಹಾಗೇ ಜಾನುವಾರುಗಳು ಸ್ವಚ್ಛತೆಯಿಲ್ಲದಂತ ಸ್ಥಳಗಳಲ್ಲಿ ಇದ್ದರೇ, ಸೊಳ್ಳೆಗಳ ಕಡಿತದ ಮೂಲಕ, ರೈತರ ಒಂದು ಹಸು, ಎತ್ತುಗಳಿಂದ ಮತ್ತೊಂದಕ್ಕೆ ಚರ್ಮ ಗಂಟು ರೋಗ ಹರಡಬಹುದಾಗಿದೆ. ಹೀಗಾಗಿ ತಪ್ಪದೇ ರೈತರು ಚರ್ಮ ಗಂಟು ರೋಗವನ್ನು ತಡೆಯಲು ರಾಸುಗಳ ಕೊಟ್ಟಿಗೆಯನ್ನು ಶುಚಿಯಾಗಿ ಇಡಬೇದು.
ರೋಗ ನಿಯಂತ್ರಣಕ್ಕೆ ಈ ಮನೆ ಮದ್ದು ಚಿಕಿತ್ಸಾ ( Home Remedies Treatment ) ವಿಧಾನ ಅನುಸರಿಸಿ
ಬಾಯಿಯಿಂದ ತಿನ್ನಿಸುವ ಔಷಧಿಯಾಗಿ ರೈತರು ತಮ್ಮ ರಾಸುಗಳಿಗೆ ಮನೆಯಲ್ಲೇ ತಯಾರಿಸಿ ಮಾಡುವಂತ ಔಷಧವಾಗಿ ಈ ಕೆಳಗಿನ ಪದಾರ್ಥ ಸೇರಿಸಿ ಔಷಧ ಮಾಡಿ ತಿನ್ನಿಸಬಹುದಾಗಿದೆ.
- ವೀಳ್ಯದೆಲೆ 100 ಗ್ರಾಂ
- ಮೆಣಸು 10 ಗ್ರಾಂ
- ಉಪ್ಪು 10 ಗ್ರಾಂ
- ಬೆಲ್ಲ – ಅರ್ಧ ಅಚ್ಚು
ಈ ಮೇಲ್ಕಂಡ ಎಲ್ಲಾ ಪದಾರ್ಥಗಳನ್ನು ರುಬ್ಬಿ, ಉಂಡೆ ಮಾಡಿ 3 ರಿಂದ 4 ಉಂಡೆಗಳನ್ನು ದಿನಕ್ಕೆ 2 ಬಾರಿ ನಿಮ್ಮ ರಾಸುಗಳಿಗೆ ತಿನ್ನಿಸುವುದರಿಂದ ಚರ್ಮ ಗಂಟು ಖಾಯಿಲೆಯನ್ನು ನಿಯಂತ್ರಣಕ್ಕೆ ತರಬಹುದಾಗಿದೆ.
ಇನ್ನೂ ಮೈಮೇಲಿನ ಗಾಯ, ಗಂಟಿಗೆ ಹಚ್ಚುವಂತ ಔಷಧವಾಗಿ ತಯಾರಿಸಲು, ಮನೆಯಲ್ಲಿಯೇ ಈ ಕೆಳಕಂಡ ಪದಾರ್ಥಗಳನ್ನು ಸೇರಿಸಿ ಔಷಧಿ ಮಾಡಿ.
- ಎಳ್ಳೆಣ್ಣ 500 ಮಿಲಿ
- ಹರಿಶಿಣ ಪುಡಿ 20 ಗ್ರಾಂ
- ಮೆಹಂದಿ(ಗೋರಂಡಿ) ಸೊಪ್ಪು -100 ಗ್ರಾಂ
- ತುಳಸಿ ಎಲೆ 100 ಗ್ರಾಂ
- ಬೇವಿನ ಸೊಪ್ಪು 100 ಗ್ರಾಂ
ಈ ಮೇಲ್ಕಂಡ ಎಲ್ಲಾ ಮಿಶ್ರಣವನ್ನು ಕುದಿಸಿ, ಆರಿದ ನಂತ್ರ ಮೈಮೇಲಿನ ಗಂಟುಗಳ ಮೇಲೆ ದಿನಕ್ಕೆ 3 ರಿಂದ 4 ಬಾರಿ ಹಚ್ಚುವುದರಿಂದ, ಚರ್ಮ ಗಂಟು ಖಾಯಿಲೆಯಿಂದ ಉಂಟಾದಂತ ಗಾಯವು ವಾಸಿಯಾಗಲಿದೆ.