ಬೆಳಗಾವಿ : ಒಕ್ಕಲಿಗರು, ಲಿಂಗಾಯಿತರಿಗೆ ಪ್ರತ್ಯೇಕ ಕೆಟಗರಿ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಅಸ್ತು ಎಂದಿದ್ದು, ಈ ಮೂಲಕ ಲಿಂಗಾಯತರು ಹಾಗೂ ಒಕ್ಕಲಿಗರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಒಕ್ಕಲಿಗರಿಗೆ ಎರಡು ಸಿ ಮೀಸಲಾತಿ ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ. 3 ಬಿ ನಲ್ಲಿದ್ದ ಲಿಂಗಾಯತರಿಗೆ 2 ಡಿ ನಲ್ಲಿ ಮೀಸಲಾತಿ ನೀಡಲಾಗುವುದು, ಹೊಸದಾಗಿ 2 ಸಿ ಮತ್ತು 3 ಡಿ ಕೆಟಗರಿ ಸೃಷ್ಟಿಸಲಾಗಿದ್ದು, 3 ಎ ನಲ್ಲಿದ್ದ ಒಕ್ಕಲಿಗರಿಗೆ 2 ಸಿ ಮೀಸಲಾತಿ ನೀಡಲಾಗುವುದು, ಇನ್ನೂ, 3 ಬಿನಲ್ಲಿದ್ದ ಲಿಂಗಾಯತರಿಗೆ 2 ಡಿ ಮೀಸಲಾತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಯಾವುದೇ ಕೆಟಗರಿಯ ಮೀಸಲಾತಿ ಬದಲಾವಣೆ ಮಾಡಿಲ್ಲ, ಒಕ್ಕಲಿಗರಿಗೆ 2 ಸಿ ಮೀಸಲಾತಿ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ, 2 ಎ ಮೀಸಲಾತಿ ಕೇಳಿದ್ದ ಪಂಚಮಸಾಲಿ ಸಮುದಾಯಕ್ಕೆ 2 ಡಿ ಕ್ಯಾಟಗರಿಯನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಮುಖಂಡರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ