ಬೆಂಗಳೂರು: ಕೆಲ ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯ ( Heavy Rain ) ಆರ್ಭಟ, ಇಂದಿನಿಂದ ಕಡಿಮೆಯಾಗಲಿದೆ. ರಾಜ್ಯದಲ್ಲಿ ಇಂದಿನಿಂದ ಮುಂದಿನ ಭಾನುವಾರದವರೆಗೆ ಅತಿ ಭಾರಿ ಮಳೆಯ ಸಾಧ್ಯತೆಗಳಿಲ್ಲ ಎಂಬುದಾಗಿ ಹವಾಮಾನ ಇಲಾಖೆ ( Weather department forecast ) ಮುನ್ಸೂಚನೆ ನೀಡಿದೆ.
ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿದ್ದು, ಇಂದು ಬೆಳಿಗ್ಗೆ 8.30ರ ತನಕ ಮಲೆನಾಡಿನ ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಕಾರಣ, ಆರೆಂಜ್ ಅಲರ್ಟ್ ನೀಡಿದೆ. ಇತರೆ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಕಾರಣ, ಯೆಲ್ಲೋ ಅಲರ್ಟ್ ನೀಡಿದೆ.
ಅಂದಹಾಗೇ ಕಳೆದ 24 ಗಂಟೆಯ ಅವಧಿಯಲ್ಲಿ ಒಳನಾಡಿನಲ್ಲಿ ಮುಂಗಾರು ಚುರುಕಾಗಿತ್ತು. ಈ ಪರಿಣಾಮ, ಉಡುಪಿಯ ಕೊಲ್ಲೂರು, ಉತ್ತರ ಕನ್ನಡದ ಕಾಸಲ್ ರಾಕ್, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ 19 ಸೆಂ. ಮೀ ಮಳೆಯಾಗಿದೆ.
ಶಿವಮೊಗ್ಗದ ಹುಂಚದಕಟ್ಟೆ 13 ಸೆ.ಮೀ, ಚಿಕ್ಕಮಗಳೂರಿನ ಕಳಸ 12, ಲಿಂಕನಮಕ್ಕಿ 11, ಉತ್ತರ ಕನ್ನಡದ ಗೇರುಸೊಬ್ಬ ಹಾಗೂ ಪೊನ್ನಂಪೇಟೆಯಲ್ಲಿ ತಲಾ 10 ಸೆಂ. ಮೀಟರ್ ಮಳೆಯಾಗಿದೆ.