ನವದೆಹಲಿ : ಮುಂದಿನ 5 ದಿನಗಳಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕಾರೈಕಾಲ್ ಮತ್ತು ಕೇರಳದಲ್ಲಿ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಗುರುವಾರ ಮುನ್ಸೂಚನೆ ನೀಡಿದೆ.
ನವೆಂಬರ್ 3 ಮತ್ತು 4 ರಂದು ತಮಿಳುನಾಡು ಮತ್ತು ಕೇರಳದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಅತಿ ಹೆಚ್ಚು ಮಳೆಯು ಸ್ಥಳೀಯವಾಗಿ ರಸ್ತೆಗಳ ಪ್ರವಾಹಕ್ಕೆ ಕಾರಣವಾಗಬಹುದು, ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲಬಹುದು. ಇದಿಂದ ವಾಹನ ದಟ್ಟನೆ ಸಂಭವಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
Heavy rainfall spell likely to continue over Tamilnadu, Puducherry & Karaikal and Kerala during next 5 days. pic.twitter.com/T9upPpvdJY
— India Meteorological Department (@Indiametdept) November 3, 2022
ಬುಧವಾರ ತಮಿಳುನಾಡಿನ ಹಲವು ಪ್ರದೇಶಗಳಲ್ಲಿ, ಅದರಲ್ಲೂ ಚೆನ್ನೈಲ್ಲಿ ಮಳೆಯಿಂದಾಗಿ ಶಾಲೆಗಳನ್ನು ಮುಚ್ಚಲಾಗಿತ್ತು.
ಮಳೆಯ ಮುನ್ಸೂಚನೆಗಳು
- ಮುಂದಿನ 5 ದಿನಗಳಲ್ಲಿ ತಮಿಳುನಾಡು, ಪುದುಚೇರಿ, ಕಾರೈಕಲ್ ಮತ್ತು ಕೇರಳದಲ್ಲಿ ಭಾರೀ ಮಳೆ ಮುಂದುವರಿಯಲಿದೆ.
- ನವೆಂಬರ್ 3-7 ರ ಅವಧಿಯಲ್ಲಿ ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಮತ್ತು ಮಾಹೆಯಲ್ಲಿ ಗುಡುಗು ಮತ್ತು ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ
- ನವೆಂಬರ್ 3 ಮತ್ತು 4 ರಂದು ದಕ್ಷಿಣ ತಮಿಳುನಾಡು ಮತ್ತು ದಕ್ಷಿಣ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
- ನವೆಂಬರ್ 5-7 ರ ಅವಧಿಯಲ್ಲಿ ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್ ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದಲ್ಲಿ ಸಾಧಾರಣ ಮಳೆ ಅಥವಾ ಹಿಮಪಾತ ಸಂಭವಿಸುವ ಸಾಧ್ಯತೆಯಿದೆ
- ನವೆಂಬರ್ 6 ಮತ್ತು 7 ರಂದು ಉತ್ತರಾಖಂಡದ ಮೇಲೆ ಸಾಧಾರಣ ಮಳೆ ಮತ್ತು ಹಿಮಪಾತ ಸಂಭವಿಸುವ ಸಾಧ್ಯತೆಯಿದೆ
- ನವೆಂಬರ್ 5-7 ರ ಅವಧಿಯಲ್ಲಿ ಪಂಜಾಬ್ನಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.
- ನವೆಂಬರ್ 6 ರಂದು ಕಾಶ್ಮೀರ ಕಣಿವೆಯ ಮೇಲೆ ಭಾರೀ ಮಳೆ ಅಥವಾ ಹಿಮಪಾತವಾಗುವ ಸಾಧ್ಯತೆಯಿದೆ.
Oil Purify Test ; ನಿಮ್ಮ ‘ಅಡುಗೆ ಎಣ್ಣೆ’ ಕಲುಷಿತವಾಗಿದ್ಯಾ.? ಈ ಸರಳ ಪ್ರಯೋಗದ ಮೂಲಕ ಕಂಡುಕೊಳ್ಳಿ