Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಸಾವಿರಾರು ಕಾಯಿಲೆಗಳಿಗೆ ಆಹ್ವಾನ ನೀಡುವ ‘ನಕಲಿ ಕುಡಿಯುವ ನೀರು’: ಅಸಲಿ ಬಾಟಲಿಯನ್ನು ಗುರುತಿಸುವುದು ಹೇಗೆ? ಇಲ್ಲಿವೆ ಟಿಪ್ಸ್!

ಸಾಗರದ ‘ನಗರಸಭೆ ಜಾಗ’ ಅಕ್ರಮ ಒತ್ತುವರಿ; ಬೆಲೆಬಾಳುವ ಆಸ್ತಿ ರಕ್ಷಣೆಯಲ್ಲಿ ‘ನಗರಾಡಳಿತ’ ತೀವ್ರ ನಿರ್ಲಕ್ಷ್ಯ

ಭಾರತದ ಭಯೋತ್ಪಾದನಾ ವಿರೋಧಿ ನೀತಿಯಲ್ಲಿ ಹೊಸ ಪರ್ವ: ‘ಆಪರೇಷನ್ ಸಿಂದೂರ್’ ಮೂಲಕ ಶತ್ರುಗಳಿಗೆ ಬಲವಾದ ಸಂದೇಶ | Operation Sindoor

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ‘ನಗರಸಭೆ ಜಾಗ’ ಅಕ್ರಮ ಒತ್ತುವರಿ; ಬೆಲೆಬಾಳುವ ಆಸ್ತಿ ರಕ್ಷಣೆಯಲ್ಲಿ ‘ನಗರಾಡಳಿತ’ ತೀವ್ರ ನಿರ್ಲಕ್ಷ್ಯ
KARNATAKA

ಸಾಗರದ ‘ನಗರಸಭೆ ಜಾಗ’ ಅಕ್ರಮ ಒತ್ತುವರಿ; ಬೆಲೆಬಾಳುವ ಆಸ್ತಿ ರಕ್ಷಣೆಯಲ್ಲಿ ‘ನಗರಾಡಳಿತ’ ತೀವ್ರ ನಿರ್ಲಕ್ಷ್ಯ

By ವಸಂತ್‌ ಬಿ ಈಶ್ವರಗೆರೆ

ಶಿವಮೊಗ್ಗ: ಸಾಗರ ನಗರದ ಹೃದಯಭಾಗದಲ್ಲಿರುವ ನಗರಸಭೆಯ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವೊಂದು ಅಕ್ರಮ ಒತ್ತುವರಿಯಾಗುತ್ತಿದ್ದರೂ, ನಗರಸಭೆ ಆಡಳಿತ ಮಂಡಳಿ ಮಾತ್ರ ಕಣ್ಣಿದ್ದೂ ಕುರುಡಾದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆಯ ಹಿನ್ನೆಲೆ:

ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಅಗ್ರಹಾರ ಸರ್ಕಲ್‌ಗೆ ಹೊಂದಿಕೊಂಡಿರುವ ರಾಘವೇಂದ್ರ ಸ್ವಾಮಿ ಮಠದ ಪಕ್ಕದಲ್ಲಿ ಸುಮಾರು 100 ರಿಂದ 200 ಅಡಿ ವಿಸ್ತೀರ್ಣದ ನಗರಸಭೆಗೆ ಸೇರಿದ ಜಾಗವಿದೆ. ಇತ್ತೀಚೆಗಷ್ಟೇ ಇಲ್ಲಿ ಬಿದ್ದಿದ್ದ ಮಾವಿನ ಮರಕ್ಕೆ ಬೆಂಕಿ ಹೊತ್ತಿಕೊಂಡಾಗ, ಅಗ್ನಿಶಾಮಕ ದಳದವರು ಮೂರು ಬಾರಿ ಕಾರ್ಯಾಚರಣೆ ನಡೆಸಿ ಬೆಂಕಿ ಆರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ನಗರಸಭೆಯ ಜಾಗವೀಗ ಗುಜರಿ ಮಾಲೀಕರ ಪಾಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಗುಜರಿ ಅಂಗಡಿಯ ಅಡ್ಡೆ:

ಸಾಗರ ನಗರಸಭೆಯ ಈ ಜಾಗವನ್ನು ಗುಜರಿ ಮಾಲೀಕರೊಬ್ಬರು ಅತಿಕ್ರಮಣ ಮಾಡಿಕೊಂಡಿದ್ದು, ಹಾಳಾದ ಹಳೆಯ ವಾಹನಗಳನ್ನು ತಂದು ಬೇಕಾಬಿಟ್ಟಿ ನಿಲ್ಲಿಸಿದ್ದಾರೆ. ಹಗಲು-ರಾತ್ರಿ ಎನ್ನದೆ ಇಲ್ಲಿ ವಾಹನಗಳ ಬಿಡಿಭಾಗಗಳನ್ನು ಕತ್ತರಿಸುವ (Scrap Cutting) ಕೆಲಸ ಅವ್ಯಾಹತವಾಗಿ ನಡೆಯುತ್ತಿದೆ.

  • ಅನಧಿಕೃತ ವ್ಯವಹಾರ: ಈ ಅಕ್ರಮ ಚಟುವಟಿಕೆಗೆ ನಗರಸಭೆಯ ಪರವಾನಗಿ ಇದೆಯೇ? ಅಥವಾ ಅಧಿಕಾರಿಗಳ ಮೌನ ಸಮ್ಮತಿ ಇದೆಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

  • ಒಳಬಾಡಿಗೆ ದಂಧೆ: ಅತಿಕ್ರಮಣದಾರರು ಈ ಸರ್ಕಾರಿ ಜಾಗವನ್ನು ಬೇರೊಬ್ಬರಿಗೆ ಒಳಬಾಡಿಗೆಗೆ ನೀಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ‘ಯಾರದೋ ಆಸ್ತಿ, ಇನ್ಯಾರಿಗೋ ಲಾಭ’ ಎನ್ನುವಂತಾಗಿದೆ ಇಲ್ಲಿನ ಪರಿಸ್ಥಿತಿ.

ಹೆಚ್ಚುತ್ತಿರುವ ಅನಾಹುತದ ಭೀತಿ:

ಇಲ್ಲಿ ಸಂಗ್ರಹಿಸಿಡಲಾಗಿರುವ ವಾಹನಗಳ ನಿರುಪಯುಕ್ತ ವಸ್ತುಗಳು ಮತ್ತು ಆಯಿಲ್ ಅಂಶಗಳಿಂದಾಗಿ ಪದೇ ಪದೇ ಬೆಂಕಿ ಆಕಸ್ಮಿಕಗಳು ಸಂಭವಿಸುತ್ತಿವೆ. ಮೊನ್ನೆ ನಡೆದ ಬೆಂಕಿ ಅವಘಡ ದೊಡ್ಡ ಅನಾಹುತವನ್ನೇ ತಂದೊಡ್ಡುವ ಸಾಧ್ಯತೆಯಿತ್ತು. ಜೊತೆಗೆ, ನಿರಂತರವಾಗಿ ನಡೆಯುವ ಬಿಡಿಭಾಗಗಳ ಕತ್ತರಿಸುವಿಕೆ ಕೆಲಸದಿಂದ ಸ್ಥಳೀಯ ನಿವಾಸಿಗಳಿಗೆ ತೀವ್ರ ಶಬ್ದ ಮಾಲಿನ್ಯದ ಕಿರಿಕಿರಿ ಉಂಟಾಗುತ್ತಿದೆ.

ಸಾರ್ವಜನಿಕರ ಆಗ್ರಹ ಮತ್ತು ಪ್ರತಿಭಟನೆಯ ಎಚ್ಚರಿಕೆ:

ನಗರದ ಮಧ್ಯಭಾಗದಲ್ಲೇ ಇರುವ ತನ್ನ ಆಸ್ತಿಯನ್ನು ಉಳಿಸಿಕೊಳ್ಳಲು ನಗರಸಭೆ ತಕ್ಷಣ ಮುಂದಾಗಬೇಕು. ಈ ಕೂಡಲೇ ಅತಿಕ್ರಮಣಗೊಂಡಿರುವ ಜಾಗವನ್ನು ತೆರವುಗೊಳಿಸಿ, ನಗರಸಭೆಯ ವಶಕ್ಕೆ ಪಡೆಯಬೇಕು ಎಂದು ಸ್ಥಳೀಯರು ವಿನಂತಿಸಿದ್ದಾರೆ. ಒಂದು ವೇಳೆ ನಗರಸಭೆ ನಿರ್ಲಕ್ಷ್ಯ ಮುಂದುವರಿಸಿದರೆ, ಈ ಭಾಗದ ಜನರು ಉಗ್ರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನಾದರೂ ಈ ಜಾಗದ ಮೇಲೆ ಶಾಶ್ವತ ಹಕ್ಕು ಸ್ಥಾಪಿಸುವ ಮುನ್ನ ಸಾಗರ ನಗರಸಭೆ ಎಚ್ಚೆತ್ತುಕೊಂಡು ತನ್ನ ಆಸ್ತಿಯನ್ನು ಕಾಪಾಡಿಕೊಳ್ಳಲಿ ಎಂಬುದು ನಾಗರಿಕರ ಆಶಯವಾಗಿದೆ. ಆ ನಿಟ್ಟಿನಲ್ಲಿ ಸಾಗರ ನಗರಸಭೆ ಆಯುಕ್ತರಾದಂತ ಹೆಚ್.ಕೆ ನಾಗಪ್ಪ ಅವರು ಕಾರ್ಯಪ್ರವೃತ್ತರಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

ಗಿಗ್ ಕಾರ್ಮಿಕರ ಬಾಳಿಗೆ ಆಸರೆಯಾದ ಕಾಂಗ್ರೆಸ್ ಸರ್ಕಾರ: ಚುನಾವಣೆ ಮುನ್ನ ನೀಡಿದ್ದ ಭರವಸೆ ಈಡೇರಿಕೆ

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 74 DYSP, 293 ಪಿಐ ವರ್ಗಾವಣೆ ಮಾಡಿ ಆದೇಶ

Share. Facebook Twitter LinkedIn WhatsApp Email

Related Posts

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 74 DYSP, 293 ಪಿಐ ವರ್ಗಾವಣೆ ಮಾಡಿ ಆದೇಶ

4 Mins Read

ಗಿಗ್ ಕಾರ್ಮಿಕರ ಬಾಳಿಗೆ ಆಸರೆಯಾದ ಕಾಂಗ್ರೆಸ್ ಸರ್ಕಾರ: ಚುನಾವಣೆ ಮುನ್ನ ನೀಡಿದ್ದ ಭರವಸೆ ಈಡೇರಿಕೆ

2 Mins Read

ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್

1 Min Read
Recent News

​ಸಾವಿರಾರು ಕಾಯಿಲೆಗಳಿಗೆ ಆಹ್ವಾನ ನೀಡುವ ‘ನಕಲಿ ಕುಡಿಯುವ ನೀರು’: ಅಸಲಿ ಬಾಟಲಿಯನ್ನು ಗುರುತಿಸುವುದು ಹೇಗೆ? ಇಲ್ಲಿವೆ ಟಿಪ್ಸ್!

ಸಾಗರದ ‘ನಗರಸಭೆ ಜಾಗ’ ಅಕ್ರಮ ಒತ್ತುವರಿ; ಬೆಲೆಬಾಳುವ ಆಸ್ತಿ ರಕ್ಷಣೆಯಲ್ಲಿ ‘ನಗರಾಡಳಿತ’ ತೀವ್ರ ನಿರ್ಲಕ್ಷ್ಯ

ಭಾರತದ ಭಯೋತ್ಪಾದನಾ ವಿರೋಧಿ ನೀತಿಯಲ್ಲಿ ಹೊಸ ಪರ್ವ: ‘ಆಪರೇಷನ್ ಸಿಂದೂರ್’ ಮೂಲಕ ಶತ್ರುಗಳಿಗೆ ಬಲವಾದ ಸಂದೇಶ | Operation Sindoor

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ಮಿಲಿಟರಿ ಮುಖ್ಯಸ್ಥರಿಗೆ ‘ಹೊಸ ಮಾರ್ಗಸೂಚಿ’ ನೀಡಿದ ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ!

State News
KARNATAKA

ಸಾಗರದ ‘ನಗರಸಭೆ ಜಾಗ’ ಅಕ್ರಮ ಒತ್ತುವರಿ; ಬೆಲೆಬಾಳುವ ಆಸ್ತಿ ರಕ್ಷಣೆಯಲ್ಲಿ ‘ನಗರಾಡಳಿತ’ ತೀವ್ರ ನಿರ್ಲಕ್ಷ್ಯ

By ವಸಂತ್‌ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಸಾಗರ ನಗರದ ಹೃದಯಭಾಗದಲ್ಲಿರುವ ನಗರಸಭೆಯ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವೊಂದು ಅಕ್ರಮ ಒತ್ತುವರಿಯಾಗುತ್ತಿದ್ದರೂ, ನಗರಸಭೆ ಆಡಳಿತ ಮಂಡಳಿ ಮಾತ್ರ ಕಣ್ಣಿದ್ದೂ…

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 74 DYSP, 293 ಪಿಐ ವರ್ಗಾವಣೆ ಮಾಡಿ ಆದೇಶ

ಗಿಗ್ ಕಾರ್ಮಿಕರ ಬಾಳಿಗೆ ಆಸರೆಯಾದ ಕಾಂಗ್ರೆಸ್ ಸರ್ಕಾರ: ಚುನಾವಣೆ ಮುನ್ನ ನೀಡಿದ್ದ ಭರವಸೆ ಈಡೇರಿಕೆ

ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.