ಮಂಗಳೂರು: ತುಳುನಾಡಿನ ದೈವಾರಾಧನೆ ಹೆಸರಿನಲ್ಲಿ ಮತ್ತಷ್ಟು ಸಿನಿಮಾ ತೆಗೆಯುವಂತ ಇಂಗಿತವನ್ನು ಅನೇಕರು ಕಾಂತಾರ ಚಿತ್ರದ ನಂತ್ರ ವ್ಯಕ್ತ ಪಡಿಸಿದ್ದಾರೆ ಎನ್ನಲಾಗುತ್ತದೆ. ಈ ಹಿನ್ನಲೆಯಲ್ಲಿ ದೈವಾರಾಧನೆ ಹೆಸರಿನಲ್ಲಿ ದುಡ್ಡು ಮಾಡುವವರ ವಿರುದ್ಧ ದೈವಾರಾಧಕರು ತೊಡೆತಟ್ಟಿ ನಿಂತಿದ್ದಾರೆ. ಅದೇ ದೈವಾರಾಧನೆ ಸಿನಿಮಾ ಮಾಡಿದ್ರೇ, ಮುಲಾಜಿಲ್ಲದೇ ವಿರೋಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸೂರ್ಯ ಮುದ್ರೆ ಮಾಡುವುದರಿಂದಾಗುವ ಲಾಭಗಳೇನು? ಇದನ್ನು ಮಾಡುವ ಸರಿಯಾದ ವಿಧಾನ ತಿಳಿಯಿರಿ | surya mudra
ಇನ್ಮುಂದೆ ವ್ಯಾಪಾರದ ಹೆಸರಿನಲ್ಲಿ ದೈವಾರಾಧನೆಯನ್ನು ನಡೆಸಿದ್ರೇ ಕಾನೂನು ಕ್ರಮ ಹಾಗೂ ವಿರೋಧವನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ದೇವಾರಾಧಕರು ಹೇಳಿದ್ದಾರೆ. ಅಲ್ಲದೇ ದೈವಾರಾಧನೆ ಸಿನಿಮಾ ಮಾಡಿದ್ರೇ ವಿರೋಧಿಸುವುದಾಗಿ ಹೇಳಿದ್ದಾರೆ.
ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟಿದ್ದೆ ಕಾಂಗ್ರೆಸ್: ಟ್ಟಿಟ್ ಮಾಡಿ ಕುಟುಕಿದ ಬಿಜೆಪಿ
ದೈವದ ಕೋಲಾ ಸೇವೆಯ ಹೆಸರಿನಲ್ಲಿ ಲಕ್ಷಾಂತರ ಲೂಟಿ ಮಾಡಿರೋದಾಗಿಯೂ ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನಾ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿಗಳು ಆರೋಪಿಸಲಾಗಿವೆ.
BIG NEWS: ರಾಜ್ಯದಲ್ಲಿ ಮತ್ತೆ ಶುರುವಾಯ್ತು ‘ಮೀಸಲಾತಿ ಮಹಾಯುದ್ಧ’: ಸರ್ಕಾರಕ್ಕೆ ‘ಒಕ್ಕಲಿಗ ಸಮುದಾಯ’ದ ಡೆಡ್ ಲೈನ್
ಇಂದು ಮಂಗಳೂರಿನ ಕುತ್ತಾರು ಬಳಿಯ ಕೊರಗಜ್ಜನ ಆದಿಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಮಿತಿಗಳು ಸಲ್ಲಿಸಿದವು. ಈ ಸಂದರ್ಭದಲ್ಲಿಯೇ ದೈವಾರಾಧಕರು ತುಳುನಾಡ ದೈವಾರಾಧನೆ ಹೆಸರಿನಲ್ಲಿ ದುಡ್ಡು ಮಾಡುವುದು ಸರಿಯಲ್ಲ ಎಂಬುದಾಗಿ ಕಿಡಿಕಾರಿದ್ದಾರೆ.