ಬೆಂಗಳೂರು : ಟೈಟಾಗಿ ಕುಡಿದು ಬಂದು ಕನ್ನಡ ಬರಲ್ಲ ಎಂದಿದ್ದಕ್ಕೆ ಅಂಗಡಿ ಕ್ಯಾಶಿಯರ್ ಮೇಲೆ ಕುಡುಕನೊಬ್ಬ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ವಿಜಯನಗರದ ಬಳಿ ಹಂಪಿ ನಗರದಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ 3 ಗಂಟೆಗೆ ಈ ಒಂದು ಘಟನೆ ನಡೆದಿದ್ದು, ಘಟನೆ ಕುರಿತಂತೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕುಡಿದು ಟೈಟ್ ಆಗಿ ಬಂದಿದ್ದ ವ್ಯಕ್ತಿ ತನಗೆ ಏನು ಬೇಕೋ ಅದನ್ನೆಲ್ಲ ಅಂಗಡಿಯಲ್ಲಿ ಆರ್ಡರ್ ಮಾಡಿದ್ದಾನೆ. ಈ ವೇಳೆ ಕ್ಯಾಶಿಯರ್ ದುಡ್ಡು ಪೇ ಮಾಡಿ ಎಂದು ಹೇಳಿದ್ದಾನೆ.
ಈ ವೇಳೆ ಕುಡುಕ ವ್ಯಕ್ತಿ ಕನ್ನಡ ಬರೋದಿಲ್ವ ಎಂದು ಕೇಳಿದಾಗ ಕ್ಯಾಶಿಯರ್ ಬರಲ್ಲ ಎಂದಿದ್ದಾನೆ. ಕೂಡಲೇ ಕ್ಯಾಶಿಯರ್ ಮೇಲೆ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಬಳಿಕ ಕನ್ನಡ ಬರಲ್ಲ ಅಂದರೆ ಕಲಿ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ತಿಳಿದುಬಂದಿದೆ.