Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರೈಲಿನಲ್ಲಿ ಖಾಲಿ ಸೀಟು ಹುಡುಕಲು ಟಿಟಿಇ ಬೆನ್ನ ಹಿಂದೆ ಅಲೆಯುವ ಅಗತ್ಯವಿಲ್ಲ! ಐಆರ್‌ಸಿಟಿಯ ಈ ಫೀಚರ್ ಮೂಲಕ ನೀವೇ ಪತ್ತೆಹಚ್ಚಿ!

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ.ಜಾರ್ಜ್

​ಬೇಸಿಗೆಯ ಬಿಸಿಲು ನಿಮ್ಮನ್ನು ಹೆಚ್ಚು ಕೋಪಿಷ್ಠರನ್ನಾಗಿಸುತ್ತಿದೆಯೇ? ತಾಪಮಾನ ಏರಿಕೆ ಮತ್ತು ಮಾನಸಿಕ ಒತ್ತಡದ ನಡುವಿನ ಸಂಬಂಧ ಇಲ್ಲಿದೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರೈತರೇ ಗಮನಿಸಿ : `PM ಕಿಸಾನ್ ಪ್ರೋತ್ಸಾಹಧನ’ ಪಡೆಯಲು ಕೇಂದ್ರ ಸರ್ಕಾರದ ಗುರುತಿನ ಸಂಖ್ಯೆ ಕಡ್ಡಾಯ !
KARNATAKA

ರೈತರೇ ಗಮನಿಸಿ : `PM ಕಿಸಾನ್ ಪ್ರೋತ್ಸಾಹಧನ’ ಪಡೆಯಲು ಕೇಂದ್ರ ಸರ್ಕಾರದ ಗುರುತಿನ ಸಂಖ್ಯೆ ಕಡ್ಡಾಯ !

By kannadanewsnow57

ಬೆಂಗಳೂರು : ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿದಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು, ಫೆಬ್ರವರಿ 01 2019ರ ಪೂರ್ವದಲ್ಲಿ ಜಮೀನು ಹೊಂದಿರುವ ರೈತರಿಗೆ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆ ವಾರ್ಷಿಕ ರೂ.6000/- ಪ್ರೋತ್ಸಾಹಧನವನ್ನುಇಲ್ಲಿಯವರೆಗೆ ಪಾವತಿಸಲಾಗುತ್ತಿದೆ. ಈ ಪ್ರೋತ್ಸಾಹಧನವನ್ನು ಮುಂದುವರೆಸಲು ಕರ್ನಾಟಕ ಸರ್ಕಾರದ ಪ್ರೂಟ್ಸ್ (FRUITS) ತಂತ್ರಾಂಶದ ಗುರುತಿನ ಸಂಖ್ಯೆಯಂತೆ ಕೇಂದ್ರ ಸರ್ಕಾರದ ಅಗ್ರಿಸ್ಟ್ಯಾಕ್ ಯೋಜನೆ ಅಡಿ ಗುರುತಿನ ಸಂಖ್ಯೆ (central farmer id) ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.

ಈಗಾಗಲೇ ರಾಜ್ಯ ಸರ್ಕಾರದ ಪ್ರೂಟ್ಸ್ ತಂತ್ರಾಂಶದಿಂದ ದತ್ತಾಂಶವನ್ನು ಹಂಚಿಕೆ ಮಾಡಿ ಕೆಲವು ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ರೈತರ ಗುರುತಿನ ಸಂಖ್ಯೆಯನ್ನು ಸೃಜಿಸಲಾಗಿರುತ್ತದೆ. ಆದರೆ ಹೆಚ್ಚಿನ ಪಿ.ಎಂ. ಕಿಸಾನ್ ಫಲಾನುಭವಿಗಳಿಗೆ ಕೇಂದ್ರದ ರೈತರ ಗುರುತಿನ ಸಂಖ್ಯೆಯನ್ನು ಸೃಜನೆ ಮಾಡಬೇಕಾಗಿರುತ್ತದೆ. ಇದಕ್ಕಾಗಿ ರೈತರ ಇ-ಕೆ.ವೈಸಿ ಎಲೆಕ್ಟ್ರಾನಿಕ್ ಒಪ್ಪಿಗೆ ಹಾಗೂ ಒಟಿಪಿ ಆಧಾರಿತ ಮೊಬೈಲ್ ಸಂಖ್ಯೆ ಆಧಾರ್ ಇ-ಸೈನ್ ದೃಢೀಕರಣವು ಕಡ್ಡಾಯವಾಗಿರುತ್ತದೆ.

ಈ ಸಂಬಂಧ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲಾ ಸರ್ವೆ ನಂಬರಿನ ಜಮೀನಿನ ವಿವರಗಳನ್ನು ಪ್ರೂಟ್ಸ್ ತಂತ್ರಾಂಶದಲ್ಲಿ ಸೇರ್ಪಡೆ ಮಾಡುವುದು ಮತ್ತು ಎಲ್ಲಾ ಜಮೀನಿನ ವಿವರಗಳನ್ನು ದಾಖಲಿಸಿರುವುದಾಗಿ ಪೋಷಣೆಯನ್ನೂ ಸಹ ಒಟಿಪಿ ಆಧಾರದ ಮೇಲೆ ಮಾಡಬೇಕಾಗಿರುತ್ತದೆ. ಕೇಂದ್ರದ ಗುರುತಿನ ನೋಂದಣಿ ಆಗದೆ ಇರುವ ಪಟ್ಟಿಯು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ಅಂತಹ ರೈತರು ತಮ್ಮ ಆಧಾರ್ ಕಾರ್ಡ್ ಗೆ ಜೋಡಣೆಯಾಗಿರುವ ಮೊಬೈಲ್ ನಂಬರಿನ ಮೊಬೈಲ್ ನ್ನು ಮತ್ತು ಪ್ರೂಟ್ಸ್ ತಂತ್ರಾಂಶದಲ್ಲಿ ಜೋಡಣೆಯಾಗಿರುವ ಮೊಬೈಲ್ ನಂಬರಿನ ಮೊಬೈಲ್ ನ್ನು ತೆಗೆದುಕೊಂಡು ರೈತ ಸಂಪರ್ಕ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ, ಮೇಲಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಕೊಂಡು ಕೇಂದ್ರದ ಗುರುತಿನ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗಿರುತ್ತದೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ. ಹಾಗೂ ಇದಾದ ನಂತರವೇ ಮುಂದಿನ ಕಂತಿನ ಪಿ.ಎಂ.ಕಿಸಾನ್ ಯೋಜನೆಯ ಪ್ರೋತ್ಸಾಹಧನ ಪಾವತಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗುತ್ತದೆ.

ಈ ಪ್ರಕ್ರಿಯೆ ಫೆಬ್ರವರಿ 01 2019ರ ಪೂರ್ವದಲ್ಲಿ ಜಮೀನು ಹೊಂದಿರುವ ರೈತರಿಗೆ ಮಾತ್ರ ಅನ್ವಯವಾಗುತ್ತದೆ. ಈ ದಿನಾಂಕದ ನಂತರ ಪಿ.ಎಂ.-ಕಿಸಾನ್ ಪ್ರೋತ್ಸಾಹಧನ ಪಡೆಯುತ್ತಿರುವ ರೈತರು ತಮ್ಮ ಹೆಸರಿನಲ್ಲಿರುವ ಜಮೀನನ್ನು ಮಾರಾಟ ಮಾಡಿದ್ದಲ್ಲಿ, ಅವರ ಹೆಸರಿನಲ್ಲಿ ಹಾಲಿ ಯಾವುದೇ ಜಮೀನು ಇಲ್ಲದಂತಹ ರೈತರಿಗೆ ಪಿ.ಎಂ. ಕಿಸಾನ್ ಪ್ರೋತ್ಸಾಹಧನ ಪಾವತಿಯನ್ನು ನಿಲ್ಲಿಸಲಾಗಿದೆ ಎಂದು ಬೆಂಗಳೂರು ನಗರ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Farmers take note: Central Government Identification Number is mandatory to avail `PM Kisan Incentive'!
Share. Facebook Twitter LinkedIn WhatsApp Email

Related Posts

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ.ಜಾರ್ಜ್

2 Mins Read

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

2 Mins Read

BIG NEWS: ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದ ಖಜಾನೆಗೆ ಕನ್ನ: ಅರ್ಚಕರು, ಸಿಬ್ಬಂದಿ ವಿರುದ್ಧ ದೂರು!

2 Mins Read
Recent News

ರೈಲಿನಲ್ಲಿ ಖಾಲಿ ಸೀಟು ಹುಡುಕಲು ಟಿಟಿಇ ಬೆನ್ನ ಹಿಂದೆ ಅಲೆಯುವ ಅಗತ್ಯವಿಲ್ಲ! ಐಆರ್‌ಸಿಟಿಯ ಈ ಫೀಚರ್ ಮೂಲಕ ನೀವೇ ಪತ್ತೆಹಚ್ಚಿ!

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ.ಜಾರ್ಜ್

​ಬೇಸಿಗೆಯ ಬಿಸಿಲು ನಿಮ್ಮನ್ನು ಹೆಚ್ಚು ಕೋಪಿಷ್ಠರನ್ನಾಗಿಸುತ್ತಿದೆಯೇ? ತಾಪಮಾನ ಏರಿಕೆ ಮತ್ತು ಮಾನಸಿಕ ಒತ್ತಡದ ನಡುವಿನ ಸಂಬಂಧ ಇಲ್ಲಿದೆ!

​ಏರ್ ಇಂಡಿಯಾ ವಿಮಾನ ದುರಂತ: ಸಂತ್ರಸ್ತ ಕುಟುಂಬಗಳ ಮೇಲೆ ಅಂತಿಮ ಪರಿಹಾರಕ್ಕಾಗಿ ಯಾವುದೇ ಒತ್ತಡವಿಲ್ಲ; ಏರ್ ಇಂಡಿಯಾ ಸ್ಪಷ್ಟನೆ

State News
KARNATAKA

ರಾಜ್ಯದಿಂದ ರಾಷ್ಟ್ರೀಯ ಗ್ರಿಡ್‌ಗೆ ₹423 ಕೋಟಿ ವಿದ್ಯುತ್ ಮಾರಾಟದ ಸಾಧನೆ: ಇಂಧನ ಸಚಿವ ಕೆ.ಜೆ.ಜಾರ್ಜ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಪವರ್‌ ಕಂಪನಿ ಆಫ್‌ ಕರ್ನಾಟಕ ಲಿಮಿಟೆಡ್ ಮೂಲಕ ರಾಜ್ಯವು ಕಳೆದ ಎರಡೂವರೆ ತಿಂಗಳಲ್ಲಿ ಪ್ರತಿ ಯೂನಿಟ್‌ಗೆ 9.08 ರೂಪಾಯಿಯಂತೆ…

ಜನರ ಪ್ರೀತಿ, ವಿಶ್ವಾಸಕ್ಕೆ ಎಂದಿಗೂ ಚಿರಋಣಿ: ಮದ್ದೂರು ಶಾಸಕ ಕೆ.ಎಂ.ಉದಯ್

BIG NEWS: ಮೇಲುಕೋಟೆ ಯೋಗನರಸಿಂಹಸ್ವಾಮಿ ದೇವಸ್ಥಾನದ ಖಜಾನೆಗೆ ಕನ್ನ: ಅರ್ಚಕರು, ಸಿಬ್ಬಂದಿ ವಿರುದ್ಧ ದೂರು!

ಮಕ್ಕಳ ಪೋಷಕರ ಗಮನಕ್ಕೆ: ಜೂನ್.28ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ, ತಪ್ಪದೇ ಹಾಕಿಸಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.