ನವದೆಹಲಿ : ರೋಟಿಯನ್ನ ಫಾಯಿಲ್ ಪೇಪರ್’ನಲ್ಲಿ ಸುತ್ತಿ ಟಿಫಿನ್’ನಲ್ಲಿ ಇಡುವುದು ಸರ್ವೇಸಾಮಾನ್ಯ. ಬಹುಶಃ ಇದು ಪ್ರತಿದಿನ ನಡೆಯುತ್ತಿರ್ಬೋದು. ಆಫೀಸ್’ಗೆ ಹೋಗುವಾಗ ಮನೆಯಲ್ಲಿ ಅಡುಗೆ ಮಾಡುವ ಹೆಂಡತಿ, ಅಮ್ಮ ಅಥವಾ ತಂಗಿ ರೋಟಿಯನ್ನ ಫಾಯಿಲ್ ಪೇಪರ್’ನಲ್ಲಿ ಸುತ್ತಿ ಟಿಫಿನ್’ಗೆ ಹಾಕಿಕೊಟ್ಟ ಹೋಮ್ ಫುಡ್ ತುಂಬಾ ಖುಷಿಯಿಂದ ತಿನ್ನುತ್ತೀರಿ. ಇನ್ನು ಮಕ್ಕಳಿಗೆ ಟಿಫಿನ್ ಕೊಟ್ಟರೂ ಎಷ್ಟು ಪೋಷಕರು ಚಪಾತಿಯನ್ನೂ ಫಾಯಿಲ್ ಪೇಪರ್’ನಲ್ಲಿ ಸುತ್ತಿಡುತ್ತಾರೆ.
ಟಿಫಿನ್ನಲ್ಲಿ ಚಪಾತಿ ಸುಂದರವಾಗಿ ಕಾಣಲು ಮತ್ತು ಬೆಚ್ಚಗಿರುತ್ತದೆ ಅನ್ನೊ ಕಾರಣಕ್ಕೆ ಜನರು ಇದನ್ನ ಮಾಡುತ್ತಾರೆ. ಆದಾಗ್ಯೂ, ಫಾಯಿಲ್ ಪೇಪರ್ನಲ್ಲಿ ಸುತ್ತಿದ ಈ ರೊಟ್ಟಿಗಳು ನಿಮ್ಮ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ನಿಮಗೆ ತಿಳಿದಿರಲಿಕ್ಕಿಲ್ಲ. ನೀವು ಅದರ ಬಗ್ಗೆ ಗಮನ ಹರಿಸದಿದ್ದರೆ, ಅದು ನಿಮ್ಮನ್ನು ಗಂಭೀರ ಕಾಯಿಲೆಗೆ ಬಲಿಪಶು ಮಾಡಬಹುದು.
ಫಾಯಿಲ್ ಪೇಪರ್ ಬಳಕೆಯ ಬಗ್ಗೆ ತಜ್ಞರು ಹೇಳೋದೇನು.?
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎನ್ವಿರಾನ್ಮೆಂಟಲ್ ಹೆಲ್ತ್ ಸೈನ್ಸಸ್ನಲ್ಲಿ ವಿಷಶಾಸ್ತ್ರಜ್ಞರಾಗಿ ಕೆಲಸ ಮಾಡುವ ಜೀನ್ ಹ್ಯಾರಿ, ಅಲ್ಯೂಮಿನಿಯಂನಲ್ಲಿ ಅನೇಕ ನ್ಯೂರೋಟಾಕ್ಸಿಕ್ ಅಂಶಗಳು ಕಂಡುಬರುತ್ತವೆ ಎಂದು ಹೇಳುತ್ತಾರೆ. ನೀವು ಯಾವುದೇ ಅಸಿಟಿಕ್ ವಸ್ತುವನ್ನ ಫಾಯಿಲ್ ಪೇಪರ್ನಲ್ಲಿ ಇರಿಸಿದರೆ ಅದು ನಿಮ್ಮ ದೇಹಕ್ಕೆ ಅಪಾಯಕಾರಿ. ಇದರೊಂದಿಗೆ, ನೀವು ಫಾಯಿಲ್ ಪೇಪರ್ನಲ್ಲಿ ಬಿಸಿ ಚಪಾತಿ, ರೋಟಿ ಸುತ್ತಿದಾಗ, ಅದರ ಶಾಖದಿಂದಾಗಿ ಅಲ್ಯೂಮಿನಿಯಂ ಕರಗಲು ಪ್ರಾರಂಭಿಸುತ್ತದೆ. ಅದು ಕರಗಿ ನಮ್ಮ ದೇಹ ಸೇರಿದರೆ ಆಲ್ಝೈಮರ್ಸ್ ಅಪಾಯವನ್ನ ಹೆಚ್ಚಿಸುತ್ತದೆ. ಇದರ ಹೊರತಾಗಿ, ಫಾಯಿಲ್ ಪೇಪರ್ನ ಅತಿಯಾದ ಬಳಕೆಯು ನಮ್ಮ ಮೂಳೆಗಳನ್ನ ದುರ್ಬಲಗೊಳಿಸುತ್ತದೆ ಮತ್ತು ಅಲ್ಯೂಮಿನಿಯಂ ನಮ್ಮ ದೇಹವನ್ನ ಅತಿಯಾಗಿ ಪ್ರವೇಶಿಸಿದ್ರೆ, ನಂತರ ನಾವು ಆಸ್ಟಿಯೊಪೊರೋಸಿಸ್ಂಿತಹ ಗಂಭೀರ ಕಾಯಿಲೆಗೆ ಒಳಗಾಗಬಹುದು, ಇದರೊಂದಿಗೆ ಮೂತ್ರಪಿಂಡ ವೈಫಲ್ಯದ ಅಪಾಯವೂ ಹೆಚ್ಚಾಗುತ್ತದೆ.
ಫಾಯಿಲ್ ಪೇಪರ್ ಬದಲಿಗೆ ಏನು ಬಳಸಬೇಕು.?
ಇಂದಿನಿಂದ ಕೆಲವು ವರ್ಷಗಳ ಹಿಂದಕ್ಕೆ ಹೋದರೆ ಆಗ ರೊಟ್ಟಿ, ಚಪಾತಿ ತರಹದ ಆಹಾರಗಳನ್ನ ಶುಭ್ರವಾದ ಬಟ್ಟೆಯಲ್ಲಿ ಸುತ್ತಿ ಟಿಫಿನ್ಗಳಲ್ಲಿ ಪ್ಯಾಕ್ ಮಾಡುತ್ತಿದ್ದರು. ಸಧ್ಯ ನಾವು ಮತ್ತೆ ಆ ಕಡೆಗೆ ಸಾಗಬೇಕಾಗಿದೆ. ಇನ್ನು ಅದು ಬೇಡವೆನ್ನಿಸಿದ್ರೆ, ಚಪಾತಿಗಳನ್ನ ಇರಿಸಿಕೊಳ್ಳಲು ನೀವು ಬಿಗಿಯಾದ ಗಾಜಿನ ಟಿಫಿನ್ ಬಳಸಬಹುದು. ಆದರೆ, ಚಪಾತಿಗಳನ್ನ ತಣ್ಣಗೆ ಮಾಡಿ ಅದ್ರಲ್ಲಿ ಇರಿಸಬೇಕಾಗುತ್ತೆ. ಯಾಕಂದ್ರೆ, ಬಿಸಿ ಚಪಾತಿ ನೀರಿನಾಂಶ ಬಿಡುಗಡೆ ಮಾಡುತ್ತೆ. ಅಂದ್ರೆ, ಚಪಾತಿಗಳು ಹಬೆಯಿಂದ ಒದ್ದೆಯಾಗುತ್ತವೆ ಮತ್ತು ತಿನ್ನಲು ಯೋಗ್ಯವಾಗುವುದಿಲ್ಲ. ಆದ್ದರಿಂದ ನಿಜವಾದ ಅರ್ಥದಲ್ಲಿ, ರೊಟ್ಟಿಗಳನ್ನ ಇಡಲು ಉತ್ತಮ ಮಾರ್ಗವೆಂದರೆ ಸ್ವಚ್ಛವಾದ ಬಟ್ಟೆ. ಒಳ್ಳೆಯದು. ಆದ್ರೆ, ನೀವು ಬಟ್ಟೆಯನ್ನ ತೊಳೆಯಬಹುದು ಮತ್ತು ಅದನ್ನ ಹಲವು ಬಾರಿ ಬಳಸಬಹುದು. ಇದು ಬಿಟ್ಟು ಫಾಯಿಲ್ ಪೇಪರ್ ಬಳಸಿ ಎಸೆದರೆ, ಅದು ನಿಮಗಷ್ಟೇ ಅಲ್ಲ ಪ್ರಕೃತಿಗೆ ಅಪಾಯಕಾರಿ.
BIGG NEWS : ಜಮ್ಮು ಮತ್ತು ಕಾಶ್ಮೀರ ಹೆದ್ದಾರಿಯಲ್ಲಿ ಮಿನಿ ಬಸ್ ನಲ್ಲಿ ಐಇಡಿ ಪತ್ತೆ, ತನಿಖೆ ಆರಂಭ | IED found
‘ಶಿಷ್ಯರನ್ನು ಬಳಸಿಕೊಂಡು ಕುತಂತ್ರ ಮಾಡುವುದು ಸಿದ್ದು ತಂತ್ರ’ : ಟ್ವೀಟ್ ನಲ್ಲಿ ಬಿಜೆಪಿ ಕಿಡಿ