Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಾಂಗ್ರೆಸ್ ಮಾತ್ರ ಅಲ್ಲ ನಿಮಗೂ ಕೂಡ ಈ ಡಿಕೆ ಶಿವಕುಮಾರ್ ಇದ್ದಾನೆ : ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ ಸಿಎಂ ಡಿಕೆಶಿ!

ಸಾರ್ವಜನಿಕರೇ ನಿಮ್ಮ `ಮೊಬೈಲ್’ ನಲ್ಲಿ ಇಟ್ಟುಕೊಳ್ಳಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು.!

BREAKING : ಸಿಎಂ ಡಿಕೆಶಿ ಮನೆ ಹಿಂಭಾಗದ ರಸ್ತೆಯಲ್ಲಿ ಮಾಟ ಮಂತ್ರ : ಮಕ್ಕಳು, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪತಿಯ ಅನೈತಿಕ ಸಂಬಂಧದ ಕಾರಣ ಪತ್ನಿ ದೂರವಿದ್ದರೆ ಅದು ‘ಪರಿತ್ಯಾಗ’ವಲ್ಲ: ಹೈಕೋರ್ಟ್ ಮಹತ್ವದ ತೀರ್ಪು
KARNATAKA

ಪತಿಯ ಅನೈತಿಕ ಸಂಬಂಧದ ಕಾರಣ ಪತ್ನಿ ದೂರವಿದ್ದರೆ ಅದು ‘ಪರಿತ್ಯಾಗ’ವಲ್ಲ: ಹೈಕೋರ್ಟ್ ಮಹತ್ವದ ತೀರ್ಪು

By kannadanewsnow57

ಬೆಂಗಳೂರು: ಪತಿಯು ಅಕ್ರಮ ಸಂಬಂಧ ಹೊಂದಿರುವ ಕಾರಣಕ್ಕೆ ಪತ್ನಿ ಆತನಿಂದ ದೂರ ವಾಸಿಸುತ್ತಿದ್ದರೆ, ಅದನ್ನು ಪತ್ನಿ ಮಾಡಿದ ‘ಪರಿತ್ಯಾಗ’ (Desertion) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಬೀದರ್‌ನ ಕೌಟುಂಬಿಕ ನ್ಯಾಯಾಲಯವು ನೀಡಿದ್ದ ವಿಚ್ಛೇದನ ಆದೇಶವನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಮತ್ತು ನ್ಯಾಯಮೂರ್ತಿ ಚಿಲ್ಲಾಕೂರು ಸುಮಲತಾ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ಪ್ರಕಟಿಸಿದೆ.

ಪ್ರಕರಣದ ಹಿನ್ನೆಲೆ

ಬೀದರ್‌ ನ ಕೌಟುಂಬಿಕ ನ್ಯಾಯಾಲಯವು ಈ ಹಿಂದೆ ಪತಿಯ ಪರವಾಗಿ ವಿಚ್ಛೇದನ ನೀಡಿ ಆದೇಶಿಸಿತ್ತು. ಪತ್ನಿಯು ತನ್ನನ್ನು ಪರಿತ್ಯಾಗ ಮಾಡಿದ್ದಾರೆ ಮತ್ತು ಕ್ರೌರ್ಯ ಎಸಗಿದ್ದಾರೆ ಎಂಬ ಪತಿಯ ವಾದವನ್ನು ಕೆಳಹಂತದ ನ್ಯಾಯಾಲಯ ಪುರಸ್ಕರಿಸಿತ್ತು. ಆದರೆ ಇದನ್ನು ತಳ್ಳಿಹಾಕಿದ ಹೈಕೋರ್ಟ್, ಕೆಳಹಂತದ ನ್ಯಾಯಾಲಯವು ಕೇವಲ ಪತಿಯ ಮೌಖಿಕ ಹೇಳಿಕೆಗಳನ್ನು ಆಧರಿಸಿ ತೀರ್ಪು ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಪತಿಯು ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವಾಗ, ಪತ್ನಿಯು ಆತನಿಂದ ದೂರವಿರಲು ಬಲವಾದ ಮತ್ತು ಕಾನೂನುಬದ್ಧ ಕಾರಣವಿರುತ್ತದೆ. ಇಂತಹ ಸಂದರ್ಭದಲ್ಲಿ ಆಕೆಯನ್ನು ‘ಪರಿತ್ಯಾಗ ಮಾಡಿದವಳು’ ಎಂದು ಕರೆಯುವುದು ತಪ್ಪು.

ಪತಿಯ ಅಕ್ರಮ ಸಂಬಂಧಕ್ಕೆ ಪುರಾವೆಯಾಗಿ ಆ ಸಂಬಂಧದಿಂದ ಜನಿಸಿದ ಮಗುವಿನ ಶಾಲಾ ದಾಖಲಾತಿಗಳು ಮತ್ತು ಭಾವಚಿತ್ರಗಳನ್ನು ಪತ್ನಿ ನ್ಯಾಯಾಲಯಕ್ಕೆ ಒದಗಿಸಿದ್ದರು. ಈ ಗಂಭೀರ ಅಂಶವನ್ನು ಕೌಟುಂಬಿಕ ನ್ಯಾಯಾಲಯವು ಪರಿಗಣಿಸದಿರುವುದು ಸರಿಯಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪತ್ನಿಯು ತನಗೆ ‘ಎಚ್‌ಐವಿ’ ಇದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಪತಿಯ ಆರೋಪಕ್ಕೆ ಯಾವುದೇ ದೃಢವಾದ ಸಾಕ್ಷ್ಯಗಳಿರಲಿಲ್ಲ. ಇಂತಹ ಗಂಭೀರ ಆರೋಪಗಳನ್ನು ಕೇವಲ ಮೌಖಿಕ ಹೇಳಿಕೆಗಳ ಆಧಾರದ ಮೇಲೆ ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ಸಾಕ್ಷ್ಯಗಳ ಕೊರತೆಯ ನಡುವೆಯೂ ವಿಚ್ಛೇದನ ನೀಡಿರುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದ ಹೈಕೋರ್ಟ್, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

If wife leaves because of husband's infidelity it is not 'abandonment': High Court landmark judgment
Share. Facebook Twitter LinkedIn WhatsApp Email

Related Posts

ಕಾಂಗ್ರೆಸ್ ಮಾತ್ರ ಅಲ್ಲ ನಿಮಗೂ ಕೂಡ ಈ ಡಿಕೆ ಶಿವಕುಮಾರ್ ಇದ್ದಾನೆ : ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ ಸಿಎಂ ಡಿಕೆಶಿ!

2 Mins Read

ಸಾರ್ವಜನಿಕರೇ ನಿಮ್ಮ `ಮೊಬೈಲ್’ ನಲ್ಲಿ ಇಟ್ಟುಕೊಳ್ಳಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು.!

3 Mins Read

BREAKING : ಸಿಎಂ ಡಿಕೆಶಿ ಮನೆ ಹಿಂಭಾಗದ ರಸ್ತೆಯಲ್ಲಿ ಮಾಟ ಮಂತ್ರ : ಮಕ್ಕಳು, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

2 Mins Read
Recent News

ಕಾಂಗ್ರೆಸ್ ಮಾತ್ರ ಅಲ್ಲ ನಿಮಗೂ ಕೂಡ ಈ ಡಿಕೆ ಶಿವಕುಮಾರ್ ಇದ್ದಾನೆ : ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ ಸಿಎಂ ಡಿಕೆಶಿ!

ಸಾರ್ವಜನಿಕರೇ ನಿಮ್ಮ `ಮೊಬೈಲ್’ ನಲ್ಲಿ ಇಟ್ಟುಕೊಳ್ಳಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು.!

BREAKING : ಸಿಎಂ ಡಿಕೆಶಿ ಮನೆ ಹಿಂಭಾಗದ ರಸ್ತೆಯಲ್ಲಿ ಮಾಟ ಮಂತ್ರ : ಮಕ್ಕಳು, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಆದಾಯ ತೆರಿಗೆದಾರರೇ ಗಮನಿಸಿ : ITR-1, ITR-2, ITR-3 ಮತ್ತು ITR -4 ನಡುವೆ ಗೊಂದಲವಿದೆಯೇ? ಇಲ್ಲಿದೆ ಸರಳ ಮಾಹಿತಿ

State News
KARNATAKA

ಕಾಂಗ್ರೆಸ್ ಮಾತ್ರ ಅಲ್ಲ ನಿಮಗೂ ಕೂಡ ಈ ಡಿಕೆ ಶಿವಕುಮಾರ್ ಇದ್ದಾನೆ : ಜೆಡಿಎಸ್ ಕಾರ್ಯಕರ್ತರಿಗೆ ಗಾಳ ಹಾಕಿದ ಸಿಎಂ ಡಿಕೆಶಿ!

By ಸುರೇಶ್‌ KARNATAKA 2 Mins Read

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಸಕ್ತಿದಾಯಕ ವಿದ್ಯಮಾನ ಜರುಗಿದ್ದು, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್…

ಸಾರ್ವಜನಿಕರೇ ನಿಮ್ಮ `ಮೊಬೈಲ್’ ನಲ್ಲಿ ಇಟ್ಟುಕೊಳ್ಳಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು.!

BREAKING : ಸಿಎಂ ಡಿಕೆಶಿ ಮನೆ ಹಿಂಭಾಗದ ರಸ್ತೆಯಲ್ಲಿ ಮಾಟ ಮಂತ್ರ : ಮಕ್ಕಳು, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

BREAKING : ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಶೀಘ್ರ ಶಂಕು ಸ್ಥಾಪನೆ : ಸಿಎಂ ಡಿಕೆ ಶಿವಕುಮಾರ್ ಘೋಷಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.