Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾರ್ವಜನಿಕರೇ ನಿಮ್ಮ `ಮೊಬೈಲ್’ ನಲ್ಲಿ ಇಟ್ಟುಕೊಳ್ಳಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು.!

BREAKING : ಸಿಎಂ ಡಿಕೆಶಿ ಮನೆ ಹಿಂಭಾಗದ ರಸ್ತೆಯಲ್ಲಿ ಮಾಟ ಮಂತ್ರ : ಮಕ್ಕಳು, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಆದಾಯ ತೆರಿಗೆದಾರರೇ ಗಮನಿಸಿ : ITR-1, ITR-2, ITR-3 ಮತ್ತು ITR -4 ನಡುವೆ ಗೊಂದಲವಿದೆಯೇ? ಇಲ್ಲಿದೆ ಸರಳ ಮಾಹಿತಿ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಸಿಎಂ ಡಿಕೆಶಿ ಮನೆ ಹಿಂಭಾಗದ ರಸ್ತೆಯಲ್ಲಿ ಮಾಟ ಮಂತ್ರ : ಮಕ್ಕಳು, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ
KARNATAKA

BREAKING : ಸಿಎಂ ಡಿಕೆಶಿ ಮನೆ ಹಿಂಭಾಗದ ರಸ್ತೆಯಲ್ಲಿ ಮಾಟ ಮಂತ್ರ : ಮಕ್ಕಳು, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

By ಸುರೇಶ್‌

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ. ಶಿವಕುಮಾರ್ ಅವರು ಇಂದು ತಮ್ಮ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಸಿಎಂ ಆಗಿ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಹಾಗೂ ಮತದಾರರು ಸಂಭ್ರಮಾಚರಣೆಯಲ್ಲಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಹಿಂಭಾಗದಲ್ಲಿ ದುಷ್ಕರ್ಮಿಗಳು ಮಾಟ-ಮಂತ್ರ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಭಾರಿ ಸಂಚಲನ ಮೂಡಿಸಿದೆ.

ಸದಾಶಿವನಗರದ ಜಿಬಿಎ (GBA) ಮೈದಾನದ ಮುಂಭಾಗದ ರಸ್ತೆಯಲ್ಲಿ ಈ ಅಘೋರ ಕೃತ್ಯ ನಡೆದಿದೆ. ತಡರಾತ್ರಿ ಅಥವಾ ಮುಂಜಾನೆಯ ವೇಳೆಯಲ್ಲಿ ಸ್ಥಳಕ್ಕೆ ಬಂದಿರುವ ಅಪರಿಚಿತ ಕಿಡಿಗೇಡಿಗಳು, ರಸ್ತೆಯ ಮಧ್ಯದಲ್ಲೇ ವಿಚಿತ್ರವಾದ ವೃತ್ತಾಕಾರದ ರಂಗೋಲಿ ಮಾದರಿಯನ್ನು ಬಿಡಿಸಿದ್ದಾರೆ. ನೂತನ ಸಿಎಂ ನಿವಾಸಕ್ಕೆ ತೀರಾ ಹತ್ತಿರದಲ್ಲೇ ಈ ರೀತಿಯ ಅನುಮಾನಾಸ್ಪದ ಚಟುವಟಿಕೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕೋಳಿ ಬಲಿ, ನಿಂಬೆಹಣ್ಣು ಪೂಜೆ

ಮಾಟ-ಮಂತ್ರ ಮಾಡಿರುವ ಜಾಗದಲ್ಲಿ ರಕ್ತಸಿಕ್ತ ದೃಶ್ಯಗಳು ಕಂಡುಬಂದಿವೆ. ದುಷ್ಕರ್ಮಿಗಳು ವೃತ್ತಾಕಾರದ ಕೃತ್ಯ ನಡೆಸಿ, ಅಲ್ಲಿ ಕೋಳಿಯೊಂದನ್ನು ಕೊಯ್ದು ಬಲಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ಮಂತ್ರಿಸಿದ ನಿಂಬೆಹಣ್ಣುಗಳು, ಕುಂಕುಮ, ಅರಿಶಿನ ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ರಸ್ತೆಯುದ್ದಕ್ಕೂ ಚೆಲ್ಲಾಡಿದ್ದಾರೆ. ಮುಖ್ಯಮಂತ್ರಿಗಳ ನಿವಾಸದ ಭದ್ರತೆಯ ದೃಷ್ಟಿಯಿಂದ ಹಾಗೂ ಇಂತಹ ಮೂಢನಂಬಿಕೆಯ ಆಚರಣೆಗಳಿಂದಾಗಿ ಸ್ಥಳೀಯರಲ್ಲಿ ಆತಂಕ ದುಪ್ಪಟ್ಟಾಗಿದೆ.

ರಸ್ತೆಯಲ್ಲಿ ಓಡಾಡಲು ಜನರ ಹಿಂದೇಟು

ಮಾಟ-ಮಂತ್ರ ನಡೆದಿರುವ ಜಿಬಿಎ ಮೈದಾನದ ರಸ್ತೆಯು ಸದಾಶಿವನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿದೆ. ಆದರೆ ಕೃತ್ಯ ನಡೆದ ವಿಷಯ ತಿಳಿಯುತ್ತಿದ್ದಂತೆ, ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ಹಿಂದೇಟು ಹಾಕುತ್ತಿದ್ದಾರೆ. ಮಂತ್ರಿಸಿದ ನಿಂಬೆಹಣ್ಣುಗಳನ್ನು ತುಳಿದರೆ ತಮಗೆ ಎಲ್ಲಾದರೂ ಕಡುಕಾಗಬಹುದು ಎಂಬ ಮೂಢನಂಬಿಕೆ ಮತ್ತು ಭಯದಿಂದಾಗಿ, ಜನರು ಆ ಮಾರ್ಗವನ್ನು ಬಿಟ್ಟು ಪರ್ಯಾಯ ರಸ್ತೆಗಳನ್ನು ಬಳಸುತ್ತಿದ್ದಾರೆ.

ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ತಕ್ಷಣವೇ ಅವರ ಮನೆಯ ಆಸುಪಾಸಿನಲ್ಲಿ ಇಂತಹ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾಜಕೀಯವಾಗಿ ಅವರನ್ನು ಕುಗ್ಗಿಸಲು ಯಾರಾದರೂ ಈ ತಂತ್ರ ಹೂಡಿದ್ದಾರೆಯೇ ಅಥವಾ ಕೇವಲ ಸಾರ್ವಜನಿಕರಲ್ಲಿ ಭಯ ಹುಟ್ಟಿಸಲು ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆಯೇ ಎಂಬ ಪ್ರಶ್ನೆಗಳು ಎದ್ದಿವೆ. ಸದ್ಯ ಈ ಘಟನೆ ಇಡೀ ಬೆಂಗಳೂರಿನಾದ್ಯಂತ ತೀವ್ರ ಕುತೂಹಲ ಮತ್ತು ಚರ್ಚೆಯನ್ನು ಹುಟ್ಟುಹಾಕಿದೆ.

Share. Facebook Twitter LinkedIn WhatsApp Email

Related Posts

ಸಾರ್ವಜನಿಕರೇ ನಿಮ್ಮ `ಮೊಬೈಲ್’ ನಲ್ಲಿ ಇಟ್ಟುಕೊಳ್ಳಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು.!

3 Mins Read

BREAKING : ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಶೀಘ್ರ ಶಂಕು ಸ್ಥಾಪನೆ : ಸಿಎಂ ಡಿಕೆ ಶಿವಕುಮಾರ್ ಘೋಷಣೆ

2 Mins Read

ನಿಮ್ಮೆಲ್ಲರ ಪ್ರಾರ್ಥನೆಯಿಂದಲೇ ವಿಧಾನಸೌಧದ 3ನೇ ಮಹಡಿಯ ಮೆಟ್ಟಿಲು ಹತ್ತಿದ್ದೇನೆ : ಸಿಎಂ ಡಿಕೆ ಶಿವಕುಮಾರ್ ಭಾವುಕ

2 Mins Read
Recent News

ಸಾರ್ವಜನಿಕರೇ ನಿಮ್ಮ `ಮೊಬೈಲ್’ ನಲ್ಲಿ ಇಟ್ಟುಕೊಳ್ಳಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು.!

BREAKING : ಸಿಎಂ ಡಿಕೆಶಿ ಮನೆ ಹಿಂಭಾಗದ ರಸ್ತೆಯಲ್ಲಿ ಮಾಟ ಮಂತ್ರ : ಮಕ್ಕಳು, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

ಆದಾಯ ತೆರಿಗೆದಾರರೇ ಗಮನಿಸಿ : ITR-1, ITR-2, ITR-3 ಮತ್ತು ITR -4 ನಡುವೆ ಗೊಂದಲವಿದೆಯೇ? ಇಲ್ಲಿದೆ ಸರಳ ಮಾಹಿತಿ

BREAKING : ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಶೀಘ್ರ ಶಂಕು ಸ್ಥಾಪನೆ : ಸಿಎಂ ಡಿಕೆ ಶಿವಕುಮಾರ್ ಘೋಷಣೆ

State News
KARNATAKA

ಸಾರ್ವಜನಿಕರೇ ನಿಮ್ಮ `ಮೊಬೈಲ್’ ನಲ್ಲಿ ಇಟ್ಟುಕೊಳ್ಳಲೇಬೇಕು ಈ 12 ಸರ್ಕಾರಿ ಆ್ಯಪ್‌ ಗಳು.!

By kannadanewsnow57 KARNATAKA 3 Mins Read

ಬೆಂಗಳೂರು: ದೇಶದ ನಾಗರಿಕರಿಗೆ ಸರ್ಕಾರದ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ತಲುಪಿಸಲು ಮತ್ತು ಕಾಗದದ ಬಳಕೆಯನ್ನು ಕಡಿಮೆ ಮಾಡಲು ಭಾರತ ಸರ್ಕಾರವು…

BREAKING : ಸಿಎಂ ಡಿಕೆಶಿ ಮನೆ ಹಿಂಭಾಗದ ರಸ್ತೆಯಲ್ಲಿ ಮಾಟ ಮಂತ್ರ : ಮಕ್ಕಳು, ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

BREAKING : ಕನಕಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಶೀಘ್ರ ಶಂಕು ಸ್ಥಾಪನೆ : ಸಿಎಂ ಡಿಕೆ ಶಿವಕುಮಾರ್ ಘೋಷಣೆ

ನಿಮ್ಮೆಲ್ಲರ ಪ್ರಾರ್ಥನೆಯಿಂದಲೇ ವಿಧಾನಸೌಧದ 3ನೇ ಮಹಡಿಯ ಮೆಟ್ಟಿಲು ಹತ್ತಿದ್ದೇನೆ : ಸಿಎಂ ಡಿಕೆ ಶಿವಕುಮಾರ್ ಭಾವುಕ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.