ಮಧ್ಯಪ್ರದೇಶ : ಇಬ್ಬರು ಯುವತಿಯರು ತಮ್ಮ ಸ್ವಂತ ಇಚ್ಛೆಯಿಂದ ಒಟ್ಟಿಗೆ ವಾಸಿಸಲು ಬಯಸಿದರೆ, ನ್ಯಾಯಾಲಯವು ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಇಂದು ಹೇಳಿದೆ.
ತನ್ನ ಮಗಳನ್ನು ತನಗೆ ಹಸ್ತಾಂತರಿಸಬೇಕೆಂದು ಕೋರಿ 18 ವರ್ಷದ ಯುವತಿಯ ತಂದೆ ಸಲ್ಲಿಸಿದ್ದ ಕಸ್ಟಡಿ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು. 18 ವರ್ಷದ ಹುಡುಗಿ 22 ವರ್ಷದ ಯುವತಿಯೊಂದಿಗೆ ಮನೆಯಿಂದ ಓಡಿಹೋಗಿ, ಇಬ್ಬರೂ ಒಟ್ಟಿಗೇ ವಾಸಿಸುತ್ತಿರುವ ಘಟನೆ ರಾಜ್ಯದ ಜಬಲ್ಪುರದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ವಿಚಾರಣೆ ನಡೆದಿದೆ.
ಓಡಿಹೋದ ಇಬ್ಬರು ಹುಡುಗಿಯರು ಬಾಲ್ಯದಿಂದಲೂ ಒಟ್ಟಿಗೆ ಬೆಳೆದರು. ಒಟ್ಟಿಗೆ ಅಧ್ಯಯನ ಮಾಡಿದರು. ಕಾಲಕ್ರಮೇಣ ಇಬ್ಬರ ನಡುವೆ ಭಾವನಾತ್ಮಕ ಸಂಬಂಧ ಬೆಳೆಯಿತು. ಇಬ್ಬರೂ ಬೇರೆಯಾಗಲು ಸಾಧ್ಯವಿಲ್ಲ ಎಂದು ನಿರ್ಧರಿಸಿ ತಮ್ಮ ಮನೆಗಳಿಂದ ಓಡಿಹೋದರು. ಇಬ್ಬರ ನಡುವಿನ ಸಂಬಂಧ ಮನೆಯವರಿಗೆ ಗೊತ್ತಾಗಿ ಇಬ್ಬರೂ ಓಡಿ ಹೋಗಿದ್ದಾರಂತೆ. 18ರ ಹರೆಯದ ಯುವತಿಯ ತಂದೆ ತನ್ನ ಮಗಳನ್ನು ಕಸ್ಟಡಿಗೆ ನೀಡುವಂತೆ ಕಳೆದ ತಿಂಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಯುವತಿಯೊಂದಿಗೆ ಉಳಿಯುವ ಬದಲು ಕುಟುಂಬದೊಂದಿಗೆ ಇರುವಂತೆ ಮಗಳನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಅವಳು ಒಪ್ಪಲಿಲ್ಲ ಎಂದು ತಂದೆ ನ್ಯಾಯಾಲಯಕ್ಕೆ ತಿಳಿಸಿದರು. ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯ ಇಬ್ಬರು ಬಾಲಕಿಯರಿಗೆ ತಮ್ಮ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ, ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಲು ನ್ಯಾಯಾಲಯವು ಹುಡುಗಿಗೆ ಒಂದು ಗಂಟೆ ಸಮಯ ನೀಡಿದೆ. ಆದರೆ, ಅವಳು ತನ್ನ ಸ್ನೇಹಿತೆನೊಂದಿಗೆ ಇರಲು ನಿರ್ಧರಿಸಿದಳು. ಹುಡುಗಿ ವಯಸ್ಕಳಾಗಿದ್ದು, ಜೀವನದಲ್ಲಿ ತನಗೆ ಇಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.
BREAKING NEWS : ದೊಡ್ಡಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು
BIGG NEWS : ರಾಜ್ಯದಲ್ಲಿ ಮಹಾಮಳೆ ಬೆನ್ನಲ್ಲೇ ಚಳಿ ಹೆಚ್ಚಳ : ಮೈನಡುಗುವ ಚಳಿಗೆ ಹೊರಬಾರದ ಜನ!
Job Alert : ಉದ್ಯೋಗಾಕಾಂಕ್ಷಿಗಳೇ ಗಮನಿಸಿ : ‘IBPS’ನಿಂದ 710 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
BREAKING NEWS : ದೊಡ್ಡಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು