ಬೆಂಗಳೂರು: ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಅವರು ಮಾಂಸ ( Meat ) ತಿಂದ್ರೋ ಇಲ್ವೋ ಇದೆಲ್ಲಾ ವಿಷಯವೇ ಅಲ್ಲಾ. ಸಿದ್ದರಾಮಯ್ಯನವರೇ ಮಾಂಸ ತಿಂದಿಲ್ಲ ಅಂದಮೇಲೆ ಮುಗಿದು ಹೋಯ್ತು. ತಿಂದೇ ಇಲ್ಲ ಅಂದ ಮೇಲೆ ಇನ್ನೇನು ? ಎಂಬುದಾಗಿ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ( MB Patil ) ಹೇಳಿದ್ದಾರೆ.
BIG NEWS: ಮತ್ತೆ ಜೀವ ಪಡೆದ 40% ಕಮೀಷನ್ ಆರೋಪ: ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾದ ಗುತ್ತಿಗೆದಾರರ ಸಂಘ
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಲಬುರಗಿಯಿಂದ ರಾಜ್ಯ ಪ್ರವಾಸವನ್ನ ಆರಂಭಿಸಿದ್ದೇನೆ. ಪಕ್ಷದ ಕಾರ್ಯಕರ್ತರ, ಮುಖಂಡರ ಸಭೆ ನಡೆಸಿದ್ದೇನೆ. ರಾಜ್ಯ, ಕೇಂದ್ರ ಸರ್ಕಾರದ ವೈಫಲ್ಯಗಳನ್ನ ಜನರ ಮುಂದೆ ತೆಗೆದುಕೊಂಡು ಹೋಗುತ್ತಿದ್ದೇವೆ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಿತ್ತು. ಇದನ್ನ ಕೆಡಿಸಲಾಗುತ್ತಿದೆ ಎಂದರು.
ಕರ್ನಾಟಕ ಮಾದರಿ ಬಿಟ್ಟು ಯುಪಿ ಮಾದರಿ ಅಂತಾ ಹೇಳ್ತಿದ್ದಾರೆ. ಯುಪಿ ಅಭಿವೃದ್ಧಿಯಲ್ಲಿ ಕಟ್ಟಕಡೆಯಲ್ಲಿತ್ತು. ನಮಗೆ ಇದರ ಮಾದರಿ ಬೇಕಾ ? ಹಲವು ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ. ಅವರ ಮೇಲೆ ಐಟಿ, ಇಡಿ ದಾಳಿ ( ED Raid ) ನಡೆಯುತ್ತಿಲ್ಲ ಎಂದು ಹೇಳಿದರು.
BIGG NEWS : ʻ ರಾಜ್ಯಾಧ್ಯಕ್ಷರ ಬದಲಾವಣೆ ಹೈಕಮಾಂಡ್ಗೆ ಬಿಟ್ಟದ್ದುʼ : ಅಬಕಾರಿ ಸಚಿವ ಕೆ.ಗೋಪಾಲಯ್ಯ ಪ್ರತಿಕ್ರಿಯೆ
ಹಿಜಾಬ್, ಆಜಾನ್ ತಂದು ವಾತಾವರಣ ಕೆಡಿಸಲು ಹೊರಟಿದ್ದಾರೆ. ಸರ್ಕಾರ ನಡೆಯುತ್ತಿಲ್ಲ, ತಳ್ಳಿಕೊಂಡು ಹೋಗುತ್ತಿದ್ದೇವೆ ಅಂತಾ ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರದೇ ಪಕ್ಷದ ಸಚಿವರು ಮಾತನ್ನಾಡಿದ್ದಾರೆ ಎಂಬುದಾಗಿ ಬಿಜೆಪಿ ವಿರುದ್ಧ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದರು.
ಬಿಜೆಪಿಯಿಂದ ಸಾವರ್ಕರ್ ಫೋಟೋ ಬಳಕೆ ವಿಚಾರವಾಗಿ ಮಾತನಾಡಿದ ಅವರು, ಸಾವರ್ಕರ್ ಫೋಟೋ ಬದಲು ಚೆನ್ನಮ್ಮನ ಫೋಟೋ ಇಡಿ. ಸುರಪುರ ನಾಯಕರ ಫೋಟೋ ಇಡಿ, ಕೆಂಪೇಗೌಡ ಫೋಟೋ ಇಡಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಹಲವರು ಇದ್ದಾರೆ. ಅವರ ಫೋಟೋ ಇಟ್ಟು ಯಾತ್ರೆ ಮಾಡಿ. ಅದು ಬಿಟ್ಟು ಬಿಜೆಪಿಯವರು ಚಿಲ್ರೆ ಕೆಲಸ ಮಾಡ್ತಿದ್ದಾರೆ. ಇಂಥ ಕೆಲಸಗಳಿಂದಲೇ ಬಿಜೆಪಿಯವರು ಮನೆಗೆ ಹೋಗ್ತಾರೆ ಎಂದು ಭವಿಷ್ಯ ನುಡಿದರು.
Shocking: ತೆಲಂಗಾಣದಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಗರ್ಭಿಣಿಯಾದ 6 ನೇ ತರಗತಿ ವಿದ್ಯಾರ್ಥಿನಿ