ಚಿತ್ರದುರ್ಗ : ಇತ್ತೀಚಿಗೆ ಮಹಿಳಾ ದಿನಾಚರಣೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಡುಗೆ ಅನಿಲ ದರವನ್ನು ನೂರು ರೂಪಾಯಿಗೆ ಇಳಿಸಿದರು ಈ ಕುರಿತಾಗಿ ಕಾಂಗ್ರೆಸ್ ಮುಖಂಡ ಜಿಎಸ್ ಮಂಜುನಾಥ್ ಲೋಕಸಭಾ ಚುನಾವಣೆ ಹಿನ್ನೆಲೆ 100 ರೂಪಾಯಿ ಹೇಳಿಕೆ ಮಾಡಿದ್ದಾರೆ ಒಂದು ವೇಳೆ ನನಗೆ ಏನಾದರೂ ಸಿಕ್ಕರೆ ಮೋದಿಗೆ ಕಾಲಲ್ಲಿ ಇರುವುದನ್ನು ತೆಗೆದು ಹೊಡೆಯುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ಮೋದಿ ದೂಸ್ರಿ ಮಿಟ್ಟಿ ಕಾ ಇನ್ಸಾನ್ ಹೈ’: ಚುನಾವಣಾ ಭರವಸೆಗಳ ಬಗ್ಗೆ ಪ್ರತಿಪಕ್ಷಗಳ ವಿರುದ್ಧ ಪ್ರಧಾನಿ ವಾಗ್ದಾಳಿ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದ ವೇಳೆ ಮಾತನಾಡಿದ ಅವರು, ನನಗೆ ಏನಾದರೂ ಸಿಕ್ಕರೆ ಕಾಲಲ್ಲಿ ಇರುವುದು ತೆಗೆದು ಹೊಡಿತಿದ್ದೆ ಎಂದು ಪ್ರಧಾನಿ ಮೋದಿ ಬಗ್ಗೆ ಕೈ ಮುಖಂಡ ಜಿಎಸ್ ಮಂಜುನಾಥ್ ವಿವದತ್ಮಕ ಹೇಳಿಕೆ ನೀಡಿದ್ದಾರೆ. ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷರಾಗಿರುವ ಜಿ ಎಸ್ ಮಂಜುನಾಥ್ ಹಿರಿಯೂರಿನ ಸಮುದಾಯಪನ ಉದ್ಘಾಟನೆ ವೇಳೆ ಇವರ ಬಗ್ಗೆ ಹೇಳಿಕೆ ನೀಡಿದ್ದಾರೆ.
ಹೀಗಿ ಯಾಕಲೇ ಮಾಡ್ತೀಯಾ ಎಂದು ನಾವು ಇದನ್ನು ಪ್ರಶ್ನೆ ಮಾಡಬಹುದು. ನಾನು ಒಬ್ಬ ಕಾಂಗ್ರೆಸ್ಗೆನಾಗಿ ಕೇಳ್ತಿಲ್ಲ. ಈ ದೇಶದ ಪ್ರಜೆಯಾಗಿ ಕೇಳಬೇಕಾಗಿತ್ತು. ನೀವು ಎಲ್ಲರೂ ಕೇಳಬೇಕು ಕೇಳೋದನ್ನ ಕಲಿಯಬೇಕು.ನಾವು ಕಾಂಗ್ರೆಸ್ನವರು ನಮ್ಮ ಮಾತು ಕೇಳಲ್ಲ, ಜನತಾದಳ ಕೇಳಲ್ಲ ಬಿಜೆಪಿಯವರು.ಮೊದಲೇ ಕೇಳಲ್ಲ ಎಂದರು.
ಪ್ರಧಾನಿ ಮೋದಿ ಮಧ್ಯಪ್ರವೇಶದಿಂದ ತಪ್ಪಿದ ಉಕ್ರೇನ್ ಮೇಲೆ ರಷ್ಯಾದ ‘ಪರಮಾಣು ದಾಳಿ’: ವರದಿ
ನಾವು ಪ್ರಶ್ನೆ ಎಲ್ಲಿವರ್ಗು ಕೇಳೋದಿಲ್ಲವೋ ಅಲ್ಲಿಯವರೆಗೆ ನಾವು ಮತ ಹಾಕಲು ಅರ್ಹರು ಆಗುವುದಿಲ್ಲ. ನಮ್ಮ ಜನಗಳಿಗೆ ನನ್ನ ಪ್ರಾರ್ಥನೆ ಏನೆಂದರೆ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುತ್ತೆ. ನಂತರ ಎಲೆಕ್ಷನ್ ಕೂಡ ಆಗುತ್ತೆ ನೂರು ರೂಪಾಯಿ ಕಮ್ಮಿ ಆಗುತ್ತೆ ಅಂದೇಟಿಗೆ ನಮ್ಮ ಜನರು ಖುಷಿ ಪಡುತ್ತಾರೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.