ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ( Edga Maidhana ) ಹೈಕೋರ್ಟ್ ಗಣೇಶೋತ್ಸವ ಆಚರಣೆಗೆ ( Ganesh Festival ) ಅನುಮತಿ ನೀಡಿದಂತ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಗೆ ( Supreme Court ) ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಅರ್ಜಿಯ ವಿಚಾರವಾಗಿ ದ್ವಿಸದಸ್ಯ ಪೀಠದಿಂದ ಮಧ್ಯಂತರ ಆದೇಶ ಹೊರಡಿಸಲು ನಕಾರ ವ್ಯಕ್ತ ಪಡಿಸಿದ ಕಾರಣ, ಇದೀಗ ಸುಪ್ರೀ ಕೋರ್ಟ್ ನ ಸಿಐಜೆ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆಯಾಗಿದೆ.
ಇಂದು ಕರ್ನಾಟಕ ಹೈಕೋರ್ಟ್ ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ಈದ್ಗಾ ಮೈದಾನದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿ ಆದೇಶಿಸಿದ್ದಂತ ಆದೇಶ ಪ್ರಶ್ನಿಸಿ, ವಕ್ಫ್ ಬೋರ್ಡ್ ನಿಲ್ಲ ಸಲ್ಲಿಸಲಾಗಿದ್ದಂತ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿತ್ತು.
BIGG NEWS : ಭಾರತದ ಆತ್ಮಹತ್ಯೆ ಪ್ರಕರಣಗಳಲ್ಲಿ ʼಕರ್ನಾಟಕಕ್ಕೆ ಐದನೇ ಸ್ಥಾನ ʼ : NCRB ಅಂಕಿ – ಅಂಶಗಳು ಬಹಿರಂಗ
ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ನ್ಯಾಯಪೀಠವು, ಈದ್ಗಾ ಮೈದಾನದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿದ್ದಂತ ಗಣೇಶೋತ್ಸವ ಆಚರಣೆಗೆ ಮಧ್ಯಂತರ ಆದೇಶದ ಮೂಲಕ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ಈಗ ಸುಪ್ರೀಂ ಕೋರ್ಟ್ ನ ಸಿಐಜೆ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ವರ್ಗಾವಣೆಗೊಂಡಿದೆ.
ಇದೀಗ ಈದ್ಗಾ ಮೈದಾನ ವಿವಾದದ ಕೇಸ್ ಸುಪ್ರೀಂ ಕೋರ್ಟ್ ನ ಸಿಐಜೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠಕ್ಕೆ ವರ್ಗಾವಣೆಗೊಂಡ ಕಾರಣ, ಕೋರ್ಟ್ ಹಾಲ್ 1ರಲ್ಲಿ ಪ್ರಸ್ತಾಪಿಸಲು ಕರ್ನಾಟಕ ಸರ್ಕಾರದ ಪರ ವಕೀಲ ತುಷಾರ್ ಮೆಹ್ತಾ, ವಕ್ಫ್ ಬೋರ್ಡ್ ಪರವಾಗಿ ಕಪಿಲ್ ಸಿಬಲ್ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಸುಪ್ರೀಂ ಕೋರ್ಟ್ ನ ಸಿಐಜೆ ನ್ಯಾಯಪೀಠದಲ್ಲಿ ಈದ್ಗಾ ಮೈದಾನ ವಿವಾದ ವಿಚಾರಣೆ ಆರಂಭಗೊಳ್ಳಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.