ಕೆಎನ್ಎನ್ಡಿಜಿಟಲ್ ಡೆಸ್ಕ್ : ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್’ನಲ್ಲಿ ಬಲವಾದ ಪುನರಾಗಮನವನ್ನು ಮಾಡಿದ್ದಾರೆ. ಆದ್ರೆ, ಟೆಸ್ಟ್’ಗಳಲ್ಲಿ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಇದರ ಪರಿಣಾಮ, ಇತ್ತೀಚಿನ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಕೊಹ್ಲಿ, ಎರಡು ಸ್ಥಾನಗಳ ಕುಸಿತ ಕಂಡು 14ನೇ ಸ್ಥಾನಕ್ಕೆ ತಲುಪಿದ್ದಾರೆ. ಕಳೆದ 6 ವರ್ಷಗಳಲ್ಲಿ ಇದು ಅವ್ರ ಅತ್ಯಂತ ಕಳಪೆ ಟೆಸ್ಟ್ ಶ್ರೇಯಾಂಕವಾಗಿದೆ. ಇದಕ್ಕೂ ಮೊದಲು 2016ರ ನವೆಂಬರ್’ನಲ್ಲಿ ಕಳಪೆ ಶ್ರೇಯಾಂಕದಲ್ಲಿದ್ದರು.
ಶ್ರೇಯಸ್ ಅಯ್ಯರ್ ಲಾಂಗ್ ಜಂಪ್.!
ಶ್ರೇಯಸ್ ಅಯ್ಯರ್ ಈ ವರ್ಷವಿಡೀ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್’ನಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ಇನ್ನು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಬ್ಯಾಟ್ ಬೀಸಿದರು. ಇದರ ಪರಿಣಾಮವಾಗಿ, ಶ್ರೇಯಸ್ ನೇರವಾಗಿ 10 ಸ್ಥಾನಗಳ ಜಿಗಿತ ಕಂಡು ಟೆಸ್ಟ್ ರ್ಯಾಂಕಿಂಗ್ನಲ್ಲಿ 16 ನೇ ಸ್ಥಾನಕ್ಕೆ ತಲುಪಿದ್ದಾರೆ.
ಟಾಪ್-10ರಲ್ಲಿ ಇಬ್ಬರು ಭಾರತೀಯ ಬ್ಯಾಟ್ಸ್ ಮ್ಯಾನ್’ಗಳು
ಬ್ಯಾಟ್ಸ್ಮನ್’ಗಳ ರ್ಯಾಂಕಿಂಗ್’ನಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ, ಬಾಬರ್ ಅಜಮ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್ ಮತ್ತು ಜೋ ರೂಟ್ ಈ ಪಟ್ಟಿಯಲ್ಲಿ ಅಗ್ರ 5 ಬ್ಯಾಟ್ಸ್ಮನ್’ಗಳಾಗಿದ್ದಾರೆ. ಇಲ್ಲಿ ರಿಷಭ್ ಪಂತ್ ಆರನೇ ಕ್ರಮಾಂಕದಲ್ಲಿ ಉಳಿದಿದ್ದಾರೆ. ಅವರ ನಂತರದ ಸ್ಥಾನದಲ್ಲಿ ಕೇನ್ ವಿಲಿಯಮ್ಸನ್, ದಿಮುತ್ ಕರುಣರತ್ನೆ, ರೋಹಿತ್ ಶರ್ಮಾ ಮತ್ತು ಉಸ್ಮಾನ್ ಖವಾಜಾ ಇದ್ದಾರೆ.
ಐಸಿಸಿ ರ್ಯಾಂಕಿಂಗ್: ಟಾಪ್-10 ಬೌಲರ್ಗಳು.!
ಟೆಸ್ಟ್ ಬೌಲರುಗಳಲ್ಲಿ ಅಗ್ರ-10ರಲ್ಲಿ ಯಾವುದೇ ಬದಲಾವಣೆ ಇಲ್ಲ. ಇಲ್ಲಿ ಪ್ಯಾಟ್ ಕಮಿನ್ಸ್ ಮೊದಲ ಸ್ಥಾನದಲ್ಲಿ ಉಳಿದಿದ್ದಾರೆ. ಜೇಮ್ಸ್ ಆಂಡರ್ಸನ್, ಕಗಿಸೊ ರಬಾಡ, ಜಸ್ಪ್ರೀತ್ ಬುಮ್ರಾ, ಆರ್ ಅಶ್ವಿನ್, ಒಲ್ಲಿ ರಾಬಿನ್ಸನ್, ಶಾಹೀನ್ ಅಫ್ರಿದಿ, ಕೈಲ್ ಜೇಮಿಸನ್, ಮಿಚೆಲ್ ಸ್ಟಾರ್ಕ್ ಮತ್ತು ನೀಲ್ ವ್ಯಾಗ್ನರ್ ನಂತರದ ಸ್ಥಾನದಲ್ಲಿದ್ದಾರೆ.
ಐಸಿಸಿ ರ್ಯಾಂಕಿಂಗ್: ಟಾಪ್-10 ಆಲ್ರೌಂಡರ್ಗಳು.!
ಟೆಸ್ಟ್ ಆಲ್ರೌಂಡರ್ಗಳಲ್ಲಿ ಮೊದಲ ಎರಡು ಸ್ಥಾನಗಳನ್ನು ಭಾರತೀಯರು ಆಕ್ರಮಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದ್ದರೆ, ಆರ್ ಅಶ್ವಿನ್ ಎರಡನೇ ಸ್ಥಾನದಲ್ಲಿದ್ದಾರೆ. ಶಕೀಬ್ ಅಲ್ ಹಸನ್ ಮೂರನೇ ಸ್ಥಾನದಲ್ಲಿದ್ದರೆ, ಬೆನ್ ಸ್ಟೋಕ್ಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮಿಚೆಲ್ ಸ್ಟಾರ್ಕ್, ಜೇಸನ್ ಹೋಲ್ಡರ್, ಪ್ಯಾಟ್ ಕಮಿನ್ಸ್, ಕಾಲಿನ್ ಡಿ ಗ್ರಾಡ್ಹೋಮ್, ಕೈಲ್ ಮೇಯರ್ಸ್ ಮತ್ತು ಕೈಲ್ ಜೇಮಿಸನ್ ನಂತರದ ಸ್ಥಾನದಲ್ಲಿದ್ದಾರೆ.
BREAKING NEWS : ಮೋದಿ ತಾಯಿ ‘ಹೀರಾಬೆನ್’ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ಪ್ರಧಾನಿ ಭೇಟಿ |Heeraben Modi
JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Viral Video : ಮೀನು ತಿನ್ನುವ ಆಸೆಯಿಂದ ಮಾರ್ಗ ಮಧ್ಯೆ ‘ರೈಲು’ ನಿಲ್ಲಿಸಿದ ಚಾಲಕ, ವಿಡಿಯೋ ವೈರಲ್