ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ನ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಹಠಾತ್ ರೋಗಿಗಳ ವೇಷದಲ್ಲಿ ಆಸ್ಪತ್ರೆಗೆ ತೆರಳಿದಂತ ಐಎಎಸ್ ಅಧಿಕಾರಿ, ಅವ್ಯವಸ್ಥೆಯನ್ನು ಬಹಿರಂಗಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಹೀಗೆ ಐಎಎಸ್ ಅಧಿಕಾರಿ ಮಾರುವೇಶದಲ್ಲಿ ಆಸ್ಪತ್ರೆ ತೆರಳಿದಂತ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಐಎಎಸ್ ಅಧಿಕಾರಿ ಕೃತಿ ರಾಜ್ ತನ್ನ ಮುಖವನ್ನು ಮರೆಮಾಚಲು ಘೂಂಘಾಟ್ ಅಥವಾ ಬುರ್ಖಾ ಧರಿಸಿ ಆರೋಗ್ಯ ಕೇಂದ್ರಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಯಾವುದೇ ಭದ್ರತೆಯಿಲ್ಲದೆ ಇತರ ರೋಗಿಗಳೊಂದಿಗೆ ಬೆರೆತರು.
ಫಿರೋಜಾಬಾದ್ ಎಸ್ಡಿಎಂ (ಸದರ್) ಕೃತಿ ರಾಜ್ ಅವರು ಫಿರೋಜಾಬಾದ್ನ ದಿದಾ ಮಾಯ್ ಆರೋಗ್ಯ ಕೇಂದ್ರದ ತಪಾಸಣೆಯ ಸಮಯದಲ್ಲಿ ಹಲವಾರು ಅವ್ಯವಸ್ಥೆಯನ್ನು ಕಂಡುಕೊಂಡರು. ಫಾರ್ಮಸಿಯಲ್ಲಿ ಅವಧಿ ಮೀರಿದ ಔಷಧಿಗಳು, ಉದ್ಯೋಗಿಗಳು ಕೆಲಸಕ್ಕೆ ಹಾಜರಾಗದಿರುವುದು, ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆ ಮತ್ತು ರೋಗಿಗಳಿಗೆ ಚುಚ್ಚುಮದ್ದನ್ನು ಸರಿಯಾಗಿ ನೀಡದಿರುವುದು ಗಮನಿಸಿದ್ದಾರೆ.
2021ರ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿರುವಂತ ಕೃತಿ ರಾಜ್ ಅವರು, ಮಾರು ವೇಷದಲ್ಲಿ ವೈದ್ಯರೊಂದಿಗೆ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
“ನಾಯಿ ಕಡಿತಕ್ಕೆ ಚುಚ್ಚುಮದ್ದು ನೀಡಲು ಬೆಳಿಗ್ಗೆ 10 ಗಂಟೆಯ ನಂತರವೂ ವೈದ್ಯರು ಹಾಜರಾಗಿಲ್ಲ ಎಂದು ದಿದಾ ಮಾಯ್ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದಂತೆ ನನಗೆ ದೂರು ಬಂದಿತ್ತು. ನಾನು ಅನಾಮಧೇಯವಾಗಿ ಬುರ್ಖಾ ಧರಿಸಿ ಅಲ್ಲಿಗೆ ಹೋಗಿದ್ದೆ, ವೈದ್ಯರ ನಡವಳಿಕೆ ಸೂಕ್ತವಲ್ಲ” ಎಂದು ರಾಜ್ ಹೇಳಿದರು.
“ಅರ್ಧದಷ್ಟು ಔಷಧಿಗಳು ಅವಧಿ ಮೀರಿವೆ, ಶುಚಿತ್ವವನ್ನು ಸಹ ಕಾಪಾಡಿಕೊಳ್ಳಲಾಗಿಲ್ಲ” ಎಂದು ಅವರು ಹೇಳಿದರು. “ಸಾರ್ವಜನಿಕ ಸೇವೆಯ ಮನೋಭಾವದಿಂದ ಕೆಲಸವನ್ನು ಮಾಡಲಾಗುತ್ತಿಲ್ಲ. ನಾವು ಈ ದೂರುಗಳನ್ನು ಗಮನಿಸಿದ್ದೇವೆ. ಈ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದರು.
ಸುದ್ದಿ ಸಂಸ್ಥೆ ಎಎನ್ಐ ಹಂಚಿಕೊಂಡಿರುವ ಒಂದು ವೀಡಿಯೊದಲ್ಲಿ ಐಎಎಸ್ ಅಧಿಕಾರಿ ಅವಧಿ ಮೀರಿದ ಔಷಧಿಗಳನ್ನು ಸಂಗ್ರಹಿಸಿದ್ದಕ್ಕಾಗಿ ಸರ್ಕಾರಿ ಆರೋಗ್ಯ ಕೇಂದ್ರದ ನೌಕರರನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ನೋಡಬಹುದಾಗಿದೆ.
#WATCH | Uttar Pradesh: Sub-Divisional Magistrate Sadar Kriti Raj inspected a government health centre in Firozabad, after receiving several complaints regarding inconveniences faced by patients.
(Source: SDM Office) pic.twitter.com/UZamZhpvxJ
— ANI UP/Uttarakhand (@ANINewsUP) March 13, 2024
ಉದ್ಯೋಗ ವಾರ್ತೆ: ಬಿಎಂಟಿಸಿಯ ‘2,500 ನಿರ್ವಾಹಕ’ರ ಹುದ್ದೆಗೆ ಅರ್ಜಿ ಆಹ್ವಾನ, ಏ.10 ಕೊನೇ ದಿನ
ತಪ್ಪು ತಿದ್ದಿಕೊಳ್ಳಲು ಅವಕಾಶ ಕೊಡಿ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭಾವುಕ ನುಡಿ