ಸಿದ್ಧಾರ್ಥನಗರ (ಉತ್ತರ ಪ್ರದೇಶ):ರಾಜ್ಯ ಸರ್ಕಾರದ ಮನವಿಯ ಮೇರೆಗೆ ವಾಯುಪಡೆಯ ಸೆಂಟ್ರಲ್ ಏರ್ ಕಮಾಂಡ್‌ನಿಂದ Mi-17 V5 ಹೆಲಿಕಾಪ್ಟರ್ ಅನ್ನು ಈ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಮುಂಜಾನೆ 5:20ರ ಸುಮಾರಿಗೆ ಕಾನ್ಶೀರಾಮ್ ಆವಾಸಿ ಕಾಲೋನಿಗೆ ತಲುಪಿದ ವಿಮಾನವು ಕೇವಲ 15 ನಿಮಿಷಗಳಲ್ಲಿ ಯುವಕರನ್ನು ರಕ್ಷಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತು. ರಕ್ಷಿಸಲ್ಪಟ್ಟ ಇಬ್ಬರು ಯುವಕರನ್ನು ಅಲ್ಲಿಂದ ವೈಮಾನಿಕ ಮಾರ್ಗದ ಮೂಲಕ ಗೋರಖ್‌ಪುರಕ್ಕೆ ಕರೆದೊಯ್ಯಲಾಯಿತು.
ಜಿಲ್ಲಾಧಿಕಾರಿ (DM), ಹೆಚ್ಚುವರಿ ಜಿಲ್ಲಾಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಎಸ್‌ಡಿಎಂ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.
ಈ ರಕ್ಷಣಾ ಕಾರ್ಯದಲ್ಲಿ ವಿದ್ಯುತ್ ಇಲಾಖೆ, ನಗರಸಭೆ, ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಸಕ್ರಿಯವಾಗಿ ಪಾಲ್ಗೊಂಡಿದ್ದವು.
16 ಗಂಟೆಗಳ ಕಾಲ ನೀರಿನ ಟ್ಯಾಂಕ್ ಮೇಲೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವಕರಿಗೆ ಹೆಲಿಕಾಪ್ಟರ್ ಮೂಲಕ ಹೊಸ ಜೀವನ ಲಭಿಸಿದೆ.
सिद्धार्थनगर रेस्क्यू ऑपरेशन 🚁
कड़ी मशक्कत के बाद काशीराम आवास के पास पानी की टंकी पर फंसे दो युवकों को भारतीय वायु सेना के MI-17 हेलीकॉप्टर से सुबह करीब 5:20 बजे सुरक्षित रेस्क्यू किया गया।
जिलाधिकारी शिवशरणप्पा जी एन के समन्वय और प्रशासन की त्वरित कार्रवाई से यह चुनौतीपूर्ण… pic.twitter.com/46KKwjeaEq— Yati Sharma (@yati_Official1) May 3, 2026








