ಶಿವಮೊಗ್ಗ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನ ನರೇಂದ್ರ ಮೋದಿ ಅವರು ನಾಳೆ ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು ಪಕ್ಷದ ಪ್ರಚಾರ ಮಾಡಲಿದ್ದಾರೆ. ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ನಾಳೆ ಬಿಜೆಪಿ ಸಮಾವೇಶ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ನಾನು ಈ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
‘ಮತದಾರರ ಗುರುತಿನ ಚೀಟಿ’ ಎಂದರೇನು? ಪಡೆಯುವುದು ಹೇಗೆ.? ಮಹತ್ವ ಏನು? ಇಲ್ಲಿದೆ ಮಾಹಿತಿ | Voter ID Card
ಈ ವಿಷಯವಾಗಿ ಸುದಿಗಾರರೊಂದಿಗೆ ಮಾತನಾಡಿದ ಅವರು ನಾನು ಸ್ವತಂತ್ರ ಅಭ್ಯರ್ಥಿಯಾಗಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಈ ಒಂದು ಲೋಕಸಭಾ ಚುನಾವಣೆಯಲ್ಲಿ ಆಗಿರುವ ಸಾಧಿಸಿ ನರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬೆಂಬಲ ಸೂಚಿಸುತ್ತೇನೆ ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷವನ್ನು ಬಿಡುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ನಾನು ಕೆಎಸ್ ಈಶ್ವರಪ್ಪ ಪುತ್ರ ‘ಕಾಂತೇಶ್’ಗೆ ಟಿಕೆಟ್ ತಪ್ಪಲು ಕಾರಣವಲ್ಲ: ಬಿಎಸ್ ಯಡಿಯೂರಪ್ಪ ಸ್ಪಷ್ಟನೆ
ಆದರೆ ಮೋದಿ ಸ್ವಾಗತ ಕಟೌಟ್ ನಲ್ಲಿ ಈಶ್ವರಪ್ಪ ಭಾವಚಿತ್ರ ಇದೆ. ಶಿವಮೊಗ್ಗದಲ್ಲಿ ನಾಳೆ ಮೋದಿ ಪ್ರಚಾರ ಸಮಾವೇಶವಿದೆ.ಟಿಕೆಟ್ ಸಿಗದೇ ಕೆ ಎಸ್ ಈಶ್ವರಪ್ಪ ಇದೀಗ ಬಂಡಾಯ ಎದ್ದಿದ್ದಾರೆ ಎನ್ನಲಾಗಿದೆ. ನಾಳಿನ ಮೋದಿ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.ಹೀಗಿದ್ದರೂ ಕಟೌಟ್ ಅಲ್ಲಿ ಮಾತ್ರ ಈಶ್ವರಪ್ಪ ಅವರ ಭಾವಚಿತ್ರವಿದೆ.
Rain in Karnataka: ಮಾ.21ರಿಂದ ಈ ಜಿಲ್ಲೆಗಳಲ್ಲಿ ‘ಮಳೆ’ಯಾಗಲಿದೆ: ‘ಹವಾಮಾನ ಇಲಾಖೆ’ ಮುನ್ಸೂಚನೆ
ಇನ್ನು ಉತ್ತರ ಕಾಂತೇಶ್ ಗೆ ಟಿಕೆಟ್ ತಪ್ಪಿದ ಕುರಿತಾಗಿ ಮಾತನಾಡಿದ ಅವರು, ಕೇವಲ ನನ್ನ ಮಗನಿಗೆ ಟಿಕೆಟ್ ತಪ್ಪಿದ್ದು ಅಷ್ಟೇ ಅಲ್ಲದೆ ಇಡೀ ರಾಜ್ಯದ ಎಲ್ಲಾ ಪ್ರಮುಖ ನಾಯಕರಿಗೆ ಮುಖಂಡರಿಗೆ ಬಿಎಸ್ ಯಡಿಯೂರಪ್ಪ ಅವರು ಮೋಸ ಮಾಡಿದ್ದಾರೆ. ಹಾಗಾಗಿ ನಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ತಿಳಿಸಿದರು.