ಬೆಂಗಳೂರು: ರಾಜಕೀಯವಾಗಿ ಹಾವು-ಏಣಿಯಾಟದಂತಿರುವ ರಾಜ್ಯ ಮತ್ತು ಕೇಂದ್ರದ ಇಬ್ಬರು ಪ್ರಬಲ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಅವರ ಅಪರೂಪದ ಕ್ಷಣವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಏನಿದು ವಿಶೇಷ?
ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ನಡೆದ ‘ಶ್ರೀ ಗುರು ಭೈರವೈಕ್ಯ ಮಂದಿರ’ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿಗಳು ಸಿಎಂ ಸಿದ್ದರಾಮಯ್ಯ ಅವರ ಕಿವಿಯಲ್ಲಿ ಏನೋ ರಹಸ್ಯವಾಗಿ ಹೇಳುತ್ತಿರುವ ಫೋಟೋ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಕಿವಿಯಲ್ಲಿ ಗುಸುಗುಸು: ಪ್ರಧಾನಿ ಮೋದಿ ಅತ್ಯಂತ ಆತ್ಮೀಯವಾಗಿ ಸಿಎಂ ಕಿವಿಯಲ್ಲಿ ಮಾತನಾಡುತ್ತಿದ್ದರೆ, ಸಿದ್ದರಾಮಯ್ಯ ಅವರು ಅಷ್ಟೇ ಗಂಭೀರವಾಗಿ ಆಲಿಸುತ್ತಿರುವುದು ಕಂಡುಬಂದಿದೆ.
ಸಿಎಂ ರಿಂದಲೇ ಪೋಸ್ಟ್: ವಿಶೇಷವೆಂದರೆ, ಸ್ವತಃ ಮುಖ್ಯಮಂತ್ರಿಗಳೇ ಈ ಫೋಟೋವನ್ನು ತಮ್ಮ ಅಧಿಕೃತ ‘X’ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ನೆಟ್ಟಿಗರ ಚರ್ಚೆ:
ಪರಸ್ಪರ ರಾಜಕೀಯ ಟೀಕೆಗಳಲ್ಲಿ ತೊಡಗುವ ಈ ಇಬ್ಬರು ನಾಯಕರು ವೇದಿಕೆಯ ಮೇಲೆ ಇಷ್ಟೊಂದು ಆತ್ಮೀಯವಾಗಿ ಇರುವುದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಮೋದಿ ಅವರು ಸಿದ್ದರಾಮಯ್ಯ ಅವರಿಗೆ ಯಾವ ಗುಟ್ಟು ಹೇಳಿರಬಹುದು?” ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುತ್ತಿದೆ.
ಆದಿಚುಂಚನಗಿರಿ ಮಠದ ಕಾರ್ಯಕ್ರಮದ ನಿಮಿತ್ತ ಇಂದು ಬೆಂಗಳೂರಿಗೆ ಬಂದಿಳಿದ ಪ್ರಧಾನಮಂತ್ರಿ ಶ್ರೀ @narendramodi ಅವರನ್ನು ನಾಡಿಗೆ ಬರಮಾಡಿಕೊಂಡು, ಶುಭ ಕೋರಿದೆ.
ಸಚಿವರಾದ ಕೃಷ್ಣಬೈರೇಗೌಡ, ಸರ್ಕಾರದ ಮುಖ್ಯಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರು ಈ ವೇಳೆ ಹಾಜರಿದ್ದರು.
Welcomed Hon’ble Prime Minister Shri Narendra Modi to… pic.twitter.com/a2f54FGCIJ
— Siddaramaiah (@siddaramaiah) April 15, 2026








