ದಾವಣಗೆರೆ: ನ್ಯಾಯಾಲಯದ ತೀರ್ಪಿನ ಬಗ್ಗೆ ನಾನು ಮಾತನಾಡುವುದಿಲ್ಲ. ಸೂಕ್ತ ಸಮಯದಲ್ಲಿ ನಾನು ಎಲ್ಲಾ ಮಾತನಾಡುತ್ತೇನೆ. ನಿಮ್ಮನ್ನು ಕೆರೆದು ಮಾತನಾಡುವುದಾಗಿ ಪೋಕ್ಸೋ ಕೇಸಲ್ಲಿ ನಿರ್ದೋಷಿ ತೀರ್ಪು ಬಂದ ಬಳಿಕ ಮುರುಘಾ ಶರಣರು ಮೊದಲ ಪ್ರತಿಕ್ರಿಯೆ ನೀಡಿದರು.
ಪೋಕ್ಸೋ ಕೇಸಲ್ಲಿ ಶಿವಮೂರ್ತಿ ಮುರುಘಾ ಶರಣರು ನಿರ್ದೋಷಿ: ವಕೀಲ ಕೆಬಿಕೆ ಸ್ವಾಮಿ
ಮೊದಲ ಪೋಕ್ಸೋ ಕೇಸಲ್ಲಿ ಶಿವಮೂರ್ತಿ ಮುರುಘಾ ಶರಣರನ್ನು ಕೋರ್ಟ್ ನಿರ್ದೋಷಿ ಎಂಬುದಾಗಿ ತೀರ್ಪು ನೀಡಿದೆ. ಹೀಗಾಗಿ ಶಿವಮೂರ್ತಿ ಮುರುಘಾ ಶರಣರು ನಿರಾಳರಾಗಿದ್ದಾರೆ ಎಂಬುದಾಗಿ ಮುರುಘಾ ಶ್ರೀ ಪರ ವಕೀಲ ಕೆಬಿಕೆ ಸ್ವಾಮಿ ತಿಳಿಸಿದ್ದಾರೆ.
ಕೋರ್ಟ್ ತೀರ್ಪಿನ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುರುಘಾ ಶರಣರು, ಮತ್ತಿಬ್ಬರು ಆರೋಪಿಗಳಿಗೆ ಕೋರ್ಟ್ ಪೋಕ್ಸೋ ಕೇಸಲ್ಲಿ ಖುಲಾಸೆಗೊಳಿಸಿದೆ. ಮುಂದಿನ ದಿನಗಳಲ್ಲಿ ಮುರುಘಾ ಮಠಕ್ಕೆ ಒಳ್ಳೆಯದನ್ನು ತರಲಿ. ಮುರುಘಾ ಶ್ರೀಗಳು ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು. ನಾಳೆ ಶ್ರೀಗಳಿಗೆ ಮತ್ತೊಂದು ತಪಾಸಣೆ ಇದೆ ಎಂದರು.
ಮುರುಘಾ ಶರಣರಿಗೆ ನಿರ್ಬಂಧ ವಿಚಾರವಾಗಿ ಈಗ ಪ್ರತಿಕ್ರಿಯಿಸಲ್ಲ ಎಂದು ಹೇಳಿದರು.
ಅಂದಹಾಗೇ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಮೊದಲ ಪೋಕ್ಸೋ ಕೇಸಲ್ಲಿ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಖುಲಾಸೆಗೊಳಿಸಿ ಮಹತ್ವದ ತೀರ್ಪು ಪ್ರಕಟಿಸಿದೆ.








