Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕರ್ನಾಟಕ ಕಾಂಗ್ರೆಸ್ ಓಬಿಸಿ ಘಟಕಕ್ಕೆ ನೂತನ ಸಾರಥಿ: ಅಧ್ಯಕ್ಷರಾಗಿ ಡಿ.ಟಿ.ಶ್ರೀನಿವಾಸ್ ನೇಮಕ

BREAKING: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ತಂದೆ-ಮಗ ಸಾವು, ಬಾಲಕಿ ಗಂಭೀರ

‘ಫ್ರೆಶ್’ ಕಾಣಲು ಸೌತೆಕಾಯಿಗೆ ವಿಷಕಾರಿ ಬಣ್ಣದ ಸ್ನಾನ! ಹಸಿರು ಪೇಂಟ್ ಹಚ್ಚುತ್ತಿದ್ದ ಮಹಿಳೆ ಸೆರೆ: ವಿಡಿಯೋ ವೈರಲ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಾನು ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಎದೆಗುಂದಲ್ಲ, ಹೋರಾಟ ಮಾಡುತ್ತೇನೆ: ನಿಖಿಲ್ ಕುಮಾರಸ್ವಾಮಿ
KARNATAKA

ನಾನು ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಎದೆಗುಂದಲ್ಲ, ಹೋರಾಟ ಮಾಡುತ್ತೇನೆ: ನಿಖಿಲ್ ಕುಮಾರಸ್ವಾಮಿ

By kannadanewsnow09

ಬಿಡದಿ/ರಾಮನಗರ: ಚನ್ನಪಟ್ಟಣದ ಜನತೆ ನೀಡಿದ ತೀರ್ಪಿಗೆ ನಾನು ತಲೆಬಾಗಿದ್ದೇನೆ. ಅವರ ಅದೇಶವನ್ನು ಒಪ್ಪಿಕೊಳ್ಳುತ್ತಿದ್ದೇನೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನು ಬಿಟ್ಟು ಪಲಾಯನ ಮಾಡುವ ವ್ಯಕ್ತಿ ನಾನಲ್ಲ, ಎದೆಗುಂದುವ ಪ್ರಶೆಯೂ ಇಲ್ಲ. ಸೋತಿದ್ದೇನೆ ಅಂತ ಸುಮ್ಮನೇ ಕೂರಲ್ಲ, ಹೋರಾಟ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಚನ್ನಪಟ್ಟಣ ಚುನಾವಣೆ ಫಲಿತಾಂಶದ ಬಳಿಕ ಬಿಡದಿ ತೋಟದ ಮನೆಯಲ್ಲಿ ಮಾಧ್ಯಮಗಳ ಜತೆ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಜನರ ಆದೇಶವೇ ಅಂತಿಮ. ಅವರ ತೀರ್ಪಿಗೆ ತಲೆಬಾಗುತ್ತೇನೆ. ಇದು ನನಗೆ ಮೂರನೇ ಸೋಲು. ಈ ಸೋಲನ್ನು ವಿನಮ್ರವಾಗಿ ಸ್ವೀಕಾರ ಮಾಡುತ್ತೇನೆ. ಕ್ಷೇತ್ರದ ಜನತೆಯ ನಿರಂತರವಾಗಿ ಇರುತ್ತೇನೆ, ಅವರ ಸೇವೆ ಮಾಡುತ್ತೇನೆ. ನನ್ನ ಪರವಾಗಿ ಚುನಾವಣೆಯಲ್ಲಿ ಹಗಲು ರಾತ್ರಿ ಅವಿರತವಾಗಿ ಕೆಲಸ ಮಾಡಿದ ಜೆಡಿಎಸ್ ಬಿಜೆಪಿ ಪಕ್ಷಗಳ ಎಲ್ಲಾ ಕಾರ್ಯಕರ್ತರು, ಮುಖಂಡರು ಸೇರಿ ಎಲ್ಲರಿಗೂ ಶಿರಬಾಗಿ ನಮಿಸುತ್ತೇನೆ ಎಂದು ಅವರು ಹೇಳಿದರು.

ಇದು ನಾನು ಬಯಸದೇ ಬಂದ ಉಪ ಚುನಾವಣೆ. ಕಡೆ ಗಳಿಗೆಯಲ್ಲಿ ತೆಗೆದುಕೊಂಡ ನಿರ್ಧಾರ. ಪಕ್ಷ ಕಷ್ಟಕಾಲದಲ್ಲಿ ಇದ್ದಾಗ ತಲೆಬಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೇನೆ. 87,031 ಜನರು ನನ್ನ ಪರವಾಗಿ ಮತ ಹಾಕಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿ ಮಾಡಲಾರೆ. ಚುನಾವಣೆ ಸಂದರ್ಭದಲ್ಲಿ ಜನತೆಗೆ ನಾನು ಕೆಲ ಮಾತು ಕೊಟ್ಟಿದ್ದೇನೆ. ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು.

ಚನ್ನಪಟ್ಟಣ ಫಲಿತಾಂಶ ಅಘಾತ ತಂದಿದೆ ನಿಜ. ಆದರೆ, ಕೇವಲ ಅತ್ಯಂತ ಕಡಿಮೆ ಅವಧಿಯಲ್ಲಿ ಒಬ್ಬ ಯುವಕನಿಗೆ 87,031 ಮತಗಳು ಬಂದಿವೆ. ಇದು ಸಣ್ಣ ಪ್ರಮಾಣದ ಮತವಲ್ಲ, ಜನರ ಋಣ ತೀರಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ. ಎಲ್ಲರಿಗೂ ದನಿಯಾಗಿ ಇರುತ್ತೇನೆ. ಇಲ್ಲಿ ನಾವು ಎಡವಿದ್ದೇವೆ. ಎಲ್ಲಿ ಸರಿಪಡಿಸಿಕೊಳ್ಳ ಬೇಕೆಂದು ಕೂತು ಚರ್ಚೆ ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.

ಈ ಸೋಲಿನಿಂದ ನಾನು ಎದೆಗುಂದಲ್ಲ

ನಿಖಿಲ್ ಕುಮಾರಸ್ವಾಮಿಯಿಂದ ಪಕ್ಷ ಅಲ್ಲ, ಪಕ್ಷದಿಂದ ನಿಖಿಲ್ ಕುಮಾರಸ್ವಾಮಿ ಎಂದು ನಂಬಿರುವವನು ನಾನು. ಒಬ್ಬ ಸಾಮಾನ್ಯ ಕಾರ್ಯಕರ್ತನ ಹಾಗೆ ಕೆಲಸ ಮಾಡುತ್ತೇನೆ. ಈ ಸೋಲಿನಿಂದ ನಾನು ಎದೆಗುಂದಲ್ಲ, ಯುವ ಸಮುದಾಯದ ದನಿಯಾಗಿ ಕೆಲಸ ಮಾಡುತ್ತೇನೆ ಎಂದರು.

ದೇವೆಗೌಡರು ಮತ್ತು ಕುಮಾರಸ್ವಾಮಿ ಅವರನ್ನು ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಸಿದವರು ರಾಮನಗರ ಜಿಲ್ಲೆಯ ಜನತೆ. ನಾನು ಚುನಾವಣೆ ವೇಳೆ ಮಾತಾಡಿದ ಮಾತು ಕೇವಲ ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ. ನಾನು ಕೊಟ್ಟಿರುವ ಯಾವುದೇ ಮಾತು ಹಿಂಪಡೆಯೋದಿಲ್ಲ. ಅದನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ತಿಳಿಸಿದರು.

ನಾನು ಈ ಜಿಲ್ಲೆಯ ಮಗ ಅಂತ ಭಾವಿಸುತ್ತೇನೆ. ನನಗೆ ಕ್ಷೇತ್ರದ ಜನರ ಪ್ರೀತಿ ವಾತ್ಸಲ್ಯ ದಕ್ಕಿದೆ. ನಾವೇನು ಇಲ್ಲಿ ಜನಿಸಿಲ್ಲದಿರಬಹುದು, ನಮ್ಮದು ಅತ್ಯಂತ ಭಾವನಾತ್ಮಕ ಸಂಬಂಧ. ರಾಮನಗರದ ಜಿಲ್ಲೆ ಜನರ ಜತೆ ಪ್ರಾಮಾಣಿಕವಾಗಿ ಹೆಜ್ಜೆ ಹಾಕುತ್ತೇನೆ. ಕುಮಾರಣ್ಣನ ಜತೆಗೂಡಿ ಪ್ರಾಮಾಣಿಕವಾಗಿ ಕೆಲಸ ಮಾಡ್ತೇನೆ. ಮಂಡ್ಯ ಮತ್ತು ರಾಮನಗರ ಜನತೆ ಶಕ್ತಿ ತುಂಬಿಸಿ ಕುಮಾರಣ್ಣ ಅವರನ್ನು ಕೇಂದ್ರದ ಮಂತ್ರಿ ಮಾಡಿದ್ದಾರೆ ಜನರು. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ನಿಖಿಲ್ ಅವರು ತಿಳಿಸಿದರು.

ಒಂದು ಸಮುದಾಯದ ಮತ ಕಾಂಗ್ರೆಸ್ ಗೆ ಮಾತ್ರ ಹೋಗಿವೆ:

ಒಂದು ನಿರ್ದಿಷ್ಟ ಸಮುದಾಯದ ಮತಗಳು ಕಾಂಗ್ರೆಸ್ ಪರವಾಗಿ ಕ್ರೋಢೀಕರಣ ಆಗಿವೆ. ಈ ಪಕ್ಷ ಸ್ಥಾಪನೆಯಾದಾಗಿಂದ ಆ ಸಮುದಾಯದ ಪರವಾಗಿಯೂ ನಮ್ಮ ಪಕ್ಷ ಹೋರಾಟ ನಡೆಸಿತ್ತು. ದೇವೇಗೌಡರು ಮೀಸಲಾತಿ ನೀಡಿದ್ದರು. ಅವರಿಗೆ ದೇವೇಗೌಡರು, ಕುಮಾರಸ್ವಾಮಿ ಅವರು ಸಾಕಷ್ಟು ಒಳ್ಳೆಯದು ಮಾಡಿದ್ದಾರೆ. ಆದರೂ ಆ ಸಮುದಾಯ ನಮ್ಮ ಪರ ಮತ ಹಾಕಿಲ್ಲ, ಈ ಬಗ್ಗೆ ಹೆಚ್ಚು ಚರ್ಚೆ ಮಾಡಲು ನಾನು ಬಯಸುವುದಿಲ್ಲ ಎಂದು ನಿಖಿಲ್ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಕಾರ್ಯಕರ್ತರೇ ಜೆಡಿಎಸ್ ಪಕ್ಷದ ಬೆನ್ನೆಲುಬು, ಶಕ್ತಿ. ದೇವೆಗೌಡರು ಫೀನಿಕ್ಸ್ ನಂತೆ ಜೆಡಿಸ್ ಪಕ್ಷವನ್ನ ಕಟ್ಟಿದ್ದಾರೆ.ಎಲ್ಲ ಏಳು ಬೀಳುಗಳನ್ನು ನೋಡಿದ್ದೇವೆ. ಎಲ್ಲವನ್ನು ಸಮಚಿತ್ತವಾಗಿ ಕೊಂಡೋಯ್ಯುತ್ತೀವಿ.ಎಲ್ಲ ಸಮುದಾಯಗಳಿಗೆ ಧ್ವನಿಯಾಗುವ ಕೆಲಸ ಮಾಡ್ತೀವಿ ಎಂದು ತಿಳಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎಲ್ಲಾ ನಾಯಕರು, ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಮತದಾರರಿಂದ ತಕ್ಕ ಉತ್ತರ: ಮಾಜಿ ಸಂಸದ ಡಿ.ಕೆ. ಸುರೇಶ್

ಈ ಉಪಚುನಾವಣೆ ಫಲಿತಾಂಶ, 2028ರ ಚುನಾವಣೆ ಫಲಿತಾಂಶಕ್ಕೆ ರಾಜ್ಯದ ಜನರ ಮುನ್ನುಡಿ: DKS

Share. Facebook Twitter LinkedIn WhatsApp Email

Related Posts

ಕರ್ನಾಟಕ ಕಾಂಗ್ರೆಸ್ ಓಬಿಸಿ ಘಟಕಕ್ಕೆ ನೂತನ ಸಾರಥಿ: ಅಧ್ಯಕ್ಷರಾಗಿ ಡಿ.ಟಿ.ಶ್ರೀನಿವಾಸ್ ನೇಮಕ

1 Min Read

BREAKING: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ತಂದೆ-ಮಗ ಸಾವು, ಬಾಲಕಿ ಗಂಭೀರ

1 Min Read

ಶಿವಮೊಗ್ಗ: ಸೊರಬದ ಉಳವಿಯ ಕೆರೆಯ ಬಳಿಯಲ್ಲಿ ಟಾಟಾ ಏಸ್-ಟಿಂಬರ್ ಲಾರಿ ನಡುವೆ ಅಪಘಾತ: ಯುವಕನಿಗೆ ಗಂಭೀರ ಗಾಯ

1 Min Read
Recent News

ಕರ್ನಾಟಕ ಕಾಂಗ್ರೆಸ್ ಓಬಿಸಿ ಘಟಕಕ್ಕೆ ನೂತನ ಸಾರಥಿ: ಅಧ್ಯಕ್ಷರಾಗಿ ಡಿ.ಟಿ.ಶ್ರೀನಿವಾಸ್ ನೇಮಕ

BREAKING: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ತಂದೆ-ಮಗ ಸಾವು, ಬಾಲಕಿ ಗಂಭೀರ

‘ಫ್ರೆಶ್’ ಕಾಣಲು ಸೌತೆಕಾಯಿಗೆ ವಿಷಕಾರಿ ಬಣ್ಣದ ಸ್ನಾನ! ಹಸಿರು ಪೇಂಟ್ ಹಚ್ಚುತ್ತಿದ್ದ ಮಹಿಳೆ ಸೆರೆ: ವಿಡಿಯೋ ವೈರಲ್

BREAKING: ನಾಳೆ ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣವಚನ ಸ್ವೀಕಾರ ಡೌಟ್ | TVK Chief Vijay

State News
KARNATAKA

ಕರ್ನಾಟಕ ಕಾಂಗ್ರೆಸ್ ಓಬಿಸಿ ಘಟಕಕ್ಕೆ ನೂತನ ಸಾರಥಿ: ಅಧ್ಯಕ್ಷರಾಗಿ ಡಿ.ಟಿ.ಶ್ರೀನಿವಾಸ್ ನೇಮಕ

By kannadanewsnow09 KARNATAKA 1 Min Read

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಪ್ರಮುಖ ಹೆಜ್ಜೆಯನ್ನಿಟ್ಟಿದೆ. ಕರ್ನಾಟಕ ಪ್ರದೇಶ…

BREAKING: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ತಂದೆ-ಮಗ ಸಾವು, ಬಾಲಕಿ ಗಂಭೀರ

ಶಿವಮೊಗ್ಗ: ಸೊರಬದ ಉಳವಿಯ ಕೆರೆಯ ಬಳಿಯಲ್ಲಿ ಟಾಟಾ ಏಸ್-ಟಿಂಬರ್ ಲಾರಿ ನಡುವೆ ಅಪಘಾತ: ಯುವಕನಿಗೆ ಗಂಭೀರ ಗಾಯ

ಮೇ.13ಕ್ಕೆ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರ 74ನೇ ಜನ್ಮದಿನೋತ್ಸವ ಆಚರಣೆ; ಟ್ರಸ್ಟಿ ವಿಜಯಕುಮಾರ್ ಹೆರಬೆಟ್ಟು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.