ಮಂಡ್ಯ : ಯುವ ರೈತರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ಕೃಷಿ ಮಾಡುವ ರೈತರ ಮನೆಗೆ ಹೆಣ್ಣು ಹೆತ್ತವರು ಹುಡುಕಿಕೊಂಡು ಬಂದು ಹುಡುಗಿ ಕೊಡಬೇಕು, ಹಾಗೆ ಮಾಡುತ್ತೇನೆ ಎಂದು ಹೆಚ್ಡಿಕೆ ಸವಾಲ್ ಹಾಕಿದರು.
ಹೆಣ್ಣು ಹೆತ್ತವರು ಹುಡುಕಿಕೊಂಡು ಬಂದು ಯುವ ರೈತರಿಗೆ ಹೆಣ್ಣು ಕೊಡಬೇಕು, ಹಾಗೆ ಮಾಡದಿದ್ದರೆ ನಾನು ಜೆಡಿಎಸ್ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ, ಈ ಮೂಲಕ ಯುವ ಮತದಾರರನ್ನು ಸೆಳೆಯಲು ಹೆಚ್ಡಿಕೆ ಯೋಚಿಸಿದ್ದಾರೆ.
ಪಂಚರತ್ನ ಯಾತ್ರೆ ವೇಳೆ ಕುಮಾರಸ್ವಾಮಿ ಭಾಷಣ ಮಾಡುತ್ತಿದ್ದಾಗ ಯುವಕನೊಬ್ಬ ಬಂದು ನಮಗೆ ಯಾರು ಹೆಣ್ಣು ಕೊಡಲು ಮುಂದೆ ಬರುತ್ತಾರೆ, ಹೆಣ್ಣು ಮಕ್ಕಳನ್ನು ಆಫೀಸರ್ ಗಳು ಬಂದು ಮದುವೆ ಮಾಡಿಕೊಂಡು ಹೋಗುತ್ತಾರೆ ಎಂದು ಕಣ್ಣೀರಿಟ್ಟಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಕೃಷಿ ಮಾಡುವ ರೈತರ ಮನೆಗೆ ಹೆಣ್ಣು ಹೆತ್ತವರು ಹುಡುಕಿಕೊಂಡು ಬಂದು ಹುಡುಗಿ ಕೊಡಬೇಕು, ಹಾಗೆ ಮಾಡುತ್ತೇನೆ ಎಂದು ಹೆಚ್ಡಿಕೆ ಸ್ಥಳದಲ್ಲೇ ಸವಾಲ್ ಹಾಕಿದ್ದಾರೆ.
ಅಧಿವೇಶನಕ್ಕಿಂತಲೂ ಪಂಚರತ್ನ ರಥಯಾತ್ರೆ ಮುಖ್ಯ
ಇಂದಿನ ಅಧಿವೇಶನಕ್ಕಿಂತಲೂ ಪಂಚರತ್ನ ರಥಯಾತ್ರೆ ನನಗೆ ಮುಖ್ಯವಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರಸ್ವಾಮಿ ನನಗೆ ಅಧಿವೇಶನಕ್ಕಿಂತ ಪಂಚರತ್ನ ರಥಯಾತ್ರೆಯೇ ಮುಖ್ಯ. ಕಳೆದ ಮೂರು ದಿನಗಳ ಅಧಿವೇಶನದಲ್ಲಿ ಏನು ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. 75 ವರ್ಷದಿಂದ ಈ ದೇಶದಲ್ಲಿ ಆಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಪಂಚರತ್ನ ರಥಯಾತ್ರೆಯ ಮೂಲ ಉದ್ದೇಶ ಎಂದು ಹೇಳಿದರು.
ನಾನು ಚುನಾವಣಾ ಗಿಮಿಕ್ ಮಾಡಿಕೊಂಡು ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುವುದಿಲ್ಲ. ಈಗಿನ ಬಿಜೆಪಿ ಸರ್ಕಾರ ಆ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು. ಕೊರೊನಾ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ಕೊಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
BIGG NEWS : ನಾಳೆ ‘ವಿಧಾನಪರಿಷತ್ ಉಪಸಭಾಪತಿ’ ಚುನಾವಣೆ : ಬಿಜೆಪಿ ಸದಸ್ಯರಿಗೆ ವಿಪ್ ಜಾರಿ