ಬೆಂಗಳೂರು : ಬೆಂಗಳೂರಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಕಾಮುಕನೊಬ್ಬ ಶಿಕ್ಷಕಿ ಒಬ್ಬರನ್ನು ಪರಿಚಯ ಮಾಡಿಕೊಂಡಿದ್ದಾನೆ. ಈ ವೇಳೆ ನನಗೆ ಕ್ಯಾನ್ಸರ್ ಇದೆ ಹಾಗಾಗಿ ಸಾಯೋ ಮುನ್ನ ನಿನ್ನ ಬೆತ್ತಲೆ ವಿಡಿಯೋ ಮಾಡಿ ಕಳುಹಿಸು ಎಂದಿದ್ದಾನೆ. ಇದೀಗ ಕಾಮುಕ ಇದೇ ವಿಡಿಯೋ ಇಟ್ಟುಕೊಂಡು ಶಿಕ್ಷೆಗೆ ಬ್ಲ್ಯಾಕ್ಮೇಲ್ ಮಾಡಿದ್ದು ಸದ್ಯ ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೌದು ಕಾಮುಕನೊಬ್ಬ ಇನ್ಟಾಗ್ರಾಂನಲ್ಲಿ ಶಿಕ್ಷಕಿಯೊಂದಿಗೆ ಸ್ನೇಹ ಬೆಳಸಿ ಆಕೆಗೆ ಟಾರ್ಚ್ರ್ ನೀಡಿದ ಪ್ರಕರಣ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಶಿಕ್ಷಕಿಗೆ ಮೆಸೇಜ್ ಮಾಡಿದ್ದ ಯುವಕ, ನಾನು ನಿನ್ನ ಕ್ಲಾಸ್ಮೇಟ್ ಎಂದು ಪರಿಚಯಿಸಿಕೊಂಡಿದ್ದ. ಬಳಿಕ ನನಗೆ ಕ್ಯಾನ್ಸರ್ ಇದೆ, ನಿನ್ನ ಜೊತೆ ದೈಹಿಕ ಸಂಬಂಧ ಬೆಳೆಸಬೇಕು. ಇದು ನನ್ನ ಕೊನೆ ಆಸೆ ಎಂದಿದ್ದ.
ಕಾಮುಕನ ಆಸೆಗೆ ಶಿಕ್ಷಕಿ ಒಪ್ಪಿರಲಿಲ್ಲ. ಈ ವೇಳೆ ಯುವಕ ನಾನು ಕೆಲವೇ ದಿನ ಬದುಕಿರುತ್ತೇನೆ. ಬೆತ್ತಲೆ ವಿಡಿಯೋ ಆದ್ರೂ ಕಳಿಸು ಎಂದಿದ್ದ. ಇದಕ್ಕೆ ಒಪ್ಪಿದ್ದ ಶಿಕ್ಷಕಿ ಬೆತ್ತಲೆಯ ವಿಡಿಯೋ ಕಳಿಸಿದ್ದಳು. ಬಳಿಕ ಹಣ ಕೊಡು, ನೇರವಾಗಿ ಸಿಗು, ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಸಿದ್ದ. ಬಳಿಕ ಆತನಿಗೆ ಬರುವಂತೆ ಹೇಳಿ, ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ್ದಳು.
ದೈಹಿಕ ಸಂಬಂಧದ ಆಸೆಗೆ ಬಿದ್ದು ಆಂದ್ರಪ್ರದೇಶದ ಪುಟ್ಟಪರ್ತಿಯಿಂದ ಯುವಕ ಬೆಂಗಳೂರಿಗೆ ಬಂದಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಬಂಧಿಸಲು ತೆರಳುತ್ತಿದ್ದಂತೆ ಯುವಕ ಮರ್ಮಾಂಗ ಕತ್ತರಿಸಿಕೊಳ್ಳಲು ಯತ್ನಿಸಿದ್ದ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ








