ಬೆಂಗಳೂರು: ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರು ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ರಾಜೀನಾಮೆ ಯಾಕೆ ಕೊಡಬೇಕು ಎಂದು ಹೇಳಿ, ಹೆಚ್.ಡಿಕೆಗೆ ತಿರುಗೇಟು, ಸಿಎಂ ಪರವಾಗಿ ಬ್ಯಾಟ್ ಬೀಸಿದ್ದರು. ಈ ಬೆನ್ನಲ್ಲೇ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನಾನು ಸಿದ್ಧರಾಮಯ್ಯ ರಾಜೀನಾಮೆ ಕೇಳಿಯೇ ಇಲ್ಲ ಎಂಬುದಾಗಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಮುಡಾ ಹಗರಣ ಸಂಬಂಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲಾಗಿದೆ. ಈ ಕಾರಣಕ್ಕೆ ನಾನು ಸಿದ್ಧರಾಮಯ್ಯ ಅವರನ್ನು ರಾಜೀನಾಮೆ ಕೇಳಿಯೇ ಇಲ್ಲ. ಆದರೇ ಅಧಿಕಾರ ದುರುಪಯೋಗ ಆಗಿದ್ದಕ್ಕೆ ಹಾಗೆ ಕೇಳಿದ್ದೇನೆ ಎಂಬುದಾಗಿ ಸ್ಪಷ್ಟನೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಜಿ.ಡಿ ದೇವೇಗೌಡ ಅವರು ಮಾತನಾಡಿದ್ದರಲ್ಲಿ ತಪ್ಪೇನು ಇಲ್ಲ. ಮೈಸೂರಿನವರಿಗೆ ತೊಂದರೆ ಆಗದಂತೆ ಆ ರೀತಿಯಾಗಿ ಜಿ.ಡಿ ದೇವೇಗೌಡ ಹೇಳಿಕೆ ನೀಡಿದ್ದಾರೆ ಎಂದರು.
‘ರಾಜ್ಯಾಧ್ಯಕ್ಷ’ರನ್ನು ಪ್ರಶ್ನಿಸುವುದು ಅಂದ್ರೆ ‘ಹೈಕಮಾಂಡ’ನ್ನೇ ಪ್ರಶ್ನಿಸಿದಂತೆ: ಮಾಜಿ ಸಚಿವ ಹರತಾಳು ಹಾಲಪ್ಪ
ಶಿವಮೊಗ್ಗ: ಅ.5ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut