ಬೆಂಗಳೂರು : ಆಡಿಷನ್ಗೆ ಬಾ ಎಂದು ಕಾಸ್ಟಿಂಗ್ ನಿರ್ದೇಶಕ ಸೂರ್ಯ ಅಶ್ಲೀಲವಾಗಿ ಮೆಸೇಜ್ ಮಾಡಿದ ಹಿನ್ನೆಲೆಯಲ್ಲಿ ಆತನ ವಿರುದ್ಧ ಬೆಂಗಳೂರು ನಗರದ ಆರ್.ಆರ್. ನಗರ ಠಾಣೆಯಲ್ಲಿ ನಟಿ ಅಮೂಲ್ಯ ಗೌಡ ದೂರು ನೀಡಿದ್ದಾರೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದು ಕಾಂಪ್ರಮೈಸ್ ಆಗು ಅಂದಿದ್ದಕ್ಕೆ ಆತನಿಗೆ ಪೊಲೀಸರ ಎದುರೇ ಚಪ್ಪಲಿಂದ ಹೊಡೆದಿದ್ದೇನೆ ಎಂದು ನಟಿಯ ಅಮೌಲ್ಯ ಗೌಡ ತಿಳಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ದೇಶಕ ಸೂರ್ಯ ನನಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದರು.ಹೀಗಾಗಿ ಆರ್ ಆರ್ ನಗರ ಠಾಣೆಯಲ್ಲಿ ದೂರು ಸಲ್ಲಿಸಿದ್ದೇನೆ ಎಂದು ಬೆಂಗಳೂರಿನಲ್ಲಿ ನಟಿ ಅಮೂಲ್ಯ ಗೌಡ ಹೇಳಿಕೆ ನೀಡಿದರು.
ಸೂರ್ಯ ಇದೀಗ ಪೋಲೀಸರ ಕೈಗೆ ಸಿಕ್ಕಿದ್ದಾನೆ ಪೊಲೀಸರಿಗೆ ಕಾಂಪ್ರಮೈಸ್ ಮಾಡಿಕೊಳ್ಳಿ ಅಂದರು. ನಾನು ಪೊಲೀಸರ ಮುಂದೆ ಆತನಿಗೆ ಚಪ್ಪಲಿಯಲ್ಲಿ ಹೊಡೆದೆ. ಹೀಗಾಗಿ ನನ್ನ ಮೇಲೆ ಈಗ ಎಫ್ಐಆರ್ ದಾಖಲಿಸಿದ್ದಾನೆ. ನಾನು ಸುಮ್ಮನಿದ್ದರೆ ಮತ್ತಷ್ಟು ಹುಡುಗಿಯರಿಗೆ ಇದೇ ರೀತಿ ಮಾಡುತ್ತಾನೆ ಎಂದು ಕಿಡಿ ಕಾರಿದರು.
ಹೀಗಾಗಿ ಅದಕ್ಕೆ ಬಂದು ದೂರು ಕೊಟ್ಟಿದ್ದೇನೆ. ಯೋಗರಾಜ್ ಭಟ್ ಸೇರಿ ತುಂಬಾ ಜನರ ಜೊತೆ ಕೆಲಸ ಮಾಡಿದ್ದೇನೆ. ಇಂಡಸ್ಟ್ರಿಯಲ್ಲಿ ಯಾರು ಕೂಡ ನಿರ್ದೇಶಕ ಸೂರ್ಯ ರೀತಿ ನಡೆದುಕೊಂಡಿಲ್ಲ ನಿರ್ದೇಶಕ ಸೂರ್ಯಗೆ ಸರಿಯಾಗಿ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದರು.