ಹೊಸಪೇಟೆ: ಸಚಿವ ಆನಂದ್ ಸಿಂಗ್ ( Minister Anand Singh ) ವಿರುದ್ಧ ಕುಟುಂಬ ಒಂದಕ್ಕೆ ಸುಡುವ ಬೆದರಿಕೆ ಸಂಬಂಧ ನಿನ್ನೆ ಎಸ್ಪಿ ಕಚೇರಿ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಕುಟುಂಬಸ್ಥರು ಪ್ರಯತ್ನಿಸಿದ್ದರು. ಈ ಸಂಬಂಧ ಸಚಿವರ ವಿರುದ್ಧ ಜಾತಿ ನಿಂದನೆ, ಜೀವ ಬೆದರಿಕೆ ಸಂಬಂಧ ಎಫ್ಐಆರ್ ದಾಖಲಾಗಿದೆ. ಆದ್ರೇ.. ನಾನು ಯಾವುದೇ ಜಾತಿ ನಿಂದನೆ, ಜೀವ ಬೆದರಿಕೆ ಹಾಕಿಲ್ಲ ಎಂಬುದಾಗಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಸ್ಪಷ್ಟ ಪಡಿಸಿದ್ದಾರೆ.
BIGG NEWS : ದೇಶಾದ್ಯಂತ ಏಕರೂಪದಲ್ಲಿ ಬೋರ್ಡ್ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಸರ್ಕಾರ ಸಿದ್ಧತೆ|Board Exams
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಾಮಾಜದ ಜಾಗದ ತಕರಾರು ಸಂಬಂಧ ಮಡಿವಾಳ ಸಮಾಜದ ಎಲ್ಲಾ ಹಿರಿಯರು ಭೇಟಿಯಾಗಿದ್ದರು. ಈ ವೇಳೆಯಲ್ಲಿ ಪೋಲಪ್ಪ ಕುಟುಂಬಸ್ಥರು ಜಾಗ ಒತ್ತುವರಿ ಮಾಡಿಕೊಂಡಿರೋ ಬಗ್ಗೆ ಹೇಳಿದ್ದರು. ಪೋಲಪ್ಪ ಕುಟುಂಬಸ್ಥರು ಒತ್ತುವರಿ ಮಾಡಿಕೊಂಡಿರುವಂತ ಜಾಗ ನಮ್ಮದು ಎಂಬುದಾಗಿ ಮಡಿವಾಳ ಸಮಾಜದ ಮುಖಂಡರು ತಿಳಿಸಿದ್ದರು. ಸಮಸ್ಯೆ ಬಗೆ ಹರಿಸಿಕೊಡುವಂತೆ ಮನವಿ ಮಾಡಿದ್ದರು ಎಂದು ಹೇಳಿದರು.
ಆದ್ರೇ.. ಮಡಿವಾಳ ಸಮುದಾಯದವರು ಹೇಳಿದ್ದರ ಬಗ್ಗೆ ಪೋಲಪ್ಪ ವಿಚಾರಿಸಿದಾಗ, ಆ ಜಾಗ ನಮ್ಮದು ಎಂದು ಹೇಳುತ್ತಿದೆ. ಈ ಸಂಬಂಧ ನಾಲ್ಕು ತಿಂಗಳ ಹಿಂದೆ ನಾನೇ ಕರೆದು ಸಂಧಾನ ಮಾಡಿದ್ದೆ. ಸಮಾಜದವರನ್ನು ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ಮಾಡಿದ್ದೆ. ವಿವಾದ ನಡೆಯುತ್ತಿರುವ ಜಾಗ ಪೋಲಪ್ಪ ಅವರ ಪಿತ್ರಾರ್ಜಿತ ಆಸ್ತಿ ಅಲ್ಲ. ಪೋಲಪ್ಪ ಪತ್ನಿಯ ಕುಟುಂಬಕ್ಕೆ ಸೇರಿದ ಆಸ್ತಿ ಎಂದು ಹೇಳಿದ್ದರು ಎಂದು ತಿಳಿಸಿದರು.
BIGG NEWS: ಮಂಡ್ಯದಲ್ಲಿ ‘ ಭಾವೈಕ್ಯತೆಯ ಗಣೇಶ ಪ್ರತಿಷ್ಠಾಪನೆ ‘ : ಮುಸ್ಲಿಮರೇ ‘ಪ್ರಸಾದ ತಯಾರಿಸಿ ಭಕ್ತರಿಗೆ ‘ ವಿತರಣೆ
ಮಡಿವಾಳ ಸಮುದಾಯಕ್ಕೆ ಸೇರಿದಂತ ಜಾಗದ ವಿವಾದದ ಸಂಬಂಧ ದಾಖಲೆಗಳ ಪರಿಶೀಲನೆಗಾಗಿ ನಾನೇ ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದೆ. ಇದರ ಹೊರತಾಗಿ ನಾನು ಜಾತಿ ನಿಂದನೆ ಮಾಡಿದ್ದಾಗಿ, ಜೀವ ಬೆದರಿಕೆ ಹಾಕಿದ್ದಾಗಲೀ ಮಾಡಿಲ್ಲ. ನಾನು ಜಾತಿ ನಿಂದನೆ ಮಾಡಿದ್ದು ನಿಜವಾದ್ರೇ ಕ್ರಮ ಕೈಗೊಳ್ಳಲಿ. ನಾನು ಸುಡುವ ಮಾತನಾಡೇ ಇಲ್ಲ. ಇಂತಹ ಅವಕಾಶಗಳನ್ನು ಅವರು ಬಳಸಿಕೊಳ್ಳಲು ಮುಂದಾಗಿದ್ದಾರೆ. ನಾನು ಈ ಪ್ರಕರಣವನ್ನು ಬೆಳೆಸಲು ಇಷ್ಟ ಪಡೋದಿಲ್ಲ ಎಂದು ಹೇಳಿದರು.
BIGG NEWS : ಹಾವೇರಿಯಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಖದೀಮರು : 85 ಲಕ್ಷ ಹಣ ಜಪ್ತಿ ಮಾಡಿ ಪೊಲೀಸರು