ಗದಗ: ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಅಗಲಿಕೆಗೆ ಶಾಸಕ ಜಮೀರ್ ಅಹ್ಮದ್ ಸಂತಾಪ ಸೂಚಿಸಿದ್ದಾರೆ.
HEALTH TIPS: ಚಳಿಗಾಲ ಎಂದು ಬೆಡ್ಶೀಟ್ ಮುಸುಕು ಹಾಕಿ ಮಲಗುವ ಅಭ್ಯಾಸವಿದ್ದೀಯಾ? ಹಾಗಾದ್ರೆ ಈ ಅಪಾಯ ತಪ್ಪಿದ್ದಲ್ಲ !
ನಂತರ ಮಾತನಾಡಿದ ಅವರು, ಸಿದ್ದೇಶ್ವರ ಶ್ರೀಗಳ ದರ್ಶನ ಮಾಡುವ ಪುಣ್ಯ ನಾನು ಪಡೆದುಕೊಂಡಿಲ್ಲ ಅನ್ನುವ ನೋವಾಗುತ್ತಿದೆ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಸ್ವಾಮೀಜಿಗಳನ್ನ ನೋಡಲು ಹರಿದುಬರುತ್ತಿರುವ ಅಷ್ಟು ಜನ ಸಾಗರವನ್ನ ನಾನು ಯಾವತ್ತೂ ನೋಡೇ ಇಲ್ಲ. ನನಗೆ ಸ್ವಾಮೀಜಿಗಳ ಬಗ್ಗೆ ಗೌರವ, ಅಭಿಮಾನವಿದೆ ಎಂದರು.
ನಾನು ಕೂಡಾ ಸ್ವಾಮೀಜಿ ನೋಡೋಕೆ ಮೊನ್ನೆ ಸಿದ್ದರಾಮಯ್ಯ ಅವರೊಂದಿಗೆ ಹೋಗಬೇಕಿತ್ತು. ಆದರೆ ಕಾರಣಾಂತರದಿಂದ ಹೋಗೋಕೆ ಆಗಲಿಲ್ಲ. ಅವರ ದರ್ಶನ ಮಾಡೋಕೂ ಪುಣ್ಯ ಮಾಡಿರಬೇಕು. ಆ ಪುಣ್ಯ ನಾನು ಪಡೆದುಕೊಂಡಿಲ್ಲ ಅನ್ನೋ ನೋವು ಆಗುತ್ತಿದೆ ಎಂದು ಹೇಳಿದರು.