ಬೆಂಗಳೂರು: ನಾನು ತಪ್ಪು ಮಾಡಿಲ್ಲ. ತಪ್ಪು ಮಾಡದೇ ಇದ್ರೂ ನನ್ನ ಜೈಲಿಗೆ ಕಳುಹಿಸಲಾಗಿದೆ ಅಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹತ್ತು ನಿಮಿಷ ಕಣ್ಣೀರಿಟ್ಟಿದ್ದಾರೆ.
ಇಂದು ಪರಪ್ಪನ ಅಗ್ರಹಾರದಲ್ಲಿ ಶಾಸಕ ಜಿ.ಟಿ ದೇವೇಗೌಡ ಅವರು, ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ಅವರನ್ನು ಭೇಟಿಯಾಗಿ, ಚರ್ಚಿಸಿದರು. ಆ ಬಳಿಕ ಜೈಲಿನಿಂದ ಹೊರಬಂದಾಗ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಭೇಟಿಯಾಗಿ ಹೆಚ್.ಡಿ ರೇವಣ್ಣ ಅವರ ಕುಶಲೋಪರಿ ಚರ್ಚೆ ಮಾಡಿದೆ. ಈ ವೇಳೆಯಲ್ಲಿ ನಾನು ತಪ್ಪು ಮಾಡದಿರುವ ವಿಚಾರಕ್ಕೆ ಸಿಲುಕಿಸಿದ್ರು ಅಂತ 10 ನಿಮಿಷ ಕಣ್ಣೀರಿಟ್ಟರು ಎಂದರು.
ತಪ್ಪು ಮಾಡಿದ್ರೆ ಜೈಲಿಗೆ ಹಾಕಲಿ. ಮಾಡದೇ ಇರೋ ತಪ್ಪಿಗೆ ಜೈಲಿಗೆ ಹಾಕಿದ್ದಾರೆ. ಹಳೇ ವಿಚಾರ ಮೆಲುಕು ಹಾಕಿದ್ರು. ಅವರಿಗೆ ಹಾಸನ ಅಭಿವೃದ್ಧಿಯದ್ದೇ ಚಿಂತೆ ಎಂದರು.
ತಪ್ಪು ಮಾಡದಿದ್ರೂ ಜೈಲಿಗೆ ಹಾಕಿದ್ದಾರಲ್ಲ ಅಂತ ಕೊರಗಿದೆ. ನನಗೆ ಈಗಲೂ ಅಭಿವೃದ್ಧಿ ಕಾರ್ಯಗಳ ಬಗ್ಗೆಯೇ ಚಿಂತೆ. ನಾನು ಮಹಿಳೆಯ ಜೊತೆಗೆ ಮಾತನಾಡಿಯೇ 6 ವರ್ಷಗಳಾಗಿವೆ ಎಂದು ಹೇಳಿದ್ರು ಅಂದ್ರು.
ನಾನು ಹೆಚ್.ಡಿ ರೇವಣ್ಣ ಭೇಟಿಯ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂಬುದಾಗಿ ಕೇಂದ್ರ ಕಾರಾಗೃಹದ ಬಳಿಯಲ್ಲಿ ಶಾಸಕ ಜಿ.ಟಿ ದೇವೇಗೌಡ ಅವರು ತಿಳಿಸಿದರು.
4 ವರ್ಷ ‘ಕಾಂಗ್ರೆಸ್ ಸರ್ಕಾರ’ ಇರುತ್ತೆ, ಬೀಳಿಸೋಕೆ ಸಾಧ್ಯವಿಲ್ಲ: ಸಚಿವ ಸತೀಶ್ ಜಾರಕಿಹೊಳಿ
ಅಶ್ಲೀಲ ವಿಡಿಯೋ ಕೇಸ್ : ಪ್ರಜ್ವಲ್ ರೇವಣ್ಣಗೆ ‘ರೆಡ್ ಕಾರ್ನರ್’ ನೋಟಿಸ್ ನೀಡಲು ‘SIT’ ಪ್ಲ್ಯಾನ್