ಬೆಂಗಳೂರು : ಪರಿಷತ್ ಸದಸ್ಯರ ವರ್ತನೆಗೆ ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಸಭಾಪತಿ ಸ್ಥಾನದಲ್ಲಿ ಕುಳಿತವರಿಗೆ ತಾಳ್ಮೆ ಹೆಚ್ಚಿರಬೇಕು ಸಭಾಪತಿ ಸ್ಥಾನದಲ್ಲಿ ಮಂಗ್ಯಾನ ತರ ಕೂತಿರುತ್ತೇನೆ. ಮೊದಲು ಶಾಸಕರು ಕೈ ಎತ್ತಿ ಮಾತನಾಡುವುದಕ್ಕೆ ಅವಕಾಶ ಕೇಳುತ್ತಿದ್ದರು. ಈಗ ಏನು ಇಲ್ಲ ಎಂದು ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ನನಗೂ ತಾಳ್ಮೆಯಿಂದ ಇದು ಸಾಕಾಗಿದೆ ದನ ಕಾಯಲು ಹೋಗಿ ಎಂದು ನಾನು ಬೈದಿದ್ದೇನೆ. ಅಷ್ಟಕ್ಕೆ ಅವರು ಕೊಠಡಿಗೆ ಬಂದು ಪ್ರಶ್ನಿಸಿದ್ದಾರೆ ದನ ಕಾಯೋರ ವಿಡಿಯೋ ಅವರಿಗೆ ವಿಡಿಯೋ ತೋರಿಸಿದ್ದೇನೆ ದನ ಕಾಯುವವರೆಗೂ ನಿಮಗೂ ಏನು ವ್ಯತ್ಯಾಸ ಎಂದು ನಾನು ಕೇಳಿದೆ ಬಳಿಕ ಅವರು ಕ್ಷಮೆ ಕೇಳಿ ವಾಪಸು ಹೋದರು ಎಂದು ಬಸವರಾಜ್ ಹೊರಟ್ಟಿ ಮಾತನಾಡಿರೊ ವಿಡಿಯೋ ಈಗ ವೈರಲ್ ಆಗಿದೆ.








