ತುಮಕೂರು : ಕೊರಟಗೆರೆ ಕ್ಷೇತ್ರದ ಜನ ತಮ್ಮನ್ನು ಎರಡು ಬಾರಿ ಗೆಲ್ಲಿಸಿರುವುದು ನಿಜವಾದರೂ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲ ಅವಕಾಶಗಳಿದ್ದ 2013 ಗೆದ್ದಿದ್ರೆ ಸಿಎಂ ಆಗುವ ಅವಕಾಶ ಇತ್ತು ಎಂದು ಸೋಲಿನ ಬಗ್ಗೆ ಮೆಲುಕು ಹಾಕುವ ಮೂಲಕ ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್ ಅವರುಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಡಾ ಜಿ ಪರಮೇಶ್ವರ್ ಅವರಿಗೆ 2013ರ ವಿಧಾನ ಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲು ಈಗಲೂ ಕಾಡುತ್ತಿದೆ. ಸಿಎಂ ಆಗುವ ಹಣೆಬರಹ ನನಗೆ ಇರಲಿಲ್ಲ ಅನಿಸುತ್ತೆ. ಮುಂದೆ ಸಿಎಂ ಆಗುವ ಅವಕಾಶ ಇದ್ಯೋ ಗೊತ್ತಿಲ್ಲ ಎಂದು . ಕೊರಟಗೆರೆಯ ತೋವಿನಕೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತಾಡುತ್ತ ಪರಮೇಶ್ವರ್ ಬೇಸರ ವ್ಯಕ್ತ ಪಡಿಸಿದ್ದಾರೆ.