ಬೆಂಗಳೂರು : ನಿನ್ನೆ ಗೃಹ ಸಚಿವ ಜಿ ಪರಮೇಶ್ವರ್, ಸಿದ್ದರಾಮಯ್ಯ ಇನ್ನು ಎರಡು ವರ್ಷ ಸಿಎಂ ಎಂಬ ಹೇಳಿಕೆ ವಿಚಾರವಾಗಿ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಪರಮೇಶ್ವರ್ ಹೇಳಿಕೆಯನ್ನು ಅವರಿಗೆ ಕೇಳಬೇಕು. ಪರಮೇಶ್ವರ ಅವರು ಗೃಹ ಸಚಿವರಿದ್ದಾರೆ ಅವರು ಹೇಳಿದಂತೆ ಕೇಳೋಣ. ನಮ್ಮ ಅಣ್ಣ ಇವತ್ತೇ ಮುಖ್ಯಮಂತ್ರಿ ಆಗುತ್ತಾರೆ ಅಂತ ಏನು ಹೇಳಿಲ್ಲ. ಸಿಎಂ ಆಗಬೇಕು ಎಂಬ ಆಸೆ ಇದೆ ಆಸೆ ಇಲ್ಲ ಅಂತ ನಾನು ಹೇಳಿಲ್ಲ ಇನ್ನು ಸಮಯವಿದೆ ಚುನಾವಣೆ ಮುಗಿದ ಮೇಲೆ ಮಾತನಾಡೋಣ ಎಂದು ಡಿಕೆ ಸುರೇಶ್ ತಿಳಿಸಿದರು.
ಇನ್ನು ಬಾಗಲಕೋಟೆ ಹಾಕು ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕುರಿತು ಮಾತನಾಡಿದ ಅವರು ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಯಾವುದೇ ಅನುಮಾನ ಬೇಡ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುತ್ತೆ, ಬಾಗಲಕೋಟೆ ಗೆಲುವು ಕಷ್ಟ ಎಂಬುದು ಕೇವಲ ಊಹಾಪೋಹ ಎಂದು ಡಿಕೆ ಸುರೇಶ್ ತಿಳಿಸಿದರು.
ಇನ್ನು ರಾಜ್ಯದ ಹಲವಡೆ ಗ್ಯಾಸ ಸಿಲಿಂಡರ್ ಸಿಗದ ಜನರು ಪರದಾಟ ನಡೆಸುತ್ತಿರುವ ವಿಚಾರವಾಗಿ ಯುದ್ಧದಿಂದಾಗಿ ನಮ್ಮ ದೇಶ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಮೌನ ಮುರಿದಿಲ್ಲ ಈಗ ಇರುವ ಸಮಸ್ಯೆಯೇ ಪ್ರಧಾನಿ ನರೇಂದ್ರ ಮೋದಿ ಕಾರಣ ಮುಂದಿನ ಆರು ತಿಂಗಳು ಜನ ಜೀವನ ನಡೆಸಲು ಸಂದೇಶ ನೀಡಬೇಕು ಈ ಬಗ್ಗೆ ಪ್ರಧಾನ ಮಂತ್ರಿ ನೇರವಾಗಿ ಸಂದೇಶ ನೀಡಬೇಕು ಎಂದು ಮಾಜಿ ಸಂಸದ ಡಿಕೆ ಸುರೇಶ್ ಅಗ್ರಹಿಸಿದರು.








