ಮೈಸೂರು: ಸಿಎಂ ಬಸವರಾಜ ಬೊಮ್ಮಾಯಿ ನಾಯಿ ಮರಿ ಹೋಲಿಸಿದ ವಿಚಾರವಾಗಿ ಶಾಸಕ ಜಿ.ಟಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ನಾಯಿಗೆ ನಾರಾಯಣಸ್ವಾಮಿ ಎಂದು ಹೇಳುತ್ತಾರೆ. ನಮ್ಮ ಆದಿಚುಂಚನಗಿರಿ ಸ್ವಾಮೀಜಿ ಎರಡು ನಾಯಿ ಸಾಕಿದ್ದಾರೆ. ಆ ನಾಯಿಗಳು ದೊಡ್ಡವರು ಬಂದಾಗ ನಮಸ್ಕಾರ ಮಾಡುತ್ತವೆ. ನಾಯಿಗಿರುವ ನಿಯತ್ತು ಮನುಷ್ಯರಿಗೆ ಇಲ್ಲ ಎಂದು ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ಮಾತನಾಡಯವವರು ಇತಿ ಮಿತಿ ಅರ್ಥ ಮಾಡಿಕೊಳ್ಳಲ್ಲ. ಅವರವರ ಕ್ಷೇತ್ರ ನೋಡಿಕೊಳ್ಳಲಾಗದವರು ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜಿಟಿಡಿ ಪರೋಕ್ಷ ವಾಗ್ದಾಳಿ ನಡೆಸಿದರು.ಸಿದ್ದರಾಮಯ್ಯ ಹೇಳಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಮುತ್ಸದ್ದಿಗಳ ಬಾಯಲ್ಲಿ ಈ ರೀತಿ ಮಾತು ಸರಿಯಲ್ಲ ಎಂದರು.