ಹುಬ್ಬಳ್ಳಿ: ನಗರದ ಪ್ರಸಿದ್ಧ ಉದ್ಯಮಿಯೊಬ್ಬರ ಪುತ್ರ ನಾಪತ್ತೆಯಾಗಿದ್ದರು. ಈ ಸಂಬಂಧ ಉದ್ಯಮಿ ಕೂಡ ಪೊಲೀಸ್ ಠಾಣೆಗೆ ತೆರಳಿ ಮಗ ನಾಪತ್ತೆಯಾಗಿದ್ದಾನೆ. ಹುಡುಕಿ ಕೊಡುವಂತೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರಿಗೆ ತನಿಖೆಯಲ್ಲಿ ಸ್ಪೋಟಕ ವಿಚಾರ ತಿಳಿದು ಬಂದಿದೆ. ಹಾಗಾದರೇ ಅದು ಏನು ಅಂತ ಮುಂದೆ ಓದಿ.
ಕಾಂಗ್ರೆಸ್ ಮೇಲೆ ನಾಲಿಗೆ ಹರಿಬಿಡುವ ಸಚಿವರೇ ಮಹಾರಾಷ್ಟ್ರದ ಬಗ್ಗೆ ಮೌನವೇಕೆ?: ಟ್ವಿಟ್ ನಲ್ಲಿ ಕಾಂಗ್ರೆಸ್ ಗುಡುಗು
ಹುಬ್ಬಳ್ಳಿಯ ಉದ್ಯಮಿ ಭರತ್ ಜೈನ್ ಅವರ ಪುತ್ರ ಅಖಿಲ್ ಜೈನ್ (30), ಡಿಸೆಂಬರ್ 3ರಂದು ನಾಪತ್ತೆಯಾಗಿದ್ದನು. ಈ ಸಂಬಂಧ ಭರತ್ ಜೈನ್ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಗೆ ತೆರಳಿ, ನನ್ನು ಪುತ್ರ ನಾಪತ್ತೆಯಾಗಿದ್ದಾನೆ. ಆತನನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದರು.
ಶಿವಮೊಗ್ಗ: ಡಿ.7ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ದೂರು ಸ್ವೀಕರಿಸಿದಂತ ವೇಳೆಯಲ್ಲಿ ಉದ್ಯಮಿ ಭರತ್ ಶೆಟ್ಟಿ ನಡೆಯ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು. ಹೀಗಾಗಿ ಅವರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ, ತನ್ನ ಮಗನನ್ನು ಸ್ಥಳೀಯ ಹಂತಕರಿಗೆ ಸುಪಾರಿ ನೀಡಿ ಹತ್ಯೆ ಮಾಡಿಸಿರೋದಾಗಿ ಒಪ್ಪಿಕೊಂಡಿದ್ದಾರೆ.
ಗಮನಿಸಿ : ಇನ್ಮುಂದೆ ಮನೆಯಲ್ಲೇ ಕುಳಿತು `ರೇಷನ್ ಕಾರ್ಡ್’ ಗೆ ಅರ್ಜಿ ಸಲ್ಲಿಸಬಹುದು! ಹೇಗೆ ಗೊತ್ತಾ?New Ration Card
ಇನ್ನೂ ಭರತ್ ಜೈನ್ ಅವರ ಪುತ್ರ ಅಖಿಲ್ ಜೈನ್ ಮೃತದೇಹ ಉದ್ಯಮಿಯ ತೋಟದ ಮನೆಯಲ್ಲಿಯೇ ಪತ್ತೆಯಾಗಿದೆ. ಘಟನೆ ನಡೆದಂತ 48 ಘಂಟೆಯಲ್ಲೇ ಪೊಲೀಸರು ಅಖಿಲ್ ಜೈನ್ ಹತ್ಯೆ ಮಾಡಿದಂತ ಸ್ಥಳೀಯ ಹಂತಕರನ್ನು ಬಂಧಿಸಿ, ಜೈಲಿಗಟ್ಟಿದೆ.