ಕೆಎನ್ ಎನ್ ನ್ಯೂಸ್ ಡೆಸ್ಕ್ : ಆಹಾರ ಸೇವಿಸುವಾಗ ಮಧ್ಯೆ ಒಂದೇ ಸಮನೆ ಬಿಕ್ಕಳಿಕೆ ಬರುವುದನ್ನು ನಾವು ನೋಡಿರುತ್ತೇವೆ. ನಮಗೂ ಕೂಡಾ ಇದೇ ಅನುಭವವಾಗಿರುತ್ತದೆ. ಕೆಲವೊಮ್ಮೆ ಇತರ ಸಂದರ್ಭಗಳಲ್ಲಿ ಕೂಡಾ ಬಿಕ್ಕಳಿಕೆ ಬರುತ್ತದೆ. ಇದು ಕೆಲವೊಮ್ಮೆ ಬಹಳ ಕಿರಿಕಿರಿ ಉಂಟುಮಾಡುತ್ತದೆ.
BIGG NEWS: ಹಾವೇರಿಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ವ್ಯಕ್ತಿಯ ಬರ್ಬರ ಕೊಲೆ
ಬಿಕ್ಕಳಿಕೆ ಸಂಭವಿಸಲು ಹಲವು ಕಾರಣಗಳಿವೆ. ಆದರೆ, ಕೆಲವು ಸಂದರ್ಭಗಳಲ್ಲಿ ಈ ಪರಿಸ್ಥಿತಿಯನ್ನು ನಿಭಾಯಿಸಲು ಕಷ್ಟವಾಗುತ್ತದೆ. ಆದಾಗ್ಯೂ, ಬಿಕ್ಕಳಿಕೆಯನ್ನು ತಪ್ಪಿಸಲು, ಬಿಕ್ಕಳಿಕೆಯನ್ನು ಪ್ರಚೋದಿಸುವ ವಸ್ತುಗಳು ಮತ್ತು ಆಹಾರಗಳಿಂದ ದೂರವಿರುವುದು ಸಾಕು. ಆದರೆ ಕೆಲವು ಮನೆಮದ್ದುಗಳು ಈ ಸಮಸ್ಯೆಯಿಂದ ಹೊರಬರಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ನಿಂಬೆ ಮತ್ತು ಸಕ್ಕರೆಯು ಬಿಕ್ಕಳಿಕೆಯನ್ನು ಕಡಿಮೆ ಮಾಡಲು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ.ನಿಂಬೆರಸಕ್ಕೆ ಸಕ್ಕರೆ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ಸಮಸ್ಯೆ ತಕ್ಷಣ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಹೆಚ್ಚು ನೀರು ಕುಡಿಯುವುದು ಸಹ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
BIGG NEWS: ಹಾವೇರಿಯಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದು ವ್ಯಕ್ತಿಯ ಬರ್ಬರ ಕೊಲೆ
ಆಹಾರವನ್ನು ವೇಗವಾಗಿ ತಿನ್ನುವುದರಿಂದ ಕೂಡಾ ಬಿಕ್ಕಳಿಗೆ ಬರುತ್ತದೆ. ಆದ್ದರಿಂದ ಆಹಾರವನ್ನು ನಿಧಾನವಾಗಿ ಸೇವಿಸಿ. ಒಂದೇ ಸಮನೆ ಬಿಕ್ಕಳಿಕೆ ಕಾಡುತ್ತಿದ್ದರೆ ನೆಲದ ಮೇಲೆ ಕುಳಿತು ನಿಮ್ಮ ಮೊಣಕಾಲುಗಳನ್ನು ನಿಮ್ಮ ಎದೆಗೆ ಒರಗಿಸಿ 5 ನಿಮಿಷದವರೆಗೂ ಕುಳಿತುಕೊಳ್ಳಿ. ಕೂಡಲೇ ಬಿಕ್ಕಳಿಕೆ ಕಡಿಮೆ ಆಗುತ್ತದೆ.
ಬಿಕ್ಕಳಿಗೆ ಪದೇ ಪದೆ ಹಾಗೂ ದೀರ್ಘ ಸಮಯದವರೆಗೇ ಕಾಡುತ್ತಿದ್ದರೆ ನಿಮ್ಮ ಗಮನವನ್ನು ಬೇರೆಡೆಗೆ ತಿರುಗಿಸುವುದು ಉತ್ತಮ. ಜೇನುತುಪ್ಪವನ್ನು ಸೇವಿಸುವುದರಿಂದ ಕೂಡಾ ಬಿಕ್ಕಳಿನ ಸಮಸ್ಯೆಯನ್ನು ನಿವಾರಿಸಬಹುದು. ಸಕ್ಕರೆ ಅಥವಾ ಬೆಲ್ಲವನ್ನು ತಿಂದರೆ ಕೂಡಾ ಬಿಕ್ಕಳಿಕೆ ಕಡಿಮೆ ಆಗುತ್ತದೆ. ಹಾಗಂತ ಬೇಕಾಬಿಟ್ಟಿ ತಿನ್ನುವುದಲ್ಲ, ಒಂದು ಅರ್ಧ ಚಮಚ ಸಕ್ಕರೆ ಅಥವಾ ಒಂದು ಚಿಕ್ಕ ತುಂಡು ಬೆಲ್ಲ ತಿಂದರೆ ಸಾಕು.