ಕೆಎನ್ ಎನ್ ನ್ಯೂಸ್ ಡೆಸ್ಕ್ : ಸಾಮಾನ್ಯವಾಗಿ ಹೆಚ್ಚಾಗಿ ಎಲ್ಲರ ಮನೆಯಲ್ಲೂ ಮನಿ ಪ್ಲಾಂಟ್ ಬೆಳೆಸಿರುತ್ತಾರೆ. ಆದರೆ ಇದನ್ನು ಬೆಳೆಸುವುದರಿಂದ ಮನೆ ಸಾಕಷ್ಟು ಸೌಂದರ್ಯದಿಂದ ಕೂಡಿರುತ್ತದೆ. ಜೊತೆಗೆ ಇದು ಹಣಕಾಸಿನ ತೊಂದರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಾಸ್ತುವನ್ನು ತುಂಬಾ ಜನ ನಂಬುತ್ತಾರೆ.ಮನಿ ಪ್ಲಾಂಟ್ ಅದೃಷ್ಟ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ಆದರೆ ಕೆಲವರ ಮನೆಯಲ್ಲಿ ಎಷ್ಟು ಪೋಷಣೆ ಮಾಡಿದರೂ ಮನಿ ಪ್ಲಾಂಟ್ ಚೆನ್ನಾಗಿ ಬೆಳೆಯುವುದಿಲ್ಲ. ಅಂತವರು ಇಲ್ಲಿ ತಿಳಿಸಿರುವ ಸಲಹೆ ಅನುಸರಿಸಿ.
*ಸಾಮಾನ್ಯವಾಗಿ ಮನಿ ಪ್ಲಾಂಟ್ ಅನ್ನು ಮಣ್ಣಿನಲ್ಲಿ ಅಥವಾ ನೀರಿನಲ್ಲಿ ಬೆಳೆಸಬಹುದು. ಮನಿ ಪ್ಲಾಂಟ್ ನೆಡುವ ಮುನ್ನ ಮೊದಲು ಕಾಂಡದ ಎಲೆಗಳನ್ನು ಕತ್ತರಿಸಿ. ನಂತರ, ಅದನ್ನು ಮಣ್ಣಿನಿಂದ ಮುಚ್ಚಿ ನೆಡಬೇಕು. ಆರಂಭದಲ್ಲೇ ಮನಿ ಪ್ಲಾಂಟ್ಗೆ ಗೊಬ್ಬರ ಹಾಕಬೇಡಿ.
*ಮನಿ ಪ್ಲಾಂಟ್ ನೀರಿನಲ್ಲಿ ಚೆನ್ನಾಗಿ ಬೆಳೆಯುವುದರಿಂದ ಪ್ರತಿ 15 ರಿಂದ 20 ದಿನಗಳಿಗೊಮ್ಮೆ ಪಾಟ್ನಲ್ಲಿರುವ ನೀರನ್ನು ಬದಲಾಯಿಸಬೇಕು. ಮನಿ ಪ್ಲಾಂಟ್ ಬೇರು ಸಂಪೂರ್ಣ ನೀರಿನಲ್ಲಿ ಮುಳುಗಿರುವಂತೆ ಗಮನ ಹರಿಸಿ.
*ಮನಿ ಪ್ಲಾಂಟನ್ನು ನೇರ ಸೂರ್ಯನ ಬೆಳಕಿನಿಂದ ದೂರವಿಡಿ. ಆರೋಗ್ಯಕರ ಬೆಳವಣಿಗೆಗಾಗಿ ಎಪ್ಸಮ್ ಉಪ್ಪನ್ನು ಸೇರಿಸಬಹುದು. ಮನಿ ಪ್ಲಾಂಟ್ಗೆ ಪ್ರತಿದಿನ ನೀರು ಹಾಕಬೇಡಿ. ಹಾಗೆ ಮಾಡಿದರೆ ಸಸ್ಯವು ಆರೋಗ್ಯಕರವಾಗಿ ಬೆಳೆಯುವುದಿಲ್ಲ.
*ಮನಿ ಪ್ಲಾಂಟ್ಗೆ ಎಂದಿಗೂ ಅತಿಯಾಗಿ ಗೊಬ್ಬರ ಹಾಕಬೇಡಿ, ಹಾಗೆ ಮಾಡುವುದರಿಂದ ಎಲೆ ಕೊಳೆಯುತ್ತದೆ ಮತ್ತು ಬೇರುಗಳಿಗೆ ಹಾನಿಯಾಗುತ್ತದೆ.
*ನಿಯಮಿತವಾಗಿ ಸಸ್ಯವನ್ನು ಟ್ರಿಮ್ ಮಾಡಿ. ಸತ್ತ ಅಥವಾ ಕೊಳೆತ ಎಲೆಗಳನ್ನು ತೆಗೆದುಹಾಕಿ. ಇಲ್ಲದಿದ್ದರೆ ಎಲ್ಲವೂ ಕೊಳೆಯುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಒಣ ಹವಾಗುಣದಲ್ಲಿ ಮನಿ ಪ್ಲಾಂಟ್ ಬೆಳವಣಿಗೆಗೆ ಸಮಸ್ಯೆ ಆಗುತ್ತದೆ.