ಬೆಂಗಳೂರು: ಚುನಾವಣಾ ಬಾಂಡ್ ಯೋಜನೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಟ ಪ್ರಕಾಶ್ ರಾಜ್ ವಾಗ್ದಾಳಿ ನಡೆಸಿದ್ದಾರೆ. ಶ್ರೀ ಶ್ರೀ ವಿಶ್ವಗುರು ಮಹಾ ಪ್ರಭುಗಳೇ ಮನ್ ಕಿ ಬಾತ್ ನಿಂದ ಎಷ್ಟು ಹಣ ವಸೂಲಿ ಮಾಡಿದ್ದೀರಾ ಅಂತ ಹೇಳ್ತೀರಾ ಎಂದು ವ್ಯಂಗ್ಯವಾಡಿದ್ದಾರೆ.
BREAKING: ಮಥುರಾದ ರಾಧಾರಾಣಿ ದೇವಸ್ಥಾನದಲ್ಲಿ ಕಾಲ್ತುಳಿತ: ಹಲವು ಭಕ್ತರಿಗೆ ಗಾಯ | Stampede At Mathura
ಚುನಾವಣಾ ಬಾಂಡ್ ಯೋಜನೆ ಕುರಿತು ಎರಡು ಮೀಮ್‌ಗಳ ಸಮೇತ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಶ್ರೀ ಶ್ರೀ ಶ್ರೀ ವಿಶ್ವಗುರು.. ವಸೂಲಿಗುರು ಮಹಾಪ್ರಭುಗಳೇ.. ನಿಮ್ಮ ‘ಮನ್ ಕಿ ಬಾತ್’ ಕಾರ್ಯಕ್ರಮದಿಂದಾಗಿ ಯಾರಿಂದ ಎಷ್ಟು ವಸೂಲಿ ಮಾಡಿದ್ರಿ ಅಂತ ಹೇಳ್ತೀರಾ’ ಎಂದು ಲೇವಡಿ ಮಾಡಿದ್ದಾರೆ.ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರು ದೇಣಿಗೆ ಪಡೆಯುತ್ತಿದ್ದಾರೋ ಅಥವಾ ದಂಧೆ ನಡೆಸುತ್ತಿದ್ದಾರೋ ಗೊತ್ತಿಲ್ಲ’ ಎಂದು ವ್ಯಂಗ್ಯಭರಿತ ಮೀಮ್ ಹಂಚಿಕೊಂಡಿದ್ದಾರೆ.ಖುದ್ದು 12,000 ಕೋಟಿ ತಿಂದು ನಮಗೆ ಎರಡು ರೂಪಾಯಿ ಕೊಡ್ತಿದ್ದಾನೆ ಪಾಪಿ ಎಂದು ಮತ್ತೊಂದು ವ್ಯಂಗ್ಯ ಚಿತ್ರವನ್ನು ಹಂಚಿಕೊಂಡಿದ್ದಾರೆ.
Shocking News: ದಾವಣಗೆರೆಯಲ್ಲಿ ‘ಬಾಲಕ’ನ ಜೀವತೆಗೆದ ‘ಪಾನಿಪೂರಿ’ | Panipuri
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಚುನಾವಣಾ ಬಾಂಡ್‌ಗಳ ಕುರಿತಾದ ಹೊಸ ಮಾಹಿತಿಯನ್ನು ಚುನಾವಣಾ ಆಯೋಗ ಇಂದು ನಿನ್ನೆ ಪ್ರಕಟಿಸಿದೆ.ಈ ಅಂಕಿ ಅಂಶವು 2019ರ ಏಪ್ರಿಲ್ 12ಕ್ಕೂ ಹಿಂದಿನದ್ದು ಎಂದು ಹೇಳಲಾಗಿದೆ. ಈ ದಿನಾಂಕದ ನಂತರದ ಅಂಕಿ ಅಂಶವನ್ನು ಕಳೆದ ವಾರವೇ ಚುನಾವಣಾ ಆಯೋಗ ಬಹಿರಂಗಪಡಿಸಿತ್ತು.ಈ ಹೊಸ ಅಂಕಿ ಅಂಶಗಳ ಪ್ರಕಾರ, ಕೇಂದ್ರದ ಆಡಳಿತಾರೂಢ ಬಿಜೆಪಿ, ಚುನಾವಣಾ ಬಾಂಡ್‌ಗಳ ಮೂಲಕ ₹6,986.5 ಕೋಟಿ ಪಡೆದುಕೊಂಡಿದೆ. 2019–20ರ ಅವಧಿಯಲ್ಲಿ ಅತ್ಯಧಿಕ ₹2,555 ಕೋಟಿ ಪಡೆದುಕೊಂಡಿದೆ ಎಂದು ಚುನಾವಣಾ ಅಯೋಗದ ಅಂಕಿ ಅಂಶದಿಂದ ತಿಳಿದುಬಂದಿದೆ.
ಶ್ರೀ ಶ್ರೀ ಶ್ರೀ ವಿಶ್ವಗುರು.. ವಸೂಲಿಗುರು ಮಹಾಪ್ರಭುಗಳೇ .. ನಿಮ್ “ಮನ್ ಕಿ ಬಾತ್ “ನಲ್ಲಿ ಯಾರಿಂದ ಎಷ್ಟು ಕಿತ್ಕೊಂಡ್ರಿ ಅಂತ ಹೇಳ್ತೀರಾ #Justasking #ElectrolBondScam #Vishvaguru #Vasoolguru pic.twitter.com/P2wr0GjStb
— Prakash Raj (@prakashraaj) March 17, 2024