ಬೆಂಗಳೂರು : ರಾಜ್ಯದ ಹಲವಡೆ ಗ್ಯಾಸ್ ಸಿಲಿಂಡರ್ ಗಳ ಅಭಾವ ವಿಚಾರವಾಗಿ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಏರ್ಲೈನ್ಸ್ ಹಾಗೂ ರೈಲ್ವೆ ಕ್ಯಾಂಟೀನ್ ಗೆ 100% ಕಮರ್ಷಿಯಲ್ ಗ್ಯಾಸ್ ಪೂರೈಸುತ್ತೇವೆ ಎಂದು ಆಹಾರ ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ರಾಜ್ಯದಲ್ಲಿ ನಿತ್ಯ 44,000 ವಾಣಿಜ್ಯ ಸಿಲಿಂಡರ್ ಬೇಕು. ಶೇಕಡ 20 ನಮಗೆ 9 ಸಾವಿರ ಕಮರ್ಷಿಯಲ್ ಸಿಲಿಂಡರ್ ಸಿಗುತ್ತವೆ. 9 ಸಾವಿರ ಸಿಲಿಂಡರ್ಗಳ ಪೈಕಿ 4,000 ಸಿಲಿಂಡರ್ ಆಸ್ಪತ್ರೆಗಳಿಗೆ ಹೋಗುತ್ತವೆ. ಗ್ರಾಹಕರು ಹೆಚ್ಚಾಗಿ ಸಿಲಿಂಡರ್ ಗಳನ್ನು ಬುಕ್ ಮಾಡಬಾರದು. ಗ್ಯಾಸ್ ಅಭಾವದ ಬಗ್ಗೆ ಕೇಂದ್ರಕ್ಕೆ ಸಿಎಂ ಎರಡನೇ ಪತ್ರ ಬರೆಯುತ್ತಾರೆ. ಪರಿಸ್ಥಿತಿ ಗಂಭೀರವಾಗಿದೆ. ರಾಜ್ಯದ ಜನರಿಗೆ ತೊಂದರೆಯಾಗಿದೆ. ಕೇಂದ್ರ ಈ ಬಗ್ಗೆ ಗಮನ ಹರಿಸಬೇಕು ಎಂದು ಪತ್ರ ಬರೆಯುತ್ತಾರೆ ಎಂದು ಬೆಂಗಳೂರಿನಲ್ಲಿ ಆಹಾರ ಸಚಿವ ಕೆಎಚ್ ಮುನಿಯಪ್ಪ ಹೇಳಿಕೆ ನೀಡಿದರು.








