ಶಿವಮೊಗ್ಗ: ತೋಟಗಾರಿಕೆ ಇಲಾಖೆಯ ಅಧೀನ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ರೈತರ ಮಕ್ಕಳಿಗೆ ದಿ:01/07/2024 ರಿಂದ ದಿ: 31/03/2025 ರವರೆಗೆ 10 ದಿನಗಳ ತರಬೇತಿ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾ, ಹೊಸೂರು ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದು, ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿದ್ದು, ಸ್ವಂತ ಜಮೀನುವುಳ್ಳ ಸಾಗುವಳಿ ಮಾಡುತ್ತಿರುವ ಆಸಕ್ತ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಇಲಾಖೆಯ ವೆಬ್‍ಸೈಟ್ https://horticulturedir.karnataka.gov.in ನಿಂದ ಡೌನ್‍ಲೋಡ್ ಮಾಡಿಕೊಂಡು ಅಥವಾ ಜಿಲ್ಲೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕರ ಕಚೇರಿ ಶಿವಮೊಗ್ಗ ಇಲ್ಲಿಂದ ಅಥವಾ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಜೂನ್ 21ರೊಳಗಾಗಿ ಸಲ್ಲಿಸುವಂತೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಶಿವಮೊಗ್ಗ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-222794/9686950460 ಗಳನ್ನು ಸಂಪರ್ಕಿಸುವುದು.
BREAKING : ವಿಜಯಪುರದಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು
ಪೆನ್ ಡ್ರೈವ್ ಮೊದಲು ತಲುಪಿದ್ದೇ ಡಿಕೆಶಿಗೆ, ತಂದುಕೊಟ್ಟಿದ್ದೇ ಚಾಲಕ ಕಾರ್ತಿಕ್: HDK ಸ್ಪೋಟಕ ಬಾಂಬ್