ರಾಯಚೂರು : ರಾಯಚೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಎರಡು ಕಾರುಗಳು ಹಾಗು ಬೈಕ್ ಮಧ್ಯ ಅಪಘಾತ ಸಂಭವಿಸಿ ಅಕ್ಕ ಹಾಗು ತಮ್ಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಪೊತ್ನಾಳ ಗ್ರಾಮದ ಬಳಿ ನಿನ್ನೆ ನಡೆದಿದೆ. ಮೃತರನ್ನ ಮರಿಯಮ್ಮ(28) ಶೇಖರಪ್ಪ(25) ಎಂದು ಗುರುತಿಸಲಾಗಿದೆ.
ಎರಡು ವರ್ಷದ ಮಗಳು ಗೌತಮಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಿಂಧನೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಶೇಖರಪ್ಪ ತಮ್ಮ ಅಕ್ಕನನ್ನು ಮರಿಯಮ್ಮನ ಜಾತ್ರೆಗೆ ಕರೆದುಕೊಂಡಲು ಬರಲು ವಲ್ಕಂದಿನ್ನಿ ಗ್ರಾಮಕ್ಕೆ ತೆರಳಿದ್ದರು. ಅಲ್ಲಿಂದ ಅಕ್ಕ ಹಾಗೂ ಅವರ ಎರಡು ವರ್ಷದ ಮಗಳನ್ನು ಬೈಕ್ನಲ್ಲಿ ಕೂರಿಸಿಕೊಂಡು ಕರೆಗುಡ್ಡ ಗ್ರಾಮಕ್ಕೆ ಬರುತ್ತಿರುವಾಗ ಕೊಪ್ಪಳದ ದೇಸಾಯಿ ಕ್ಯಾಂಪ್ಗೆ ತೆರಳುತ್ತಿದ್ದ ಕಾರೊಂದು ಇವರ ಬೈಕ್ಗೆ ಡಿಕ್ಕಿ ಹೊಡೆದಿದೆ.
ಬಳಿಕ ಇನ್ನೊಂದು ಕಾರ್ ಡಿಕ್ಕಿ ಹೊಡೆದಿದ್ದು, ಆ ಕಾರು ಪಲ್ಟಿಯಾಗಿದೆ. ಬೈಕ್ ಮೇಲಿಂದ ಸವಾರರು ಕೆಳಗೆ ಬಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾ ಗಿದೆ.ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾನವಿ ಪೊಲೀಸರು ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.