ಬೆಂಗಳೂರು ಗ್ರಾಮಾಂತರ: ಜಲ್ಲಿಕಲ್ಲು ಇದ್ದಿದ್ದರಿಂದ ರಸ್ತೆಗೆ ಪಲ್ಟಿಯಾದ ಯುವತಿಯರಿಬ್ಬರ ಮೇಲೆ ಲಾರಿಯೊಂದು ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವಂತ ಘಟನೆ ಶಿವನಾಪುರ ಕ್ರಾಸ್ ನಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಶಿವನಾಪುರದಲ್ಲಿ ಜಲ್ಲಿಕಲ್ಲು ರಸ್ತೆಯಲ್ಲಿದ್ದ ಕಾರಣ ಸ್ಕಿಡ್ ಆಗಿ ಬೈಕ್ ನಲ್ಲಿ ತೆರಳುತ್ತಿದ್ದಂತ ಇಬ್ಬರು ಯುವತಿಯರು ರಸ್ತೆಗೆ ಬಿದ್ದಿದ್ದಾರೆ. ಇವರ ಹಿಂದೆಯೇ ಬರುತ್ತಿದ್ದಂತ ಕ್ಯಾಂಟರ್ ನಿಯಂತ್ರಣ ಕಳೆದುಕೊಂಡು ಯುವತಿಯರ ಮೇಲೆ ಹರಿದಿದೆ. ಈ ಪರಿಣಾಮ ಯುವತಿಯರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕ್ಯಾಂಟರ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದವರನ್ನು ಶೈಲಾ(25) ಹಾಗೂ ಶ್ವೇತಾ(22) ಎಂಬುದಾಗಿ ಗುರುತಿಸಲಾಗಿದೆ. ಶಿವನಾಪುರ ಕ್ರಾಸ್ ಬಳಿಯಲ್ಲಿ ಸಂಭವಿಸಿದಂತ ಈ ಭೀಕರ ಅಪಘಾತದಲ್ಲಿ ಇಬ್ಬರು ಯುವತಿಯರು ದುರ್ಮರಣ ಹೊಂದಿದ್ದಾರೆ.
ALERT : ಧೂಮಪಾನಿಗಳೇ ಎಚ್ಚರ : `ಸಿಗರೇಟ್’ನಿಂದ ಈ ಗಂಭೀರ ಕಾಯಿಲೆಗಳು ಬರಬಹುದು.!
BREAKING : ಶೀಘ್ರದಲ್ಲೇ ಮದುವೆ ಆಗ್ತೀನಿ : ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್