ಚಿಕ್ಕಮಗಳೂರು: ಲಾರಿ ಹಾಗೂ ಬೊಲೆರೋ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೊಲೆರೋ ವಾಹನದಲ್ಲಿದ್ದಂತ ಓರ್ವ ಸಾವನ್ನಪ್ಪಿ, 7 ಜನರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ದೋರನಾಳು ಬಳಿಯಲ್ಲಿ ಎಂ.ಜಿ ಹಳ್ಳಿಯಿಂದ ಬೊಲೆರೋ ವಾಹನದಲ್ಲಿ ಕಲ್ಲತ್ತಿಗಿರಿಗೆ ತೆರಳುತ್ತಿದ್ದಾಗ ಬೋರ್ ವೆಲ್ ಲಾರಿಗೆ ಬೊಲೆರೋ ವಾಹನ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬೊಲೆರೋ ಮುಂಭಾಗ ನಜ್ಜುಗುಜ್ಜಾಗಿದೆ.
ಈ ಅಪಘಾತದಲ್ಲಿ ಬೊಲೆರೋ ವಾಹನದಲ್ಲಿದ್ದಂತ ಚಂದ್ರು(31) ಎಂಬುವರು ತರೀಕೆರೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ ಬೊಲೆರೋ ವಾಹನದಲ್ಲಿದ್ದಂತ ಇತರೆ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಎಂಜಿ ಹಳ್ಳಿಯಿಂದ ಬೊಲೆರೋ ವಾಹನದಲ್ಲಿ ಕಲ್ಲತ್ತಿಗಿರಿಗೆ ತೆರಳಿದ್ದರು. ಕಲ್ಲತ್ತಿಗಿರಿ ದೇವಸ್ಥಾನದಿಂದ ಊರಿಗೆ ಹಿಂದಿರುಗುವಾಗಿ ಈ ದುರ್ಘಟನೆ ಸಂಭವಿಸಿದೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷರನ್ನಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಮುಂದುವರೆಸಿ ಸರ್ಕಾರ ಆದೇಶ
‘ಪಿಯು ಉಪನ್ಯಾಸಕ’ರ ಹುದ್ದೆಗೆ ಬಡ್ತಿ ನಿರೀಕ್ಷೆಯಲ್ಲಿದ್ದ ‘ಸರ್ಕಾರಿ ಪ್ರೌಢ ಶಾಲಾ ಸಹಶಿಕ್ಷಕ’ರಿಗೆ ಗುಡ್ ನ್ಯೂಸ್








