ಬಳ್ಳಾರಿ: ಜಿಲ್ಲೆಯ ಕುಡುತಿನಿ ಪಟ್ಟಣದ ಸಿದ್ದಮ್ಮನಹಳ್ಳಿಯಲ್ಲಿ ಅನ್ಯಕೋಮಿನ ಯುವಕನನ್ನು ಪ್ರೀತಿ ಮಾಡಿದ್ದಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿರುವ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
BIGG NEWS: ಸಿಲಿಕಾನ್ ಸಿಟಿಯಲ್ಲಿ ನಕಲಿ ದಾಖಲೆ ಪಡೆದು ಪಾಸ್ಪೋರ್ಟ್ ಮಾಡಿಸುತ್ತಿದ್ದ ಗ್ಯಾಂಗ್ ಅರೆಸ್ಟ್
ಘಟನೆ ಬಳಿಕ ತನ್ನ ಮಗಳನ್ನು ಹತ್ಯೆ ಮಾಡಿರುವುದಾಗಿ ತಂದೆ ಓಂಕಾರಗೌಡ ಪೊಲೀಸರ (Police) ಬಳಿ ತಪ್ಪೊಪ್ಪಿಕೊಂಡಿದ್ದಾನೆ.ಅನ್ಯ ಕೋಮಿನ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು, ಈ ಬಗ್ಗೆ ಮನೆಯವರಿಗೆ ಗೊತ್ತಾಗುತ್ತಿದ್ದಂತೆಯೇ ಯುವಕನಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದರು.
ಆದರೆ ಮನೆಯವರ ಮಾತಿಗೆ ಬೆಲೆ ಕೊಡದೆ, ಯುವಕನೊಂದಿಗೆ ಪ್ರೀತಿ ಒಡನಾಟ ಮುಂದುವರಿಸುತ್ತಿದ್ದಳು ಎಂದು ಶಂಕಿಸಿ ಕೊಲೆ ಮಾಡಿದ್ದಾನೆ. ಮಧ್ಯಾಹ್ನ ಮಗಳಿಗೆ ಸಿನಿಮಾ (Cinema) ತೋರಿಸುವುದಾಗಿ ಪುಸಲಾಯಿಸಿ ಬೈಕ್ನಲ್ಲಿ ಮನೆಯಿಂದ ಕರೆದುಕೊಂಡು ಹೋಗಿದ್ದ ಓಂಕಾರಗೌಡ, ಚಿತ್ರಮಂದಿರದ ಬಳಿ ಹೋದಾಗ ಸಿನಿಮಾ ಆರಂಭವಾಗಿತ್ತು.
BIGG NEWS: ಸಿಲಿಕಾನ್ ಸಿಟಿಯಲ್ಲಿ ನಕಲಿ ದಾಖಲೆ ಪಡೆದು ಪಾಸ್ಪೋರ್ಟ್ ಮಾಡಿಸುತ್ತಿದ್ದ ಗ್ಯಾಂಗ್ ಅರೆಸ್ಟ್
ಅಲ್ಲಿಂದ ಹೊಟೇಲ್ಗೆ (Hotel) ಕರೆದೊಯ್ದು ತಿಂಡಿ ತಿನ್ನಿಸಿ, ಬಳಿಕ ದೊಡ್ಡ ಬಸವೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿಸಿದ್ದಾನೆ. ನಂತರ ಆಭರಣದ ಅಂಗಡಿಯಲ್ಲಿ ಒಂದು ಜೊತೆ ಓಲೆ, ಉಂಗುರವನ್ನೂ ಮಗಳಿಗೆ ಕೊಡಿಸಿದ್ದಾನೆ.
ಊರಿಗೆ ಹಿಂದಿರುಗುವ ಹೊತ್ತಿಗೆ ರಾತ್ರಿಯಾಗಿದೆ. ಈ ವೇಳೆ ಎಚ್ಎಲ್ಸಿ ಕಾಲುವೆ ಬಳಿಗೆ ಮಗಳ ಕರೆತಂದು, ನೀರಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ. ಅಕ್ಟೋಬರ್ 31 ರಂದು ನಡೆದಿದ್ದ ಘಟನೆ, ತಡವಾಗಿ ಬೆಳಕಿಗೆ ಬಂದಿದೆ.
BIGG NEWS: ಸಿಲಿಕಾನ್ ಸಿಟಿಯಲ್ಲಿ ನಕಲಿ ದಾಖಲೆ ಪಡೆದು ಪಾಸ್ಪೋರ್ಟ್ ಮಾಡಿಸುತ್ತಿದ್ದ ಗ್ಯಾಂಗ್ ಅರೆಸ್ಟ್