ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯಲ್ಲಿನ ( Dharmapura Hobali ) ಕೆರೆ, 40 ವರ್ಷದ ಬಳಿಕ ಇಂದು ಕೋಡಿ ಬಿದ್ದಿದೆ. ಈ ವೇಳೆ ಕೆರೆಯ ಕೋಡಿಯಲ್ಲಿ ಡಿಜೆ ಹಾಕಿ, ಜನರು ಸಂಭ್ರಮಿಸಿದರು. ಡಿಜೆ ಹಾಡಿಗೆ ಧರ್ಮಪುರ ಕೆರೆ ಕೋಡಿ ನೀರಿನಲ್ಲಿಯೇ ಜನತೆ ಸಖತ್ ಸ್ಟೆಪ್ ಹಾಕಿ ಕುಣಿದು ಸಂಭ್ರಮಿಸಿದರು.
ಚಿತ್ರದುರ್ಗ ಜಿಲ್ಲೆಯ ( Chitradurga District ) ಹಿರಿಯೂರು ತಾಲೂಕಿನಲ್ಲಿ ( Hiriyur Taluk ) ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವಂತ ಮಳೆಯಿಂದಾಗಿ, ಲಕ್ಕನಹಳ್ಳಿ ಬಳಿಯ ದೊಡ್ಡ ಹಣ್ಣ ಮೈತುಂಬಿ ಹರಿಯುತ್ತಿರುವುದರಿಂದ 40 ವರ್ಷಗಳ ಬಳಿಕ ಐತಿಹಾಸಿಕ ಧರ್ಮಪುರ ಕೆರೆ ( Dharmapura Lake ) ಇಂದು ಕೆರೆ ಕೋಡಿ ಬಿದ್ದಿದೆ.
ಚಿತ್ರದುರ್ಗ: ಹಿರಿಯೂರು ನಗರದ ಪೊಲೀಸ್ ಠಾಣೆ ಮುಂಭಾಗದಲ್ಲೇ ರಸ್ತೆ ಗುಂಡಿ, ಕಣ್ ಮುಚ್ಚಿ ಕುಳಿತ ನಗರಸಭೆ
ಅಂದಹಾಗೇ ಐತಿಹಾಸಿಕ ಧರ್ಮಪುರ ಕೆರೆ 1982ರಲ್ಲಿ ಭರ್ತಿಯಾಗಿ, ಕೋಡಿ ಬಿದ್ದು ನೀರು ಹರಿದಿತ್ತು. ಅಲ್ಲದೇ ಸತತ ಎರಡು ತಿಂಗಳ ಕಾಲ ಧರ್ಮಪುರ ಕೆರೆಯ ಕೋಡಿ ನೀರು ಹರಿದಿತ್ತು. ಹೀಗೆ ಕೆರೆ ಕೋಡಿ ನೀರು ಹರಿದ ಕಾರಣ, ಕೆರೆಯ ಕೆಳಭಾಗದಲ್ಲಿನ ಗ್ರಾಮಗಳಾದಂತ ಹಲವು ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರು. ಇದಲ್ಲದೇ ಹಲಗಲದ್ದಿ, ಮದ್ದಿಹಳ್ಳಿ, ಪಿಡಿ ಕೋಟೆ ಗ್ರಾಮದ ವಿದ್ಯಾರ್ಥಿಗಳು ಹಲವು ತಿಂಗಳುಗಟ್ಟಲೇ ಶಾಲಾ-ಕಾಲೇಜಿಗೆ ( School and College ) ಹೋಗದೇ ಇರುವಂತೆ ಆಗಿತ್ತು.
ಕಳೆದ ನಾಲ್ಕೈದು ತಿಂಗಳಿನಿಂದ ಧರ್ಮಪುರ ಹೋಬಳಿಯಲ್ಲಿ ಉತ್ತಮ ಮಳೆಯಾದ ಕಾರಣ, ಬಹುತೇಕ ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಬೇತೂರು, ಮದ್ದೀಹಳ್ಳಿ, ಹಲಗಲದ್ದಿ, ಈಶ್ವರಗೆರೆ ( Eshwaragere ), ಅರಳ್ಳೇಕೆರೆ, ಶ್ರವಣಗೆರೆ, ಸಕ್ಕರ, ಖಂಡೇನಹಳ್ಳಿ ಕೆರೆಗಳು ಕೋಡಿ ಬಿದ್ದಿವೆ.
BIG NEWS: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಸಿಐಡಿಯಿಂದ ಭರ್ಜರಿ ಕಾರ್ಯಾಚರಣೆ, 25 ಮಂದಿ ಅರೆಸ್ಟ್
ಇಂದು ಧರ್ಮಪುರ ಹೋಬಳಿಯಲ್ಲೇ ಅತೀ ದೊಡ್ಡಕೆರೆ ಎನಿಸಿಕೊಂಡಿರುವಂತ ಧರ್ಮಪುರ ಕೆರೆ, ಭರ್ತಿಯಾಗಿ ಕೋಡಿ ಬಿದ್ದಿದ್ದು, ರೈತರ ಮುಖದಲ್ಲಿ ಸಂತಸ ಮನೆ ಮಾಡುವಂತೆ ಆಗಿದೆ. ಇದೇ ಖುಷಿಯಲ್ಲಿ ಕೆರೆ ಕೋಡಿಯಲ್ಲಿ ಡಿಜೆ ಮೂಲಕ ಹಾಡು ಹಾಕಿಸಿ, ಕುಣಿದು ಕುಪ್ಪಳಿಸಿ, ಸಂಭ್ರಮಿಸಿದ್ದಾರೆ. ಆ ವೀಡಿಯೋ ಈ ಕೆಳಗಿನ ಟ್ವಿಟ್ಟರ್ ಲಿಂಕ್ ನಲ್ಲಿದೆ ನೋಡಿ.
ವರದಿ : ವಸಂತ ಬಿ ಈಶ್ವರಗೆರೆ
40 ವರ್ಷಗಳ ಬಳಿಕ ಕೋಡಿ ಬಿದ್ದ ಹಿರಿಯೂರು ತಾಲೂಕಿನ ಐತಿಹಾಸಿಕ ಧರ್ಮಪುರ ಕೆರೆ. ಕೋಡಿ ನೀರಿನಲ್ಲಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ ಜನತೆ.#DharmapuraLake #KannadaNews #DharmapuraKere #KarnatakaNews #LatestNews @kannadanewsnow pic.twitter.com/KnWJb7RuTb
— Vasantha B Eshwaragere (@vasanthabeshwar) October 19, 2022